Ranbir Kapoor: ಬಡ ಮಕ್ಕಳಿಗಾಗಿ ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ ಉಚಿತವಾಗಿ ನೀಡಲು ಮುಂದಾದ ನಟ ರಣಬೀರ್​ ಕಪೂರ್​

Adipurush Movie tickets: ರಣಬೀರ್​ ಕಪೂರ್​ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ. ಹಾಗಿದ್ದರೂ ಕೂಡ ಅವರು ಈ ಕೆಲಸ ಮಾಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

Ranbir Kapoor: ಬಡ ಮಕ್ಕಳಿಗಾಗಿ ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ ಉಚಿತವಾಗಿ ನೀಡಲು ಮುಂದಾದ ನಟ ರಣಬೀರ್​ ಕಪೂರ್​
ಪ್ರಭಾಸ್​, ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Jun 08, 2023 | 7:07 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಆದಿಪುರುಷ್​’ (Adipurush) ಚಿತ್ರದ ಹೆಸರು ಮುಂಚೂಣಿಯಲ್ಲಿದೆ. ಓಂ ರಾವತ್​ ನಿರ್ದೇಶನದ ಈ ಸಿನಿಮಾ ಜೂನ್​ 16ರಂದು ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದೆ ಎಂಬುದು ವಿಶೇಷ. ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿದ್ಧವಾಗಿದೆ. ಆದ್ದರಿಂದ ಜನರಿಗೆ ಮತ್ತು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ಭಾವನೆ ಮೂಡಿದೆ. ಈ ಚಿತ್ರದಲ್ಲಿ ಪ್ರಭಾಸ್ (Prabhas)​ ಅವರು ರಾಮನಾಗಿ ನಟಿಸಿದ್ದು, ಸೀತೆ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಿದ್ದಾರೆ. ಮೊದಲ ದಿನ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಕೌತುಕ ಮೂಡಿದೆ. ಈ ನಡುವೆ ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್​ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್​ ಕಪೂರ್​ (Ranbir Kapoor) ಅವರು ಬರೋಬ್ಬರಿ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ತಿಳಿಸುವ ಸಲುವಾಗಿ ಒಂದು ಪೋಸ್ಟರ್​ ಶೇರ್​ ಮಾಡಿಕೊಳ್ಳಲಾಗಿದೆ. ‘ಬಡ ಮಕ್ಕಳಿಗಾಗಿ ರಣಬೀರ್​ ಕಪೂರ್​ ಅವರು ಆದಿಪುರುಷ್​ ಸಿನಿಮಾದ 10 ಸಾವಿರ ಟಿಕೆಟ್​ಗಳನ್ನು ಬುಕ್​ ಮಾಡಲಿದ್ದಾರೆ’ ಎಂದು ಈ ಪೋಸ್ಟರ್​ನಲ್ಲಿ ಬರೆಯಲಾಗಿದೆ. ಅವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಣಬೀರ್​ ಕಪೂರ್​ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ. ಹಾಗಿದ್ದರೂ ಕೂಡ ಅವರು ಈ ಕೆಲಸ ಮಾಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ರಣಬೀರ್​ ಕಪೂರ್​ ರೀತಿಯೇ ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್​ವಾಲ್ ಅವರು ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ‘ಆದಿಪುರುಷ್ ಜೀವಮಾನದಲ್ಲಿ ಒಮ್ಮೆ ನೋಡಲೇಬೇಕಾದ ಸಿನಿಮಾ. ಇದನ್ನು ಎಲ್ಲರೂ ಸಂಭ್ರಮಿಸಲೇಬೇಕು. ಭಗವಾನ್ ಶ್ರೀರಾಮನ ಮೇಲಿನ ಅಪಾರ ಭಕ್ತಿಯಿಂದ ತೆಲಂಗಾಣದಾದ್ಯಂತ ಇರುವ ಸರ್ಕಾರಿ ಶಾಲೆಗಳು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ 10,000+ ಟಿಕೆಟ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇನೆ. ಟಿಕೆಟ್‌ಗಳನ್ನು ಪಡೆಯಲು ನಿಮ್ಮ ವಿವರಗಳೊಂದಿಗೆ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ. ಜೈ ಶ್ರೀರಾಮ್ ಘೋಷಣೆಗಳು ಎಲ್ಲಾ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Alia Bhatt: ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್​ ಕಪೂರ್​?

‘ಆದಿಪುರುಷ್​’ ಸಿನಿಮಾ ಪ್ರದರ್ಶನ ಕಾಣುವ ಎಲ್ಲ ಚಿತ್ರಮಂದಿರಗಳಲ್ಲೂ ಆಂಜನೇಯನಿಗಾಗಿ ಒಂದು ಸೀಟ್​ ಮೀಸಲಿಡಲು ತೀರ್ಮಾನಿಸಲಾಗಿದೆ. ಚಿತ್ರತಂಡದವರು ಈ ರೀತಿ ಮಾಡಲು ಒಂದು ಸ್ಪೆಷಲ್​ ಕಾರಣ ಇದೆ. ಇದು ಅಪ್ಪಟ ನಂಬಿಕೆಗೆ ಸಂಬಂಧಿಸಿದ ವಿಚಾರ. ಎಲ್ಲಿ ರಾಮನ ಆರಾಧನೆ ಮಾಡಲಾಗುತ್ತೋ ಅಲ್ಲಿ ಆಂಜನೇಯ ಬರುತ್ತಾನೆ ಎಂಬ ನಂಬಿಕೆ ಇದೆ. ‘ಆದಿಪುರುಷ್​’ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ಈ ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಹಲವರಿಗೆ ಇದೆ. ಆ ಕಾರಣದಿಂದ ಒಂದು ಸೀಟನ್ನು ಪವನ ಪುತ್ರನಿಗಾಗಿ ಮೀಸಲಿಡಲಾಗುವುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ