AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್​ ಕಪೂರ್​?

Ranbir Kapoor: ಆಲಿಯಾ ಭಟ್​ ಉತ್ತಮ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ. ಸೀತೆ ಪಾತ್ರಕ್ಕೆ ಅವರೇ ಯಾಕೆ ಸೂಕ್ತ ಎಂಬುದಕ್ಕೆ ಅಭಿಮಾನಿಗಳು ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

Alia Bhatt: ರಾಮಾಯಣ ಕಥೆ ಆಧರಿತ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಸೀತೆ ಪಾತ್ರ; ರಾಮನಾಗಿ ರಣಬೀರ್​ ಕಪೂರ್​?
ಆಲಿಯಾ ಭಟ್​
ಮದನ್​ ಕುಮಾರ್​
|

Updated on: Jun 08, 2023 | 6:23 PM

Share

ಪೌರಾಣಿಕ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಎಲ್ಲ ಕಾಲಕ್ಕೂ ಅನ್ವಯ ಆಗುವಂತಹ ಸಂದೇಶ ಈ ಕಥೆಗಳಲ್ಲಿ ಇವೆ. ಹಾಗಾಗಿ ರಾಮಾಯಣ (Ramayana) ಹಾಗೂ ಮಹಾಭಾರತ ಆಧರಿಸಿ ಅನೇಕ ಸಿನಿಮಾಗಳು ತಯಾರಾಗುತ್ತಲೇ ಇವೆ. ಒಂದೆಡೆ ರಾಮಾಯಣ ಆಧಾರಿತ ‘ಆದಿಪುರುಷ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದೆಡೆ ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಕೂಡ ರಾಮಾಯಣದ ಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಸೀತೆ ಪಾತ್ರದಲ್ಲಿ ಆಲಿಯಾ ಭಟ್​ (Alia Bhatt) ಹಾಗೂ ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಎಲ್ಲವೂ ಅಂತೆ-ಕಂತೆಯ ಹಂತದಲ್ಲೇ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಆಲಿಯಾ ಭಟ್​ ಉತ್ತಮ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅಭಿಮಾನಿಗಳು ಅವರ ನಟನೆ ಕಂಡು ಫಿದಾ ಆಗಿದ್ದಾರೆ. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಆಲಿಯಾ ಭಟ್​ ಅವರಿಗೆ ಸಲ್ಲುತ್ತದೆ. ಸೀತೆ ಪಾತ್ರಕ್ಕೆ ಅವರೇ ಯಾಕೆ ಸೂಕ್ತ ಎಂಬುದಕ್ಕೆ ಅಭಿಮಾನಿಗಳು ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಮೊದಲನೆಯದಾಗಿ ಆಲಿಯಾ ಅವರ ನಟನೆ. ಎರಡನೆಯದಾಗಿ ಅವರ ಹೈಟ್​. ಮೂರನೇ ಕಾರಣ ಏನೆಂದರೆ ‘ಆರ್​ಆರ್​ಆರ್​’ ಚಿತ್ರದಲ್ಲಿ ಅವರು ಸೀತಾ ಎಂಬ ಪಾತ್ರ ಮಾಡಿ ಜನರಿಗೆ ಹತ್ತಿರ ಆಗಿದ್ದಾರೆ.

Alia Bhatt: ವಿವಾಹ ವಾರ್ಷಿಕೋತ್ಸವಕ್ಕೆ ಮುದ್ದಿನ ಪತ್ನಿಗೆ 10 ಲಕ್ಷ ರೂ. ಬೆಲೆಯ ಬ್ಯಾಗ್​ ಗಿಫ್ಟ್​ ನೀಡಿದ ರಣಬೀರ್​ ಕಪೂರ್​

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ನಿಜಜೀವನದಲ್ಲಿ ಪತಿ-ಪತ್ನಿ ಆಗಿರುವುದು ನಾಲ್ಕನೇ ಕಾರಣ. ಹಾಗಾಗಿ ಅವರು ರಾಮ-ಸೀತೆ ಪಾತ್ರದಲ್ಲಿ ನಟಿಸಿದರೆ ಅಭಿನಯ ಸಹಜವಾಗಿ ಮೂಡಿಬರುತ್ತದೆ ಎಂಬುದು ಅನೇಕರ ವಾದ. ಆದ್ದರಿಂದ ಈ ಜೋಡಿಯ ಆಯ್ಕೆ ಸರಿಯಾಗಿದೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿ ನಟಿಸಿದ ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಪ್ರೇಕ್ಷಕರು ಈಗಾಗಲೇ ಇಷ್ಟಪಟ್ಟಿದ್ದಾರೆ. ಅದೇ ರೀತಿ ರಾಮಾಯಣ ಕಥೆಯಾಧಾರಿತ ಚಿತ್ರದಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್​ ಕಪೂರ್​

ರಾಮನ ಪಾತ್ರಕ್ಕಾಗಿ ರಣಬೀರ್​ ಕಪೂರ್​ ಅವರು ಲುಕ್​ ಟೆಸ್ಟ್​ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಇದೇ ಸಿನಿಮಾದಲ್ಲಿನ ಇನ್ನೊಂದು ಪಾತ್ರದಲ್ಲಿ ನಟಿಸುವಂತೆ ‘ರಾಕಿಂಗ್​ ಸ್ಟಾರ್​’ ಯಶ್​ಗೆ ಆಫರ್​ ನೀಡಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಎಲ್ಲ ಗಾಸಿಪ್​ಗಳ ಬಗ್ಗೆ ಆದಷ್ಟು ಬೇಗ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್​ ಕಾದಿದ್ದಾರೆ. ಯಶ್​ ಅವರ 19ನೇ ಸಿನಿಮಾ ಯಾವಾಗ ಅನೌನ್ಸ್​ ಆಗಲಿದೆ ಎಂಬ ಬಗ್ಗೆಯೂ ಕೌತುಕ ಮನೆ ಮಾಡಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More