AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್​ ಕಪೂರ್​

Animal Movie | Ranbir Kapoor Daughter: ಆಗಸ್ಟ್​ ತಿಂಗಳಲ್ಲಿ ‘ಅನಿಮಲ್​’ ಸಿನಿಮಾ ರಿಲೀಸ್​ ಆಗಲಿದೆ. ಆ ಬಳಿಕ ರಣಬೀರ್ ಕಪೂರ್​ ಅವರು ಮಗಳಿಗಾಗಿ ಫುಲ್​ ಬಿಡುವು ಮಾಡಿಕೊಳ್ಳಲಿದ್ದಾರೆ.

Ranbir Kapoor: ಮಗಳ ಮೇಲಿನ ಪ್ರೀತಿಗೆ ಸಿನಿಮಾ ಕೆಲಸಗಳಿಂದ ದೂರ ಇರಲು ನಿರ್ಧರಿಸಿದ ರಣಬೀರ್​ ಕಪೂರ್​
ರಣಬೀರ್ ಕಪೂರ್
ಮದನ್​ ಕುಮಾರ್​
|

Updated on: Mar 09, 2023 | 8:00 AM

Share

ಬಾಲಿವುಡ್​ ನಟ ರಣಬೀರ್​ ಕಪೂರ್ (Ranbir Kapoor)​ ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಮದುವೆ ನಂತರ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​ ಆಗಿದ್ದಾರೆ. ಮಗಳು ಜನಿಸಿದ ಮೇಲಂತೂ ಅವರು ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. 2022ರ ಏಪ್ರಿಲ್​ 14ರಂದು ಆಲಿಯಾ ಭಟ್​ (Alia Bhatt) ಜೊತೆ ರಣಬೀರ್​ ಕಪೂರ್​ ಮದುವೆ ನೆರವೇರಿತು. ಅದೇ ವರ್ಷ ನವೆಂಬರ್​ನಲ್ಲಿ ಅವರಿಗೆ ಹೆಣ್ಣು ಮಗು (Ranbir Kapoor Daughter) ಜನಿಸಿತು. ಮಗಳಿಗೆ ರಾಹಾ ಎಂದು ಹೆಸರು ಇಟ್ಟಿದ್ದಾರೆ. ಈವರೆಗೂ ಮಗಳ ಫೋಟೋವನ್ನು ಈ ದಂಪತಿ ರಿವೀಲ್​ ಮಾಡಿಲ್ಲ. ಮುದ್ದಿನ ಪುತ್ರಿಯ ಜೊತೆಗೆ ಹೆಚ್ಚು ಕಾಲ ಕಳೆಯಬೇಕು ಎಂಬ ಆಸೆ ರಣಬೀರ್​ ಕಪೂರ್​ ಅವರಿಗೆ ಇದೆ. ಹಾಗಾಗಿ ಅವರು ಹೆಚ್ಚಿನ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಅನಿಮಲ್​’ ಚಿತ್ರ ತೆರೆಕಂಡ ಬಳಿಕ ಅವರು ನಟನೆಯಿಂದ ಬ್ರೇಕ್​ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ರಣಬೀರ್​ ಕಪೂರ್​ ಅವರಿಗೆ ಸಖತ್​ ಬೇಡಿಕೆ ಇದೆ. ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳುವ ಧಾವಂತ ಅವರಿಗೆ ಇಲ್ಲ. ಶ್ರದ್ಧಾ ಕಪೂರ್​ ಜೊತೆ ಅವರು ನಟಿಸಿರುವ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ಮಾರ್ಚ್​ 8ರಂದು ರಿಲೀಸ್​ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಗಸ್ಟ್​ ತಿಂಗಳಲ್ಲಿ ‘ಅನಿಮಲ್​’ ಸಿನಿಮಾ ರಿಲೀಸ್​ ಆಗಲಿದೆ. ಆ ಬಳಿಕ ರಣಬೀರ್ ಕಪೂರ್​ ಫುಲ್​ ಬಿಡುವು ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: Ranbir Kapoor: ಸೌರವ್​ ಗಂಗೂಲಿ, ಕಿಶೋರ್​ ಕುಮಾರ್​ ಬಯೋಪಿಕ್​ ಬಗ್ಗೆ ಬಾಯ್ಬಿಟ್ಟ ನಟ ರಣಬೀರ್​ ಕಪೂರ್​

ಇದನ್ನೂ ಓದಿ
Image
Alia Bhatt: ಪತ್ನಿ ಆಲಿಯಾ ಗರ್ಭಿಣಿ, ಆದ್ರೆ ಬೇರೆ ನಟಿ ಜೊತೆ ಹೆಚ್ಚಿತು ರಣಬೀರ್​ ಹಾಟ್ನೆಸ್​; ಎಚ್ಚರಿಕೆ ನೀಡಿದ ಫ್ಯಾನ್ಸ್
Image
Brahmastra: ಶಿವ ಎಂಬ ಪಾತ್ರ ಮಾಡಿ, ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ರಣಬೀರ್​; ಇದು ‘ಬ್ರಹ್ಮಾಸ್ತ್ರ’ ಎಡವಟ್ಟು
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರಣಬೀರ್​ ಕಪೂರ್​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಹೊಸ ಕಥೆ ಕೇಳುತ್ತೇನೆ. ಆದರೆ ಸಿನಿಮಾ ಒಪ್ಪಿಕೊಳ್ಳುವಲ್ಲಿ ನನಗೆ ಅವಸರ ಇಲ್ಲ. ಮನೆಯಲ್ಲಿ ಮಗಳು ಇದ್ದಾಳೆ. ಆಕೆಯ ಜೊತೆ ಒಂದು ವರ್ಷ ಸುಮ್ಮನೆ ಕಾಲ ಕಳೆದರೂ ನನಗೆ ಖುಷಿ ಎನಿಸುತ್ತದೆ. ‘ಅನಿಮಲ್​’ ಮತ್ತು ‘ಬ್ರಹ್ಮಾಸ್ತ್ರ 2’ ಹೊರತಾಗಿ ನನ್ನ ಕೈಯಲ್ಲಿ ಬೇರೆ ಯಾವುದೇ ಸಿನಿಮಾಗಳು ಇಲ್ಲ’ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: Ranbir Kapoor: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್​​ ಎಸೆದ ರಣಬೀರ್​ ಕಪೂರ್​; ವಿಡಿಯೋ ವೈರಲ್​

ಹಿಂದಿಯಲ್ಲಿ ‘ಧೂಮ್​’ ಸರಣಿಯ ಚಿತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಧೂಮ್​ 4’ ಸಿನಿಮಾದಲ್ಲಿ ರಣಬೀರ್​ ಕಪೂರ್​ ನಟಿಸಬಹುದು ಎಂಬ ಗಾಸಿಪ್​ ಹರಿದಾಡುತ್ತಿದೆ. ಅಲ್ಲದೇ ರಾಮಾಯಣ ಕಥೆಯಾಧಾರಿತ ಸಿನಿಮಾದಿಂದಲೂ ಅವರಿಗೆ ಆಫರ್​ ಹೋಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ ಆ ಎಲ್ಲ ಗಾಸಿಪ್​ಗಳನ್ನು ರಣಬೀರ್​ ಕಪೂರ್​ ಅವರು ತಳ್ಳಿ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್