AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ

ನಂದಮೂರಿ ತಾರಕ ರಾಮಾ ರಾವ್​ ಅವರ ಜನ್ಮದಿನದ ಪ್ರಯುಕ್ತ ‘ಎನ್​ಬಿಕೆ 107’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಅದರಲ್ಲಿ ನಂದಮೂರಿ ಬಾಲಕೃಷ್ಣ ಲುಕ್​ ಸಖತ್​ ಮಾಸ್​ ಆಗಿದೆ.

ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ
TV9 Web
| Edited By: |

Updated on: May 28, 2022 | 12:03 PM

Share

ಟಾಲಿವುಡ್​ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯಿಸುತ್ತಿರುವ ಹೊಸ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಅವರು ‘ಅಖಂಡ’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡರು. ಅದರಿಂದ ಅವರ ಮುಂದಿನ ಚಿತ್ರದ ಮೇಲೆ ಹೆಚ್ಚು ಹೈಪ್ ಸೃಷ್ಟಿ ಆಗಿದೆ. ಆ ಸಿನಿಮಾಗೆ ತಾತ್ಕಾಲಿಕವಾಗಿ ‘ಎನ್​ಬಿಕೆ 107’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾವನ್ನು ಗೋಪಿಚಂದ್​ ಮಲಿನೇನಿ ನಿರ್ದೇಶಿಸುತ್ತಿದ್ದಾರೆ. ಇಂದು (ಮೇ 28) ನಂದಮೂರಿ ತಾರಕ ರಾಮಾರಾವ್​ (Nandamuri Taraka Rama Rao) ಅವರ ಜನ್ಮದಿನ. ಆ ಪ್ರಯುಕ್ತ ಎಲ್ಲರೂ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ನಂದಮೂರಿ ಬಾಲಕೃಷ್ಣ ನಟನೆಯ ‘ಎನ್​ಬಿಕೆ 107’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಜೊತೆಗೆ ನಂದಮೂರಿ ತಾರಕ ರಾಮಾರಾವ್​ ಅವರಿಗೆ ಗೌರವ ಸಲ್ಲಿಸಲಾಗಿದೆ. ಸದ್ಯ ಈ ಪೋಸ್ಟರ್​ ವೈರಲ್​ ಆಗುತ್ತಿದೆ. ‘ಎನ್​ಬಿಕೆ 107’ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್​ (Duniya Vijay) ಅವರು ವಿಲನ್​ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡುತ್ತಿದೆ.

ಮಾಸ್​ ಸಿನಿಮಾಗಳನ್ನೇ ಮಾಡಿ ಫೇಮಸ್​ ಆದವರು ನಿರ್ದೇಶಕ ಗೋಪಿಚಂದ್​ ಮಲಿನೇನಿ. ಭರ್ಜರಿ ಸಾಹಸ ಪ್ರಧಾನ ಸಿನಿಮಾಗಳಿಂದ ಮನರಂಜನೆ ನೀಡುವ ನಂದಮೂರಿ ಬಾಲಕೃಷ್ಣ ಜೊತೆ ಅವರು ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಈ ಹೊಸ ಪೋಸ್ಟರ್​ ಮೂಡಿಬಂದಿದೆ. ಬಾಲಯ್ಯ ಅವರು ಕೈಯಲ್ಲಿ ಹರಿತವಾದ ಆಯುಧ ಹಿಡಿದಿದ್ದಾರೆ. ಅದರಿಂದ ರಕ್ತ ಸುರಿಯುತ್ತಿದೆ. ಆಕ್ರೋಶ ಭರಿತವಾಗಿ ಅವರು ಲುಕ್​ ನೀಡಿದ್ದಾರೆ. ‘ಹಂಟ್​ ಬಿಗಿನ್ಸ್​..’ (ಬೇಟೆ ಶುರು) ಎಂದು ಈ ಪೋಸ್ಟರ್​ ಮೇಲೆ ಬರೆದಿರುವುದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
ಟಾಲಿವುಡ್​ ದುನಿಯಾದಿಂದ ವಿಜಯ್​ ಲುಕ್​ ರಿವೀಲ್​; NBK107 ಚಿತ್ರದಲ್ಲಿ ಹೇಗಿದೆ ನೋಡಿ ಸಲಗನ ಗೆಟಪ್​
Image
ಟಾಲಿವುಡ್​ಗೆ ಎಂಟ್ರಿ ನೀಡಿದ ದುನಿಯಾ ವಿಜಯ್​; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್​ ಚಾನ್ಸ್​
Image
Akhanda: ಅಪರೂಪದ ದಾಖಲೆ ಬರೆದ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’; ಏನದು?
Image
Puneeth Rajkumar: ನಾವು ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು; ನಂದಮೂರಿ ಬಾಲಕೃಷ್ಣ ಕಂಬನಿ

ಟಾಲಿವುಡ್​ ಮಂದಿ ಮಾತ್ರವಲ್ಲದೇ ಕನ್ನಡದ ಸಿನಿಪ್ರಿಯರು ಕೂಡ ‘ಎನ್​ಬಿಕೆ 107’ ಸಿನಿಮಾ ನೋಡಲು ಕಾದಿದ್ದಾರೆ. ‘ದುನಿಯಾ’ ವಿಜಯ್​ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದೇ ಈ ಕಾತರಕ್ಕೆ ಕಾರಣ. ಕೆಲವು ದಿನಗಳ ಹಿಂದೆ ವಿಜಿ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಮುಸಲಿ ಮಡುಗು ಪ್ರತಾಪ್​ ರೆಡ್ಡಿ ಎಂಬ ಪತ್ರವನ್ನು ದುನಿಯಾ ವಿಜಯ್​ ಮಾಡುತ್ತಿದ್ದು, ಅವರ ಲುಕ್​ ಕೂಡ ಸಖತ್​ ರಾ ಆಗಿದೆ.

ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..​

ದುನಿಯಾ ವಿಜಯ್​ ಹಾಗೂ ನಂದಮೂರಿ ಬಾಲಕೃಷ್ಣ ನಡುವಿನ ಮುಖಾಮುಖಿ ಹೇಗಿರಲಿದೆ ಎಂದು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಚಿತ್ರಕ್ಕೆ ಅಂತಿಮವಾಗಿ ಯಾವ ಶೀರ್ಷಿಕೆ ಇಡಲಾಗುವುದು ಎಂಬ ಕೌತುಕ ಕೂಡ ಮನೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್, ಮಂತ್ರಿ ಕಥೆ ಏನು?
ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್, ಮಂತ್ರಿ ಕಥೆ ಏನು?
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ