Raha: ‘ರಾಹಾ’ ಎಂದು ಮಗಳಿಗೆ ಹೆಸರಿಟ್ಟ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್

ನಟಿ ಆಲಿಯಾ ಭಟ್ ತಮ್ಮ ಮುದ್ದಾದ ಹೆಣ್ಣು ಮಗುವಿನ ಫೋಟೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು, 'ರಾಹಾ' ಎಂದು ಹೆಸರಿಟ್ಟಿರುವುದನ್ನು ರಿವೀಲ್ ಮಾಡಿದ್ದಾರೆ.

Raha: 'ರಾಹಾ' ಎಂದು ಮಗಳಿಗೆ ಹೆಸರಿಟ್ಟ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್
Alia Bhatt and Ranbir Kapoor
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 24, 2022 | 8:43 PM

ನಟಿ ಆಲಿಯಾ ಭಟ್ (Alia Bhatt) ಮತ್ತು ನಟ ರಣಬೀರ್​ ಕಪೂರ್ (Ranbir Kapoor) ಏಪ್ರಿಲ್​ 14ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಬಳಿಕ ನ. 06 ರಂದು ನಟಿ ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗಷ್ಟೇ ಆಲಿಯಾ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಇವೆಲ್ಲದರ ನಡುವೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೊನೆಗೂ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಾಗಿ ಆಲಿಯಾ ಭಟ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ಆಲಿಯಾ ಭಟ್ ತಮ್ಮ ಮುದ್ದಾದ ಹೆಣ್ಣು ಮಗುವಿನ ಫೋಟೋವನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು, ‘ರಾಹಾ’ (Raha) ಎಂದು ಹೆಸರಿಟ್ಟಿರುವುದನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ‘ರಾಹಾ’ ಹೆಸರಿನ ಅರ್ಥ ಏನು ಎಂಬುದನ್ನು ಸಹ ಅವರು ತಿಳಿಸಿದ್ದಾರೆ. ‘ರಾಹಾ’ ಎಂಬ ಹೆಸರು ಅನೇಕ ಅರ್ಥಗಳನ್ನು ಹೊಂದಿದೆ. ‘ರಾಹಾ’ ಎಂದರೆ ಪರಿಶುದ್ಧವಾದ ದೈವಿಕ ಮಾರ್ಗ ಎಂದರ್ಥ. ಸಂಸ್ಕೃತದಲ್ಲಿ ‘ರಾಹಾ’ ಎಂದರೆ, ಕುಲ ಎಂದರ್ಥ. ಬಾಂಗ್ಲಾ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಶಾಂತ. ಅರೇಬಿಕ್​​ನಲ್ಲಿ ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂದರ್ಥ ಕೂಡ ಹೊಂದಿದೆ. ‘ನಾವು ಆಕೆಯನ್ನು ಗಮನಿಸಿದಂತೆ ಇವೆಲ್ಲ ಗುಣಗಳು ಆಕೆಯಲ್ಲಿವೆ. ಧನ್ಯವಾದಗಳು ರಾಹಾ. ನಮ್ಮ ಕುಟುಂಬದ ಭಾಗವಾಗಿದ್ದಕ್ಕೆ. ನಮ್ಮ ಬದುಕು ಈಗಷ್ಟೇ ಆರಂಭವಾದಂತ್ತೆ ಅನಿಸುತ್ತಿದೆ’ ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಆಲಿಯಾ ಭಟ್​ ಅವರು ಸಖತ್​ ಬೇಡಿಕೆ ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಇರುವಾಗ ಸಾಮಾನ್ಯವಾಗಿ ನಟ-ನಟಿಯರು ಮದುವೆ-ಮಕ್ಕಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಆದರೆ ಆಲಿಯಾ ಭಟ್​ ಅವರು ಈ ವಿಚಾರದಲ್ಲಿ ಭಿನ್ನವಾಗಿ ನಿಂತಿದ್ದಾರೆ. ಇಷ್ಟೆಲ್ಲ ಬೇಡಿಕೆ ಇರುವಾಗಲೇ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಸದ್ಯ ಮದುವೆ ಆಗಿ, ತಾಯಿ ಕೂಡ ಆಗಿದ್ದು, ಜೊತೆಗೆ ಮಗಳಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ಇದು ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್ ಅಭಿಮಾನಿಗಳಿಗಂತೂ ಖುಷಿಯ ವಿಚಾರವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada