AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir Kapoor: ಸೌರವ್​ ಗಂಗೂಲಿ, ಕಿಶೋರ್​ ಕುಮಾರ್​ ಬಯೋಪಿಕ್​ ಬಗ್ಗೆ ಬಾಯ್ಬಿಟ್ಟ ನಟ ರಣಬೀರ್​ ಕಪೂರ್​

Sourav Ganguly Biopic: ‘ಸೌರವ್​ ಗಂಗೂಲಿ ಅವರು ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಜೀವಂತ ದಂತಕಥೆ. ಅವರ ಬಯೋಪಿಕ್​ ತುಂಬ ವಿಶೇಷವಾಗಿ ಇರಲಿದೆ’ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

Ranbir Kapoor: ಸೌರವ್​ ಗಂಗೂಲಿ, ಕಿಶೋರ್​ ಕುಮಾರ್​ ಬಯೋಪಿಕ್​ ಬಗ್ಗೆ ಬಾಯ್ಬಿಟ್ಟ ನಟ ರಣಬೀರ್​ ಕಪೂರ್​
ಸೌರವ್ ಗಂಗೂಲಿ, ರಣಬೀರ್ ಕಪೂರ್
ಮದನ್​ ಕುಮಾರ್​
|

Updated on: Feb 27, 2023 | 7:00 AM

Share

ನಟ ರಣಬೀರ್​ ಕಪೂರ್​ (Ranbir Kapoor) ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಕಾಳಜಿ ವಹಿಸುತ್ತಾರೆ. ಅದರಲ್ಲೂ ಬಯೋಪಿಕ್​ ಮಾಡುವಾಗ ಹೆಚ್ಚು ಅಲರ್ಟ್​ ಆಗಿರುತ್ತಾರೆ. ಸಂಜಯ್​ ದತ್​ ಜೀವನ ಆಧರಿಸಿದ ‘ಸಂಜು’ ಸಿನಿಮಾದಲ್ಲಿ ರಣಬೀರ್​ ಕಪೂರ್​ ನಟಿಸಿದ್ದರು. ಆ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಆ ಬಳಿಕ ಇನ್ನಿತರ ಬಯೋಪಿಕ್​ಗಳಲ್ಲಿ ನಟಿಸಲು ರಣಬೀರ್​ ಕಪೂರ್​ ಅವರೇ ಸೂಕ್ತ ಎಂಬ ಅಭಿಪ್ರಾಯ ಅಭಿಮಾನಿಗಳ ವಲಯದಿಂದ ಕೇಳಿಬರಲು ಆರಂಭಿಸಿತು. ಈಗ ಸೌರವ್​ ಗಂಗೂಲಿ  (Sourav Ganguly) ಜೊತೆ ರಣಬೀರ್ ಕಪೂರ್​ ಅವರು ಕ್ರಿಕೆಟ್​ ಆಡಿದ ಫೋಟೋಗಳು ವೈರಲ್​ ಆಗಿವೆ. ಹಾಗಾಗಿ ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ (Sourav Ganguly Biopic) ರಣಬೀರ್​ ಕಪೂರ್​ ನಟಿಸಬಹುದೇ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಆ ರೀತಿಯ ಯಾವುದೇ ಆಫರ್​ ಬಂದಿಲ್ಲ’ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

ರಣಬೀರ್​ ಕಪೂರ್ ಅಭಿನಯದ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್​ ಸಲುವಾಗಿ ಅವರು ಕೊಲ್ಕತ್ತಾಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರು ಸೌರವ್​ ಗಂಗೂಲಿ ಜೊತೆ ಸಮಯ ಕಳೆದಿದ್ದಾರೆ. ಅವರಿಬ್ಬರು ಜೊತೆಯಾಗಿ ಕ್ರಿಕೆಟ್​ ಆಡಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ವೈರಲ್​ ಆಗಿವೆ. ಆದರೆ ಸೌರವ್​ ಗಂಗೂಲಿ ಜೀವನಾಧಾರಿತ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ರಣಬೀರ್​ ಕಪೂರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Ranbir Kapoor: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್​​ ಎಸೆದ ರಣಬೀರ್​ ಕಪೂರ್​; ವಿಡಿಯೋ ವೈರಲ್​

ಇದನ್ನೂ ಓದಿ
Image
ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು
Image
ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ
Image
ದ್ರಾವಿಡ್​ ಬಯೋಪಿಕ್​ನಲ್ಲಿ ಸುದೀಪ್ ಮುಖ್ಯಭೂಮಿಕೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್​ ಖಾನ್
Image
ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ

‘ದಾದಾ (ಸೌರವ್​ ಗಂಗೂಲಿ) ಅವರು ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಜೀವಂತ ದಂತಕಥೆ. ಅವರ ಬಯೋಪಿಕ್​ ತುಂಬ ವಿಶೇಷವಾಗಿ ಇರಲಿದೆ. ದುರಾದೃಷ್ಟ ಎಂದರೆ ನನಗೆ ಯಾವುದೇ ಆಫರ್​ ಬಂದಿಲ್ಲ. ನಿರ್ದೇಶಕರು ಇನ್ನೂ ಸ್ಕ್ರಿಪ್ಟ್​ ಬರೆಯುತ್ತಿ​ದ್ದಾರೆ ಎನಿಸುತ್ತದೆ’ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: Ranbir Kapoor: ‘ಅನಿಮಲ್​’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ರಗಡ್​ ಅವತಾರದಲ್ಲಿ ರಣಬೀರ್​ ಕಪೂರ್​

ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರ ಜೀವನಾಧಾರಿತ ಸಿನಿಮಾದಲ್ಲಿ ರಣಬೀರ್​ ಕಪೂರ್​ ನಟಿಸುತ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದೆ. ಆ ಬಗ್ಗೆ ಅವರೀಗ ಮೌನ ಮುರಿದಿದ್ದಾರೆ. ‘ನಾನು ಕಳೆದ 11 ವರ್ಷಗಳಿಂದ ಕಿಶೋರ್​ ಕುಮಾರ್​ ಅವರ ಬಯೋಪಿಕ್​ ಮೇಲೆ ಕೆಲಸ ಮಾಡುತ್ತಿದ್ದೇನೆ. ಅನುರಾಗ್​ ಬಸು ಜೊತೆ ಸೇರಿಕೊಂಡು ನಾವು ಸ್ಕ್ರಿಪ್ಟ್​ ಬರೆಯುತ್ತಿದ್ದೇವೆ. ನಾನು ಮಾಡುವ ಮುಂದಿನ ಬಯೋಪಿಕ್​ ಅದೇ ಆಗಿರಲಿದೆ ಎಂಬ ಭರವಸೆ ಇದೆ. ಆದರೆ ದಾದಾ ಬಗ್ಗೆ ಬಯೋಪಿಕ್​ ಆಗಲಿದೆ ಎಂಬುದು ನನಗೆ ಈವರೆಗೆ ತಿಳಿದಿರಲಿಲ್ಲ’ ಎಂದಿದ್ದಾರೆ ರಣಬೀರ್​ ಕಪೂರ್​.

‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ಮಾರ್ಚ್​ 8ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರಿಗೆ ಜೋಡಿಯಾಗಿ ಶ್ರದ್ಧಾ ಕಪೂರ್​ ನಟಿಸಿದ್ದಾರೆ. ಲವ್​ ರಂಜನ್​ ನಿರ್ದೇಶನ ಮಾಡಿದ್ದಾರೆ. ಇದು 2023ರಲ್ಲಿ ತೆರೆ ಕಾಣುತ್ತಿರುವ ರಣಬೀರ್​ ಕಪೂರ್​ ಅವರ ಮೊದಲ ಸಿನಿಮಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ