Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

Pathaan Movie Song: ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ‘ಬೇಷರಂ ರಂಗ್​..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಜನರಿಂದ ಈ ಗೀತೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​
ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on:Dec 12, 2022 | 1:10 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡುವುದು ಖಚಿತವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರು ಒಂದಷ್ಟು ವರ್ಷಗಳ ಬ್ರೇಕ್​ ಪಡೆದುಕೊಂಡಿದ್ದರು. ಈಗ ‘ಪಠಾಣ್​’ ಸಿನಿಮಾ (Pathaan Movie) ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುವ ಸೂಚನೆ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಹೆಚ್ಚು ಮಾಡುವ ರೀತಿಯಲ್ಲಿ ‘ಬೇಷರಂ ರಂಗ್​..’ ಹಾಡು ರಿಲೀಸ್​ ಆಗಿದೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 10 ಲಕ್ಷಕ್ಕಿಂತಲೂ ಅಧಿಕ ವೀವ್ಸ್​ ಪಡೆದುಕೊಂಡಿರುವುದು ಈ ಹಾಡಿನ ಹೆಚ್ಚುಗಾರಿಕೆ. ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಶಾರುಖ್​ ಖಾನ್​ ಅವರ ಕೆಮಿಸ್ಟ್ರಿ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ. 2023ರ ಜನವರಿ 25ಕ್ಕೆ ಈ ಚಿತ್ರ ರಿಲೀಸ್​ ಆಗಲಿದೆ. ಈ ಮೊದಲು ಅನಾವರಣ ಆಗಿರುವ ಟೀಸರ್​ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಈಗ ಹಾಡಿನ ಮೂಲಕ ‘ಪಠಾಣ್​’ ತಂಡ ಸದ್ದು ಮಾಡುತ್ತಿದೆ. ವಿಶಾಲ್​-ಶೇಖರ್​ ಸಂಗೀತ ನಿರ್ದೇಶನ ಮಾಡಿರುವ ‘ಬೇಷರಂ ರಂಗ್​..’ ಗೀತೆಯನ್ನು ತುಂಬ ಗ್ಲಾಮರಸ್​ ಆಗಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಇದನ್ನೂ ಓದಿ: ​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​

ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ‘ಪಠಾಣ್​’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗೆ ಇದೆ. ಹಾಗಾಗಿ ಈ ಚಿತ್ರಕ್ಕಾಗಿ ಅವರು ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು 6 ಪ್ಯಾಕ್​​ ಬಾಡಿ ಮೂಲಕ ಅಭಿಮಾನಿಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ‘ಬೇಷರಂ ರಂಗ್​..’ ಹಾಡಿನಲ್ಲಿ ಅದರ ಝಲಕ್​ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ದೊಡ್ಡ ಪರದೆಯಲ್ಲಿ ಶಾರುಖ್​ ಅವರನ್ನು ನೋಡಲು ಫ್ಯಾನ್ಸ್​ ಕಾಡಿದ್ದಾರೆ.

ಇದನ್ನೂ ಓದಿ: Mannat: ಶಾರುಖ್​ ಖಾನ್​ ಮನೆಯ ಗೇಟಿಗೆ ವಜ್ರದ ಅಲಂಕಾರ; ಹೇಗಿದೆ ನೋಡಿ ‘ಮನ್ನತ್​’ ವೈಭೋಗ

ದೀಪಿಕಾ ಪಡುಕೋಣೆ ಅವರು ‘ಭೇಷರಂ ರಂಗ್​..’ ಹಾಡಿನಲ್ಲಿ ಹೆಚ್ಚು ಹೈಲೈಟ್​ ಆಗಿದ್ದಾರೆ. ಸಖತ್​ ಹಾಟ್​ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರು ಡ್ಯಾನ್ಸ್​ ಮಾಡಿರುವ ಪರಿ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್​ಪ್ರೆಸ್​’ ಮತ್ತು ‘ಹ್ಯಾಪಿ ನ್ಯೂ ಇಯರ್​’ ಬಳಿಕ ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರು ನಾಲ್ಕನೇ ಬಾರಿಗೆ ಒಂದಾಗಿರುವುದರಿಂದ ‘ಪಠಾಣ್​’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

‘ಬೇಷರಂ ರಂಗ್​..’ ಹಾಡಿಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ. ಇದೇ ರೀತಿ ಸಿನಿಮಾ ಕೂಡ ಸೂಪರ್​ ಹಿಟ್​ ಆಗಲಿದೆ ಎಂಬ ಭರವಸೆ ಮೂಡುವಂತಾಗಿದೆ. ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಜೊತೆ ಜಾನ್​ ಅಬ್ರಾಹಂ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:10 pm, Mon, 12 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ