- Kannada News Photo gallery Kiss movie actress Sreeleela reportedly will play daughter role in Nandamuri Balakrishna new film
ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..
Sreeleela: ಕನ್ನಡದ ನಟಿಯರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ‘ಕಿಸ್’ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ಅವರಿಗೂ ಟಾಲಿವುಡ್ನಿಂದ ಒಳ್ಳೊಳ್ಳೆಯ ಅವಕಾಶಗಳು ಬರುತ್ತಿವೆ.
Updated on: May 23, 2022 | 8:30 AM

Kiss movie actress Sreeleela reportedly will play daughter role in Nandamuri Balakrishna new film

Kiss movie actress Sreeleela reportedly will play daughter role in Nandamuri Balakrishna new film

ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಂತ ಅವರು ಬಾಲಯ್ಯಗೆ ಜೋಡಿಯಾಗಿ ನಟಿಸುತ್ತಿಲ್ಲ. ಟ್ವಿಸ್ಟ್ ಏನೆಂದರೆ, ಮಗಳ ಪಾತ್ರಕ್ಕೆ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ.

ಈ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ವಯೋವೃದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅವರ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಅನಿಲ್ ರವಿಪುಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮೂಡಿದೆ.

ತೆಲುಗಿನ ಅನೇಕ ಸ್ಟಾರ್ ಕಲಾವಿದರ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ರವಿ ತೇಜ ನಟನೆಯ ‘ಧಮಾಕ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದಿಂದ ಫಸ್ಟ್ಲುಕ್ ರಿಲೀಸ್ ಆಗಿತ್ತು. ಇನ್ನೂ ಹಲವು ಚಿತ್ರಗಳಿಗೆ ಅವರು ನಾಯಕಿ ಆಗಿದ್ದು, ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.




