AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಮೋದಿ ತಾಯಿ ನಿಧನಕ್ಕೆ ಶಾರುಖ್​ ಖಾನ್​ ಸಂತಾಪ; ‘ಪಠಾಣ್’ ಹೀರೋ ಹೇಳಿದ್ದಿಷ್ಟು..

PM Narendra Modi | Heeraben Modi: ಶಾರುಖ್​ ಖಾನ್​ ಮಾತ್ರವಲ್ಲದೇ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ತಮ್ಮ ಸಂತಾಪದ ನುಡಿಗಳನ್ನು ತಿಳಿಸಿದ್ದಾರೆ. ಶಾರುಖ್​ ಅವರ ಪೋಸ್ಟ್​ಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Shah Rukh Khan: ಮೋದಿ ತಾಯಿ ನಿಧನಕ್ಕೆ ಶಾರುಖ್​ ಖಾನ್​ ಸಂತಾಪ; ‘ಪಠಾಣ್’ ಹೀರೋ ಹೇಳಿದ್ದಿಷ್ಟು..
ಶಾರುಖ್ ಖಾನ್, ನರೇಂದ್ರ ಮೋದಿ, ಹೀರಾಬೆನ್ ಮೋದಿ
TV9 Web
| Edited By: |

Updated on:Dec 31, 2022 | 7:05 PM

Share

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ತಾಯಿ ಹೀರಾಬೆನ್​ ಮೋದಿ ನಿಧನಕ್ಕೆ ದೇಶದ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಜನಸಾಮಾನ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ಶುಕ್ರವಾರ (ಡಿ.30) ಹೀರಾಬೆನ್​ ಮೋದಿ (Heeraben Modi) ಅವರು ಕೊನೆಯುಸಿರು ಎಳೆದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಮೋದಿ ಪಾಲ್ಗೊಂಡರು. ಬಳಿಕ ಶನಿವಾರ (ಡಿ.31) ಅವರು ದೆಹಲಿಗೆ ವಾಪಸ್​ ಆಗಿದ್ದಾರೆ. ಈ ಸಂದರ್ಭದಲ್ಲಿ ನಟ ಶಾರುಖ್​ ಖಾನ್​ ಕೂಡ ಸೋಶಿಯಲ್​ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ತಾಯಿಯನ್ನು ಕಳೆದುಕೊಂಡ ನರೇಂದ್ರ ಮೋದಿ ಅವರಿಗೆ ನಮ್ಮ ಸಂತಾಪಗಳು. ಅವರಿಗಾಗಿ ನಮ್ಮ ಕುಟುಂಬ ಪ್ರಾರ್ಥಿಸುತ್ತದೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಾರುಖ್​ ಖಾನ್ (Shah Rukh Khan)​ ಟ್ವೀಟ್​ ಮಾಡಿದ್ದಾರೆ.

ಈ ಹಿಂದೆ ಒಂದೆರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಶಾರುಖ್​ ಖಾನ್​ಗೆ ಸಿಕ್ಕಿತ್ತು. 2019ರಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಪ್ರಯುಕ್ತ ಬಾಲಿವುಡ್ ಸೆಲೆಬ್ರಿಟಿಗಳನ್ನು ಮೋದಿ ಭೇಟಿ ಮಾಡಿದ್ದರು. ಆಗ ಅವರ ಜೊತೆ ಶಾರುಖ್​ ಖಾನ್​ ಮಾತುಕತೆ ನಡೆಸಿದ್ದರು. ಈ ವರ್ಷ ಮೋದಿ ಜನ್ಮದಿನಕ್ಕೆ ಶಾರುಖ್​ ಅವರು ವಿಶ್​ ಮಾಡಿದ್ದರು. ಈಗ ತಾಯಿಯನ್ನು ಕಳೆದುಕೊಂಡ ಪ್ರಧಾನ ಮಂತ್ರಿಗೆ ಕಿಂಗ್​ ಖಾನ್​ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಇದನ್ನೂ ಓದಿ: Jhoome Jo Pathaan: ‘ಪಠಾಣ್​’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮಿಂಚಿಂಗ್​

ಶಾರುಖ್​ ಖಾನ್​ ಮಾತ್ರವಲ್ಲದೇ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ತಮ್ಮ ಸಂತಾಪದ ನುಡಿಗಳನ್ನು ತಿಳಿಸಿದ್ದಾರೆ. ಅಕ್ಷಯ್​ ಕುಮಾರ್​, ಅನುಪಮ್​ ಖೇರ್​, ಕಂಗನಾ ರಣಾವತ್​, ವಿವೇಕ್​ ಅಗ್ನಿಹೋತ್ರಿ, ಜಾಕಿ ಶ್ರಾಫ್​, ಸ್ವರಾ ಭಾಸ್ಕರ್​, ಸೋನು ಸೂದ್​ ಸೇರಿದಂತೆ ಅನೇಕರು ಟ್ವೀಟ್​ ಮಾಡಿದ್ದಾರೆ. ಶಾರುಖ್​ ಅವರ ಪೋಸ್ಟ್​ಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಪಠಾಣ್​’ ಬಿಡುಗಡೆಗೆ ಶಾರುಖ್​ ಖಾನ್​ ಸಜ್ಜು:

ನಾಲ್ಕು ವರ್ಷದ ಬಳಿಕ ಶಾರುಖ್​ ಖಾನ್​ ಅವರು ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲು ಬರುತ್ತಿದ್ದಾರೆ. ಅವರ ನಟನೆಯ ‘ಪಠಾಣ್​’ ಸಿನಿಮಾ 2023ರ ಜನವರಿ 25ರಂದು ಬಿಡುಗಡೆ ಆಗುತ್ತಿದೆ. ಹೈ ಬಜೆಟ್​ನಲ್ಲಿ ನಿರ್ಮಾಣವಾದ ಈ ಚಿತ್ರ ಮೂಲಕ ಶಾರುಖ್​ ಖಾನ್​ ಅವರು ಗ್ರ್ಯಾಂಡ್​ ಕಮ್​ಬ್ಯಾಕ್​ ಮಾಡಲಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​ ಖಾನ್​ಗೆ ನೇರ ಪ್ರಶ್ನೆ

ಬಿಡುಗಡೆಗೂ ಮುನ್ನ ‘ಪಠಾಣ್​’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಈ ಚಿತ್ರದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿಸಿ ಧರಿಸಿರುವುದನ್ನು ಒಂದು ವರ್ಗದ ನೆಟ್ಟಿಗರು ವಿರೋಧಿಸಿದ್ದಾರೆ. ಈ ಸಿನಿಮಾವನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಕೂಡ ಸೋಶಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:05 pm, Sat, 31 December 22

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ