Shahid Kapoor: ದಕ್ಷಿಣ ಭಾರತದವರು ವಿಶಾಲ ಹೃದಯದಿಂದ ಹಿಂದಿ ಸಿನಿಮಾ ನೋಡಬೇಕು ಎಂದ ಶಾಹಿದ್​ ಕಪೂರ್​

Hindi Movies: ‘ಹೆಚ್ಚಿನ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರಿಗೂ ಒಂದೇ ರೀತಿಯ ಮನೋಭಾವ ಇರಬೇಕು’ ಎಂದು ಶಾಹಿದ್​ ಕಪೂರ್​ ಹೇಳಿದ್ದಾರೆ.

Shahid Kapoor: ದಕ್ಷಿಣ ಭಾರತದವರು ವಿಶಾಲ ಹೃದಯದಿಂದ ಹಿಂದಿ ಸಿನಿಮಾ ನೋಡಬೇಕು ಎಂದ ಶಾಹಿದ್​ ಕಪೂರ್​
ಶಾಹಿದ್​ ಕಪೂರ್​
Follow us
ಮದನ್​ ಕುಮಾರ್​
|

Updated on: Jun 08, 2023 | 8:05 PM

ನಟ ಶಾಹಿದ್​ ಕಪೂರ್​ (Shahid Kapoor) ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಇದೆ. ಅವರು ಈಗ ವೆಬ್​ ಸಿರೀಸ್​ ಲೋಕದಲ್ಲೂ ಖ್ಯಾತಿ ಹೊಂದಿದ್ದಾರೆ. ಇತ್ತೀಚೆಗೆ ತೆರಕಂಡ ‘ಫರ್ಜಿ’ ವೆಬ್​ ಸರಣಿಯಿಂದ ಅವರ ಖ್ಯಾತಿ ಹೆಚ್ಚಾಯಿತು. ಈಗ ಅವರು ನಟಿಸಿರುವ ‘ಬ್ಲಡಿ ಡ್ಯಾಡಿ’ (Bloody Daddy) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕುರಿತು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಹಿದ್​ ಕಪೂರ್​ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ವರ್ಸಸ್​ ಸೌತ್​ ಫಿಲ್ಮ್​ ಇಂಡಸ್ಟ್ರಿ ಎಂಬ ವಾದ ನಡೆಯುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ಎದುರಿನಲ್ಲಿ ಹಿಂದಿ ಸಿನಿಮಾಗಳು ಮುಗ್ಗರಿಸುತ್ತಿವೆ. ಬೆರಳೆಣಿಕೆಯಷ್ಟು ಬಾಲಿವುಡ್​ (Bollywood) ಸಿನಿಮಾಗಳು ಮಾತ್ರ ಗೆಲುವು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರೇಕ್ಷಕರು ಹಿಂದಿ ಸಿನಿಮಾಗಳನ್ನು ವಿಶಾಲ ಹೃದಯದಿಂದ ನೋಡಬೇಕು ಎಂದು ಶಾಹಿದ್​ ಕಪೂರ್​ ಹೇಳಿದ್ದಾರೆ.

‘ಯಾವುದೇ ಭೇದ ಭಾವ ಇರಬಾರದು. ಹಿಂದಿ ಪ್ರೇಕ್ಷಕರು ದಕ್ಷಿಣ ಭಾರತದ ಸಿನಿಮಾಗಳನ್ನು ವಿಶಾಲ ಹೃದಯದಿಂದ ಸ್ವೀಕರಿಸಿದ ಹಾಗೆಯೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಪ್ರೇಕ್ಷಕರು ಹಿಂದಿ ಸಿನಿಮಾಗಳನ್ನು ವೀಕ್ಷಿಸಬೇಕು. ಅವರಿಗೂ ವಿಶಾಲ ಹೃದಯ ಇರಬೇಕು. ಗುಣಮಟ್ಟ ಹೆಚ್ಚಿಸುವ ಸಲುವಾಗಿ, ಹೆಚ್ಚಿನ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರಿಗೂ ಒಂದೇ ರೀತಿಯ ಮನೋಭಾವ ಇರಬೇಕು’ ಎಂದು ಶಾಹಿದ್​ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅರ್ಜುನ್​ ರೆಡ್ಡಿ’, ‘ಜೆರ್ಸಿ’ ಬಳಿಕ ಮತ್ತೊಂದು ಸೂಪರ್​ ಹಿಟ್​ ಚಿತ್ರದ ಮೇಲೆ ಶಾಹಿದ್​ ಕಪೂರ್​ ಕಣ್ಣು

ಆ್ಯಕ್ಷನ್​ ಥ್ರಿಲ್ಲರ್​ ಶೈಲಿಯಲ್ಲಿ ‘ಬ್ಲಡಿ ಡ್ಯಾಡಿ’ ಸಿನಿಮಾ ಮೂಡಿಬಂದಿದೆ. ಜೂನ್​ 9ರಂದು ಈ ಸಿನಿಮಾ ಜಿಯೋ ಸಿನಿಮಾ ಮೂಲಕ ಸ್ಟ್ರೀಮ್​ ಆಗಲಿದೆ. ಬಾಲಿವುಡ್​ನ ಆ್ಯಕ್ಷನ್​ ಸಿನಿಮಾಗಳ ಕುರಿತು ಶಾಹಿದ್​ ಕಪೂರ್​ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಕೊವಿಡ್​ ಕಾರಣದಿಂದ ಹಿಂದಿ ಚಿತ್ರರಂಗದವರು ದೊಡ್ಡ ಆ್ಯಕ್ಷನ್​ ಸಿನಿಮಾಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆ ಸಂದರ್ಭದಲ್ಲಿ ಸಾಹಸಪ್ರಧಾನ ಕತೆಯುಳ್ಳ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲಿಲ್ಲ’ ಎಂದು ಅವರು ಹೇಳಿದ್ದಾರೆ. ಸಾಹಸಮಯ ಸಿನಿಮಾ ಮಾಡುವ ಅಕ್ಷಯ್​ಕುಮಾರ್​, ಹೃತಿಕ್​ ರೋಷನ್​, ಸಲ್ಮಾನ್​ ಖಾನ್​ ಮುಂತಾದ ಹೀರೋಗಳ ಬಗ್ಗೆ ಶಾಹಿದ್​ ಕಪೂರ್​ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಧರಿಸದೇ ರಸ್ತೆಗೆ ಬಂದ್ರಾ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​? ನೆಟ್ಟಿಗರಿಂದ ವ್ಯಂಗ್ಯದ ಪ್ರಶ್ನೆ

ಹಿಂದಿ ಸಿನಿಮಾಗಳ ಸೋಲಿಗೆ ಅನೇಕ ಕಾರಣಗಳು ಇವೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ತಿಳಿಸಿದ್ದಾರೆ. ಒಳ್ಳೆಯ ಸಿನಿಮಾ ಬಂದರೆ ಅಥವಾ ಪ್ರೇಕ್ಷಕರಿಗೆ ಮೆಚ್ಚುಗೆಯಾದರೆ ಭಾಷೆಯ ಭೇದ ಇಲ್ಲದೇ ಸಿನಿಮಾಗಳು ಗೆಲ್ಲುತ್ತವೆ ಎಂಬುದಕ್ಕೆ ಈಗಾಗಲೇ ಅನೇಕ ಉದಾಹರಣೆಗಳು ಸಿಕ್ಕಿವೆ. ಮುಂಬರುವ ದಿನಗಳಲ್ಲಿ ಬಾಲಿವುಡ್​ ಮಂದಿ ಕೂಡ ನಿರೀಕ್ಷಿತ ರೀತಿಯಲ್ಲಿ ಗೆಲುವು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು