Ranbir Kapoor: ‘ಅನಿಮಲ್​’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ರಗಡ್​ ಅವತಾರದಲ್ಲಿ ರಣಬೀರ್​ ಕಪೂರ್​

Animal Movie First Look: ‘ಅರ್ಜುನ್​ ರೆಡ್ಡಿ’ ಖ್ಯಾತಿಯ ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್​ 11ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

Ranbir Kapoor: ‘ಅನಿಮಲ್​’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ರಗಡ್​ ಅವತಾರದಲ್ಲಿ ರಣಬೀರ್​ ಕಪೂರ್​
‘ಅನಿಮಲ್’ ಚಿತ್ರದ ಫಸ್ಟ್ ಲುಕ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 01, 2023 | 11:31 AM

ಖ್ಯಾತ ನಟ ರಣಬೀರ್​ ಕಪೂರ್​ (Ranbir Kapoor) ಅವರು 2022ರಲ್ಲಿ ಭರ್ಜರಿ ಗೆಲುವು ಕಂಡರು. ಅವರು ನಟಿಸಿದ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ 2023ರ ಹೊಸ ವರ್ಷವನ್ನು ಕೂಡ ಹೊಸ ಭರವಸೆಯೊಂದಿಗೆ ಅವರು ಶುರು ಮಾಡಿದ್ದಾರೆ. ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾದ (Animal Movie) ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಈ ಪೋಸ್ಟರ್​ನಲ್ಲಿ ಅವರು ಸಖತ್​ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಡಿ.31ರ ಮಧ್ಯರಾತ್ರಿ ಈ ಫಸ್ಟ್​ ಲುಕ್​ ಅನಾವರಣ ಮಾಡಲಾಗಿದೆ. ರಣಬೀರ್​ ಕಪೂರ್​ ಅಭಿಮಾನಿಗಳ ವಲಯದಲ್ಲಿ ‘ಅನಿಮಲ್​’ ಪೋಸ್ಟರ್​ ವೈರಲ್​ ಆಗಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ.

ಹೇಗಿದೆ ‘ಅನಿಮಲ್​’ ಫಸ್ಟ್​ ಲುಕ್​ ಪೋಸ್ಟರ್​?

ರಣಬೀರ್​ ಕಪೂರ್​ ಅವರು ಈವರೆಗೆ ರೊಮ್ಯಾಂಟಿಕ್​ ಹೀರೋ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಅನಿಮಲ್​’ ಸಿನಿಮಾದಲ್ಲಿ ಅವರು ಸಂಪೂರ್ಣ ರಗಡ್​ ಗೆಟಪ್​ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂಬ ಸುಳಿವು ಈ ಪೋಸ್ಟರ್​ ಮೂಲಕ ಸಿಕ್ಕಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು, ರಕ್ತ ಮೆತ್ತಿದ ಕೈಗಳಿಂದ ಸಿಗರೇಟ್​ ಹಚ್ಚಿಕೊಳ್ಳುತ್ತಿರುವ ರೀತಿಯಲ್ಲಿ ಅವರು ಪೋಸ್​ ನೀಡಿದ್ದಾರೆ. ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್​ ಸನ್ನಿವೇಶಗಳು ಇರಲಿವೆ ಎಂಬುದಕ್ಕೆ ಈ ಪೋಸ್ಟರ್​ ಸುಳಿವು ನೀಡುತ್ತಿದೆ.

ಇದನ್ನೂ ಓದಿ
Image
Alia Bhatt: ಪತ್ನಿ ಆಲಿಯಾ ಗರ್ಭಿಣಿ, ಆದ್ರೆ ಬೇರೆ ನಟಿ ಜೊತೆ ಹೆಚ್ಚಿತು ರಣಬೀರ್​ ಹಾಟ್ನೆಸ್​; ಎಚ್ಚರಿಕೆ ನೀಡಿದ ಫ್ಯಾನ್ಸ್
Image
Brahmastra: ಶಿವ ಎಂಬ ಪಾತ್ರ ಮಾಡಿ, ಶೂ ಧರಿಸಿ ದೇವಸ್ಥಾನ ಪ್ರವೇಶಿಸಿದ ರಣಬೀರ್​; ಇದು ‘ಬ್ರಹ್ಮಾಸ್ತ್ರ’ ಎಡವಟ್ಟು
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಇದನ್ನೂ ಓದಿ: Ranbir Kapoor: ‘ಬ್ರಹ್ಮಾಸ್ತ್ರ ನೋಡಿ ಅಂತ ನಾನು ಎಲ್ಲರ ಮನೆಗೆ ಹೋಗಿ ಬೇಡಿಕೊಳ್ಳಬೇಕಾ?’: ಸಿಟ್ಟಾದ ರಣಬೀರ್​ ಕಪೂರ್​

‘ಅನಿಮಲ್​’ ಚಿತ್ರಕ್ಕೆ ಸಂದೀಪ್​ ರೆಡ್ಡಿ ವಂಗ ನಿರ್ದೇಶನ:

‘ಅರ್ಜುನ್​ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕಥಾನಾಯಕನನ್ನು ರೊಮ್ಯಾಂಟಿಕ್​ ಆಗಿಯೂ, ಸಖತ್​ ರಗಡ್​ ಆಗಿಯೂ ತೋರಿಸುವಲ್ಲಿ ಅವರು ಪಳಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ರಣಬೀರ್ ಕಪೂರ್​ ಅವರ ಲುಕ್​ ಹೇಗಿರಬಹುದು ಎಂಬ ಕೌತುಕ ಮನೆ ಮಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ: 10ನೇ ಕ್ಲಾಸ್​ನಲ್ಲಿ ರಣಬೀರ್​ ಕಪೂರ್​ ಪಡೆದ ಅಂಕ ಎಷ್ಟು? ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ

ಆಗಸ್ಟ್​ 11ರಂದು ‘ಅನಿಮಲ್​’ ರಿಲೀಸ್​ ಆಗಲಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಪಾಲಿಗೆ ಈ ಚಿತ್ರ ಬಹಳ ಮುಖ್ಯವಾಗಿರಲಿದೆ. ಹಿಂದಿ ಚಿತ್ರರಂಗದಲ್ಲಿ ಅವರು ಭದ್ರವಾಗಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸ್ಟಾರ್​ ನಟರ ಜೊತೆ ನಟಿಸಿದ ಅವರಿಗೆ ಬಾಲಿವುಡ್​ನಲ್ಲೂ ಅಂಥ ಚಾನ್ಸ್​ ಸಿಗುತ್ತಿದೆ. ಆ ಪೈಕಿ ‘ಅನಿಮಲ್​’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.

ಇದು ಪ್ಯಾನ್​ ಇಂಡಿಯಾ ಸಿನಿಮಾಗಳ ಜಮಾನ. ‘ಅನಿಮಲ್​’ ಚಿತ್ರ ಕೂಡ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಲಿದೆ. ಕ್ರೈಂ ಡ್ರಾಮಾ ಪ್ರಕಾರದ ಈ ಚಿತ್ರದಲ್ಲಿ ಅನಿಲ್​ ಕಪೂರ್​ ಮತ್ತು ಬಾಬಿ ಡಿಯೋಲ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:31 am, Sun, 1 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ