Kashmir Encounter: ಕಾಶ್ಮೀರದ ಆವಂತಿಪೊರಾದಲ್ಲಿ ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಎನ್​ಕೌಂಟರ್

ಆವಂತಿಪೊರಾದ ಎನ್​ಕೌಂಟರ್​​ನಲ್ಲಿ ಹತರಾದ ಉಗ್ರರಲ್ಲಿ ಒಬ್ಬ ಜಮ್ಮು ಕಾಶ್ಮೀರದಲ್ಲಿ ನಡೆದ ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರ ಎನ್​​ಕೌಂಟರ್ ಮಾಡಲಾಗಿತ್ತು.

Kashmir Encounter: ಕಾಶ್ಮೀರದ ಆವಂತಿಪೊರಾದಲ್ಲಿ ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಎನ್​ಕೌಂಟರ್
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: May 31, 2022 | 8:59 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪೊರಾ (Awantipora) ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ (Terrorists Encounter) ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್​ಕೌಂಟರ್​​ನಲ್ಲಿ ಹತರಾದ ಉಗ್ರರಲ್ಲಿ ಒಬ್ಬ ಜಮ್ಮು ಕಾಶ್ಮೀರದಲ್ಲಿ ನಡೆದ ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಎನ್​ಕೌಂಟರ್​​ನಲ್ಲಿ ಹತರಾದ ಉಗ್ರರನ್ನು ತ್ರಾಲ್‌ನ ಶಾಹಿದ್ ರಾಥರ್ ಮತ್ತು ಶೋಪಿಯಾನ್ ಪ್ರದೇಶದ ಉಮರ್ ಯೂಸುಫ್ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಕಳೆದ ಐದು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್‌ಗೆ ಸೇರಿದ 26 ವಿದೇಶಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.

14 ವಿದೇಶಿ ಭಯೋತ್ಪಾದಕರು ಮಸೂದ್ ಅಜರ್ ಸ್ಥಾಪಿಸಿದ ಭಯೋತ್ಪಾದಕ ಗುಂಪು ಜೈಶ್‌ಗೆ ಸೇರಿದವರಾಗಿದ್ದರೆ, 12 ಮಂದಿ ಹಫೀಜ್ ಸಯೀದ್ ಸ್ಥಾಪಿಸಿದ ಲಷ್ಕರ್-ಎ-ತೊಯ್ಬಾದಿಂದ ಬಂದವರು. ಇದೀಗ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಹತರಾದ ಒಂದು ದಿನದ ಬಳಿಕ ಅವಂತಿಪೊರಾದಲ್ಲೂ ಎನ್​ಕೌಂಟರ್​ನಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: Pulwama encounter ಪುಲ್ವಾಮಾ ಎನ್‌ಕೌಂಟರ್‌: ವಲಸೆ ಕಾರ್ಮಿಕರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಹತ್ಯೆ

ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರ ಎನ್​​ಕೌಂಟರ್ ಮಾಡಲಾಗಿತ್ತು. ವಸತಿ ಕಟ್ಟಡದಲ್ಲಿ ಅಡಗಿದ್ದ ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಮೇಲೆ ಮನಬಂದಂತೆ ಗುಂಡು ಹಾರಿಸಿ ಎನ್‌ಕೌಂಟರ್‌ಗೆ ಪ್ರೇರೇಪಿಸಿದರು. ಇದರಿಂದ ಪುಲ್ವಾಮಾದಲ್ಲಿ ಇಬ್ಬರು ಜೆಎಂ ಉಗ್ರರನ್ನು ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಲಾಗಿತ್ತು. ಭಾನುವಾರ ರಾತ್ರಿ ಪುಲ್ವಾಮಾದ ಗುಂಡಿಪೋರಾದಲ್ಲಿ ಎನ್‌ಕೌಂಟರ್ ಪ್ರಾರಂಭವಾದ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಎನ್‌ಕೌಂಟರ್ ನಡೆದ ಸ್ಥಳದಿಂದ ಭದ್ರತಾ ಪಡೆಗಳು ಎರಡು ಎಕೆ ರೈಫಲ್‌ಗಳು ಮತ್ತು ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ