Sameer Wankhede: ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ಬೆನ್ನಲ್ಲೇ ಎನ್‌ಸಿಬಿ ಮಾಜಿ ಮುಖ್ಯಸ್ಥ ಸಮೀರ್ ವಾಂಖೆಡೆ ಚೆನ್ನೈಗೆ ವರ್ಗಾವಣೆ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದ ತನಿಖೆಗಾಗಿ ವಿವಾದಾತ್ಮಕ ಅಧಿಕಾರಿ ಸಮೀರ್ ವಾಂಖೆಡೆ ಮುಂಬೈ ಎನ್‌ಸಿಬಿ ವಲಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರೀ ಸುದ್ದಿಯಲ್ಲಿದ್ದರು.
ಮುಂಬೈ: ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಡ್ರಗ್ಸ್ ಪತ್ತೆಯಾದ ಪ್ರಕರಣದಲ್ಲಿ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ ಎನ್ಸಿಬಿಯಿಂದ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ. ಆಗ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (NCB) ಮುಖ್ಯಸ್ಥರಾಗಿದ್ದ ಭಾರತೀಯ ಕಂದಾಯ ಸೇವಾ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ಅವರನ್ನು ಸೋಮವಾರ ಚೆನ್ನೈನಲ್ಲಿರುವ ಆದಾಯ ತೆರಿಗೆದಾರರ ನಿರ್ದೇಶನಾಲಯದ ಡಿಜಿಯನ್ನಾಗಿ ವರ್ಗಾಯಿಸಲಾಗಿದೆ.
ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಇತ್ತೀಚೆಗೆ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಸಿಬಿ, ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಡ್ರಗ್ ವಿರೋಧಿ ಸಂಸ್ಥೆ ಸ್ಥಾಪಿಸಿದ ಎಸ್‌ಐಟಿ ವಾಂಖೆಡೆ ನೇತೃತ್ವದ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಿಕೊಂಡಿದೆ. ಎನ್‌ಸಿಬಿಯಲ್ಲಿ ಅವರ ಅಧಿಕಾರಾವಧಿಯ ಅಂತ್ಯದ ನಂತರ 2008-ಬ್ಯಾಚ್ ಐಆರ್‌ಎಸ್ ಅಧಿಕಾರಿಯನ್ನು ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿರುವ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ)ಗೆ ವರ್ಗಾಯಿಸಲಾಯಿತು. ವಾಂಖೆಡೆ ಜೂನ್ 10ರಂದು ತಮ್ಮ ಚೆನ್ನೈ ಪೋಸ್ಟಿಂಗ್ ಅನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Aryan Khan: ಮುಂಬೈ ಡ್ರಗ್ಸ್ ಪ್ರಕರಣ; ಶಾರುಖ್ ಖಾನ್ ಮಗ ಆರ್ಯನ್ ಖಾನ್‌ಗೆ ಎನ್ಸಿಬಿಯಿಂದ ಕ್ಲೀನ್ ಚಿಟ್
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದ ತನಿಖೆಗಾಗಿ ವಿವಾದಾತ್ಮಕ ಅಧಿಕಾರಿ ಸಮೀರ್ ವಾಂಖೆಡೆ ಮುಂಬೈ ಎನ್‌ಸಿಬಿ ವಲಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರೀ ಸುದ್ದಿಯಲ್ಲಿದ್ದರು.
ಡ್ರಗ್ಸ್ ದಾಳಿಯ ನಂತರ ಸಮೀರ್ ವಾಂಖೆಡೆ ನಡೆಸಿದ ತನಿಖೆಯಲ್ಲಿ ಐದು ಅಕ್ರಮಗಳನ್ನು ಮೂಲಗಳು ವಿವರಿಸಿವೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ವಿಡಿಯೋಗ್ರಫಿ ಮಾಡಲಾಗಿಲ್ಲ ಮತ್ತು ಆರ್ಯನ್ ಖಾನ್ ಅವರ ಫೋನ್‌ನ ವಿಷಯಗಳನ್ನು ವಿಶ್ಲೇಷಿಸುವಲ್ಲಿ ಲೋಪವಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೇ, ಡ್ರಗ್ಸ್ ಸೇವನೆಯನ್ನು ಸಾಬೀತುಪಡಿಸಲು ಯಾವುದೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿಲ್ಲ. ಇನ್ನೂ ಇಬ್ಬರು ಸಾಕ್ಷಿಗಳು ಎನ್‌ಸಿಬಿ ದಾಳಿಯ ಸಮಯದಲ್ಲಿ ತನಿಖಾ ತಂಡದಲ್ಲಿ ಅವರು ಇರಲಿಲ್ಲ ಎಂದು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Tue, 31 May 22