Aryan Khan: ಡ್ರಗ್ಸ್​ ಪ್ರಕರಣದಿಂದ ಮುಕ್ತಿ ಸಿಕ್ಕ ಬೆನ್ನಲ್ಲೇ ಅಮೇರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?

Shah Rukh Khan: ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರಕರಣದಿಂದ ಆರ್ಯನ್​ ಖಾನ್​ಗೆ ಕ್ಲೀನ್​ ಚಿಟ್ ಸಿಕ್ಕಿದೆ. ಇದೀಗ ಶಾರುಖ್ ಪುತ್ರ ವಿದೇಶಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ. ಏನು ಕಾರಣ? ಇಲ್ಲಿದೆ ನೋಡಿ.

Aryan Khan: ಡ್ರಗ್ಸ್​ ಪ್ರಕರಣದಿಂದ ಮುಕ್ತಿ ಸಿಕ್ಕ ಬೆನ್ನಲ್ಲೇ ಅಮೇರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?
ಆರ್ಯನ್ ಖಾನ್
Follow us
TV9 Web
| Updated By: shivaprasad.hs

Updated on:May 28, 2022 | 1:36 PM

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಆರ್ಯನ್‌ ಖಾನ್ ಹೆಸರನ್ನು ಕೈಬಿಡಲಾಗಿದೆ. ಇದೀಗ ಆರ್ಯನ್ ಖಾನ್ ಮುಂದಿನ ಯೋಜನೆಗಳ ಬಗ್ಗೆ ಕುತೂಹಲ ಮೂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಸ್ಟಾರ್ ಕಿಡ್ ಶೀಘ್ರದಲ್ಲೇ ಅಮೇರಿಕಾ ವಿಮಾನ ಹತ್ತಲಿದ್ಧಾರೆ. ಮುಂದಿನ ಯೋಜನೆಗಳಿಗೆ ಪೂರಕವಾಗುವಂತೆ ಆರ್ಯನ್ ಅಲ್ಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ನ್ಯಾಯಾಲಯವು ಆರ್ಯನ್​ಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿರಲಿಲ್ಲ. ಅವರ ಪಾಸ್​ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದೀಗ ಅವರ ಪಾಸ್​ಪೋರ್ಟ್ ಮರಳಿ ಸಿಕ್ಕಿದ ತಕ್ಷಣ ಅವರು ಅಮೇರಿಕಾಗೆ ತೆರಳಲಿದ್ದಾರೆ ಎಂದು ಇಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: Aryan Khan Drug Case ಆರ್ಯನ್​​ ಖಾನ್​​ ಡ್ರಗ್ಸ್​​​ ಪ್ರಕರಣ: ಬಂಧನದಿಂದ ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಏನೇನಾಯ್ತು?

ಆರ್ಯನ್ ಅಮೇರಿಕಾಗೆ ತೆರಳುವುದು ಏಕೆ?

ಇದನ್ನೂ ಓದಿ
Image
ನಿರ್ಮಾಪಕರ​ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್​’ ಚಿತ್ರಕ್ಕೆ ಬೇಡಿಕೆ ಇಲ್ಲ
Image
Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್
Image
ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
Image
Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್​, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ

ಆರ್ಯನ್ ಖಾನ್ ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಅವರು ನಟನೆಯ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿಲ್ಲ. ಬದಲಾಗಿ ನಿರ್ದೇಶನದ ಬಗ್ಗೆ ಅವರಿಗೆ ಒಲವಿದೆ. ವೆಬ್​ ಸರಣಿಯೊಂದಕ್ಕೆ ಅವರು ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿತ್ತು. ಇದೀಗ ತಮ್ಮ ನಿರ್ದೇಶನದ ತಯಾರಿಗೆ ಸಂಬಂಧಿಸಿದಂತೆ ಆರ್ಯನ್​ ಅಮೇರಿಕಾಗೆ ತೆರಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ವೆಬ್​ ಸರಣಿಗೆ ಆ್ಯಕ್ಷನ್​ಕಟ್​ ಹೇಳಲು ರೆಡಿ ಆದ ಆರ್ಯನ್ ಖಾನ್​; ಹಣ ಹೂಡಲು ಶಾರುಖ್​ ರೆಡಿ

ಕ್ರೂಸ್​ ಶಿಪ್​ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2ರಂದು ಬಂಧಿಸಲಾಗಿತ್ತು. ಇದರಲ್ಲಿ ಆರ್ಯನ್ ಜತೆಗೆ ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಅವರನ್ನು ಎನ್‌ಸಿಬಿ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 28ರಂದು ಆರ್ಯನ್​ಗೆ ಜಾಮೀನು ಲಭಿಸಿತ್ತು. ಇದೀಗ ಆರ್ಯನ್​ಗೆ ಜಾಮೀನು ಲಭಿಸಿದ್ದು, ಸಾಕ್ಷಾಧಾರಗಳ ಕೊರತೆಯಿಂದ ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Sat, 28 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ