​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​

​Shah Rukh Khan | Aryan Khan Debut: ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಅವರ ಬಾಲಿವುಡ್​ ಎಂಟ್ರಿಗೆ ಅನೇಕ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ತಂದೆ ರೀತಿಯೇ ದೊಡ್ಡ ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​
ಆರ್ಯನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 07, 2022 | 10:27 AM

ನಟ ಶಾರುಖ್​ ಖಾನ್​ (​Shah Rukh Khan) ಅವರ ಪುತ್ರ ಆರ್ಯನ್​ ಖಾನ್​ ಅವರು ಹೆಚ್ಚು ಸುದ್ದಿ ಆಗಿದ್ದೇ ಡ್ರಗ್ಸ್​ ಪಾರ್ಟಿ ಆರೋಪದಿಂದ. ಆ ಪ್ರಕರಣದಲ್ಲಿ ಜೈಲು ಊಟ ತಿಂದು ಬಂದ ಅವರು ಒಂದಷ್ಟು ದಿನ ಡಲ್​ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಕೆಲಸದ ಬಗ್ಗೆ ಗಮನ ಹರಿಸಿದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ (Aryan Khan Debut) ನೀಡಿರಬೇಕಿತ್ತು. ಕಾರಣಾಂತಗಳಿಂದ ತಡವಾಯ್ತು ಅಷ್ಟೇ. ಈಗ ಅದಕ್ಕೆ ಕಾಲ ಕೂಡಿಬಂದಿದೆ. ತಾವು ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿರುವ ಬಗ್ಗೆ ಸ್ವತಃ ಆರ್ಯನ್​ ಖಾನ್​ (Aryan Khan) ಅವರು ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಪ್ರೀ-ಪ್ರೊಡಕ್ಷನ್​ ಕೆಲಸದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ, ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿಲ್ಲ. ಬದಲಿಗೆ, ನಿರ್ದೇಶಕನಾಗಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಸ್ಟಾರ್​ ನಟನ ಪುತ್ರ ಆದ್ದರಿಂದ ಆರ್ಯನ್​ ಖಾನ್​ ಕೂಡ ಹೀರೋ ಆಗುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಅವರಿಗೆ ನಟನೆಗಿಂತಲೂ ನಿರ್ದೇಶನದಲ್ಲಿ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಪ್ರಾಜೆಕ್ಟ್​ಗೆ ಸ್ಕ್ರಿಪ್ಟ್​ ಬರೆದು ಮುಗಿಸಿದ್ದಾರೆ. ಅದರ ಫೋಟೋ ಹಂಚಿಕೊಂಡು ಈ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ
Image
Aryan Khan Drug Case ಆರ್ಯನ್​​ ಖಾನ್​​ ಡ್ರಗ್ಸ್​​​ ಪ್ರಕರಣ: ಬಂಧನದಿಂದ ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಏನೇನಾಯ್ತು?
Image
ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ
Image
‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ
Image
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

ಇದನ್ನೂ ಓದಿ: ಆರ್ಯನ್ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​ ಸಾವು; ವಕೀಲರಿಂದ ಮಾಹಿತಿ

ಸ್ಕ್ರಿಪ್ಟ್​ ಬರೆದು ಮುಗಿಸಿರುವ ಆರ್ಯನ್​ ಖಾನ್​ ಅವರು ಈಗ ಆ್ಯಕ್ಷನ್​-ಕಟ್​ ಹೇಳುವ ಕಾತರದಲ್ಲಿದ್ದಾರೆ. ಶಾರುಖ್​ ಖಾನ್​ ಅವರ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ಈ ಪ್ರಾಜೆಕ್ಟ್​ ನಿರ್ಮಾಣ ಆಗಲಿದೆ. ಆದರೆ ಯಾರೆಲ್ಲ ನಟಿಸಲಿದ್ದಾರೆ? ತಾಂತ್ರಿಕ ವರ್ಗದಲ್ಲಿ ಯಾರು ಕೆಲಸ ಮಾಡಲಿದ್ದಾರೆ? ಇದು ಯಾವ ಪ್ರಕಾರದ ಸಿನಿಮಾ ಅಥವಾ ವೆಬ್​ ಸಿರೀಸ್​ ಆಗಿರಲಿದೆ? ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: Sameer Wankhede: ಆರ್ಯನ್ ಖಾನ್​ಗೆ ಕ್ಲೀನ್ ಚಿಟ್​ ಬೆನ್ನಲ್ಲೇ ಎನ್​ಸಿಬಿ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ ಚೆನ್ನೈಗೆ ವರ್ಗಾವಣೆ

ಶಾರುಖ್​ ಖಾನ್​ ಪುತ್ರನ ಎಂಟ್ರಿಗೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ತಂದೆ ರೀತಿಯೇ ದೊಡ್ಡ ಯಶಸ್ಸು ಸಿಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಚೊಚ್ಚಲ ಪ್ರಾಜೆಕ್ಟ್​ ಬಗ್ಗೆ ಆರ್ಯನ್ ಖಾನ್​ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

View this post on Instagram

A post shared by Aryan Khan (@___aryan___)

ಆರ್ಯನ್​ ಖಾನ್​ ಅವರು ಇತ್ತೀಚೆಗೆ ಬಿ-ಟೌನ್​ ಸೆಲೆಬ್ರಿಟಿಗಳ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ತಂದೆಯ ಅನೇಕ ಉದ್ಯಮಗಳಲ್ಲೂ ಅವರು ಆಸಕ್ತಿ ವಹಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಕಹಿ ಘಟನೆಯನ್ನು ಮರೆತು ಮುಂದೆ ಸಾಗುತ್ತಿದ್ದಾರೆ. ಮಗನ ಸಿನಿಜರ್ನಿಗೆ ತಂದೆ ಶಾರುಖ್​ ಖಾನ್​ ಹಾಗೂ ತಾಯಿ ಗೌರಿ ಖಾನ್​ ಬೆಂಬಲವಾಗಿ ನಿಂತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ