ಟಾಲಿವುಡ್​ ದುನಿಯಾದಿಂದ ವಿಜಯ್​ ಲುಕ್​ ರಿವೀಲ್​; NBK107 ಚಿತ್ರದಲ್ಲಿ ಹೇಗಿದೆ ನೋಡಿ ಸಲಗನ ಗೆಟಪ್​

NBK 107 | Duniya Vijay: ದುನಿಯಾ ವಿಜಯ್​ ನಟಿಸುತ್ತಿರುವ ತೆಲುಗಿನ NBK107 ಚಿತ್ರತಂಡದಿಂದ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರಿಗೆ ಖಡಕ್​ ವಿಲನ್​ ಪಾತ್ರವಿದೆ.

ಟಾಲಿವುಡ್​ ದುನಿಯಾದಿಂದ ವಿಜಯ್​ ಲುಕ್​ ರಿವೀಲ್​; NBK107 ಚಿತ್ರದಲ್ಲಿ ಹೇಗಿದೆ ನೋಡಿ ಸಲಗನ ಗೆಟಪ್​
ದುನಿಯಾ ವಿಜಯ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 16, 2022 | 1:27 PM

ನಟ ದುನಿಯಾ ವಿಜಯ್​ (Duniya Vijay) ಅವರ ಹವಾ ಈಗ ಪರಭಾಷೆ ಚಿತ್ರರಂಗಕ್ಕೂ ಹಬ್ಬಿದೆ. ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ನಟನಾಗಿ ಮತ್ತು ಯಶಸ್ವಿ ನಿರ್ದೇಶಕನಾಗಿ ಮಿಂಚಿದ್ದ ಅವರು ಈಗ ಟಾಲಿವುಡ್​ನಲ್ಲೂ ಖದರ್​ ತೋರಿಸುತ್ತಿದ್ದಾರೆ. ಮೊದಲ ಬಾರಿಗೆ ಅವರು ನಟಿಸುತ್ತಿರುವ ತೆಲುಗು ಚಿತ್ರತಂಡದಿಂದ ಅವರ ಫಸ್ಟ್​ಲುಕ್​ ಬಿಡುಗಡೆ ಮಾಡಲಾಗಿದೆ. ಇದು ನಂದಮೂರಿ ಬಾಲಕೃಷ್ಣ ನಟನೆಯ 107ನೇ (NBK 107) ಸಿನಿಮಾ. ಇದರಲ್ಲಿ ದುನಿಯಾ ವಿಜಯ್​ ಅವರು ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ ಲುಕ್​ ಪೋಸ್ಟರ್​ ತುಂಬ ರಗಡ್​ ಆಗಿದೆ. ಗೋಪಿಚಂದ್​ ಮಲಿನೇನಿ (Gopichand Malineni) ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ದುನಿಯ್​ ವಿಜಯ್​ ಅವರದ್ದು ಪವರ್​ಫುಲ್​ ಪಾತ್ರ ಎಂದು ಅವರು ಹೇಳಿದ್ದಾರೆ. ಗಡ್ಡ ಬಿಟ್ಟು, ಸಿಗರೇಟ್​ ಸೇದುತ್ತ, ಗುರಾಯಿಸುವ ರೀತಿಯಲ್ಲಿ ದುನಿಯಾ ವಿಜಯ್​ ಪೋಸ್​ ನೀಡಿದ್ದಾರೆ. ಈ ಪೋಸ್ಟರ್​ ನೋಡಿದ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಪೂರ್ತಿ ಸಿನಿಮಾದಲ್ಲಿ ಅವರ ಪಾತ್ರ ಹೇಗೆ ಮೂಡಿಬರಬಹುದು ಎಂಬ ಕೌತುಕ ಅಭಿಮಾನಿಗಳಲ್ಲಿ ಇದೆ. ಪೋಸ್ಟರ್​ ಕಂಡು ಎಲ್ಲರೂ ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಈ ಸಿನಿಮಾದಿಂದ ಟಾಲಿವುಡ್​ನಲ್ಲಿ ದುನಿಯಾ ವಿಜಯ್​ ಅವರಿಗೆ ದೊಡ್ಡ ಡಿಮ್ಯಾಂಡ್​ ಸೃಷ್ಟಿಯಾಗುವ ನಿರೀಕ್ಷೆ ದಟ್ಟವಾಗಿದೆ.

ದುನಿಯಾ ವಿಜಯ್​ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ನಟನೆಯಲ್ಲಿ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಕಳೆದ ವರ್ಷ ತೆರೆಕಂಡ ‘ಸಲಗ’ ಚಿತ್ರಕ್ಕೆ ಅವರು ಆ್ಯಕ್ಷನ್​-ಕಟ್​ ಹೇಳಿದ್ದರು. ಅದು ಅವರ ಮೊದಲ ನಿರ್ದೇಶನದ ಪ್ರಯತ್ನ. ಚೊಚ್ಚಲ ನಿರ್ದೇಶನದಲ್ಲೇ ಅವರಿಗೆ ಗೆಲುವು ಸಿಕ್ಕಿತು. ‘ಸಲಗ’ ಸಕ್ಸಸ್​ ಬಳಿಕ ಅವರನ್ನು ಅರಸಿ ಬಂದಿದ್ದೇ ಟಾಲಿವುಡ್​ ಅವಕಾಶ. ಖ್ಯಾತ ನಟ ನಂದಮೂರಿ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್​ ಪಡೆದಿರುವ ದುನಿಯಾ ವಿಜಯ್​ ಅವರು ಈಗ ಫಸ್ಟ್​ಲುಕ್​ ಪೋಸ್ಟರ್​ ಮೂಲಕ ಗಮನ ಸೆಳೆಯುತ್ತಿದ್ದಾರೆ.

‘ಸ್ಯಾಂಡಲ್​ವುಡ್​ ಸೆನ್ಸೇಷನ್​ ದುನಿಯಾ ವಿಜಯ್ ಅವರನ್ನು ಒಂದು ಪವರ್​ಫುಲ್​ ಪಾತ್ರದಲ್ಲಿ ಪರಿಚಯಿಸುತ್ತಿದ್ದೇವೆ. ಈಗಾಗಲೇ ಹೇಳಿದಂತೆ ವಿಲನ್​ ಎಂದರೆ ಏನು ಎಂಬುದನ್ನು ಅವರು ಮರು ವ್ಯಾಖ್ಯಾನ ಮಾಡಲಿದ್ದಾರೆ’ ಎಂಬ ಕ್ಯಾಪ್ಷನ್​ನೊಂದಿಗೆ ನಿರ್ದೇಶಕ ಗೋಪಿಚಂದ್​ ಮಲಿನೇನಿ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಮುಸಲಿ ಮಡುಗು ಪ್ರತಾಪ್​ ರೆಡ್ಡಿ ಎಂಬುದು ದುನಿಯಾ ವಿಜಯ್​ ನಿಭಾಯಿಸಲಿರುವ ಪಾತ್ರದ ಹೆಸರು ಎಂದು ಕೂಡ ನಿರ್ದೇಶಕರು ತಿಳಿಸಿದ್ದಾರೆ. ಆ ಮೂಲಕ ಸಿನಿಪ್ರಿಯರ ಮನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿಯಾಗುವಂತೆ ಅವರು ಮಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ದುನಿಯಾ ವಿಜಯ್​ ಅವರು NBK107 ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಚಿತ್ರೀಕರಣದ ಸೆಟ್​ಗೆ ತೆರಳಿದ್ದ ಅವರಿಗೆ ಚಿತ್ರತಂಡದಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಆ ವಿಷಯವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ನಂದಮೂರಿ ಬಾಲಕೃಷ್ಣ ಮತ್ತು ದುನಿಯಾ ವಿಜಯ್​ ಅವರ ಮುಖಾಮುಖಿ ಈ ಸಿನಿಮಾದಲ್ಲಿ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದರ ಜೊತೆಗೆ ಎಂದಿನಂತೆ ಚಂದನವನದಲ್ಲೂ ದುನಿಯಾ ವಿಜಯ್​ ಸಕ್ರಿಯರಾಗಿದ್ದಾರೆ. ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ‘ಭೀಮಾ’ ಇತ್ತೀಚೆಗಷ್ಟೇ ಅನೌನ್ಸ್​ ಆಯಿತು. ಆ ಚಿತ್ರದ ಫಸ್ಟಲುಕ್​ ಮತ್ತು ಟೈಟಲ್​ ಪೋಸ್ಟರ್​ ಈಗಾಗಲೇ ಜನಮನ ಸೆಳೆಯುತ್ತಿದೆ. ‘ಸಲಗ’ ರೀತಿಯೇ ‘ಭೀಮ’ ಸಿನಿಮಾದಲ್ಲೂ ದುನಿಯಾ ವಿಜಯ್ ಅವರು ಒಂದು ರಕ್ತಸಿಕ್ತ ಕಥೆಯನ್ನು ಹೇಳಲಿದ್ದಾರೆ ಎಂಬುದನ್ನು ಪೋಸ್ಟರ್​ಗಳು ಸೂಚಿಸುತ್ತಿವೆ. ಆ ಸಿನಿಮಾ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಒಟ್ಟಿನಲ್ಲಿ ವಿಜಯ್​ ಅವರು ಈಗ ಸಖತ್​ ಬ್ಯುಸಿ ಆಗಿದ್ದಾರೆ. ಒಂದೆಡೆ ನಟನೆ, ಇನ್ನೊಂದು ಕಡೆ ನಿರ್ದೇಶನ ಮಾಡುತ್ತಾ ಅವರು ಕಾರ್ಯಮಗ್ನರಾಗಿದ್ದಾರೆ.

ಇದನ್ನೂ ಓದಿ:

Duniya Vijay: ‘ಎನ್​ಬಿಕೆ107’ ಚಿತ್ರದ ಶೂಟಿಂಗ್ ಆರಂಭಿಸಿದ ದುನಿಯಾ ವಿಜಯ್

ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್​, ಕೀರ್ತಿ; ‘ಸಲಗ’ ಸಕ್ಸಸ್​ ವೇದಿಕೆಯಲ್ಲಿ ‘ಹ್ಯಾಟ್ರಿಕ್​ ಹೀರೋ’

Published On - 1:11 pm, Wed, 16 March 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ