AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿನಲ್ಲಿರುವ ‘ಶಿರುಯಿ ಲಿಲಿ’ ಹೂವಿನ ಸಂತತಿ: ಘಮಘಮಿಸುವ ಈ ಹೂವು ಎಲ್ಲಿ ಕಂಡುಬರುತ್ತದೆ ಗೊತ್ತಾ?

ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ. ಇಂಥ ಹೂವು ಇದೀಗ ಅಳಿವಿನಂಚಿನಲ್ಲಿದೆ. ಇದು ಮಣಿಪುರದಲ್ಲಿ ಕಂಡುಬರುತ್ತದೆ.

TV9 Web
| Updated By: Rakesh Nayak Manchi|

Updated on: May 23, 2022 | 1:45 PM

Share
ಶಿರುಯಿ ಲಿಲಿ ಎಂಬ ಹೂವು ಅರಳಿದರೆ ಸಾಕು, ಅದರ ಸುಗಂಧ ವಾಸನೆ ಗಾಳಿ ಮೂಲಕ ಇಡೀ ಊರಿಗೇ ಹಬ್ಬುತ್ತದೆ.

An endangered Shirui lily flower

1 / 7
ಈ ಶಿರುಯ ಲಿಲಿ ಹೂವು ಕಂಡುಬರುವುದು ಮಣಿಪುರದ ಶಿರುಯಿ ಎಂಬ ಬೆಟ್ಟದಲ್ಲಿ. ಈ ಬೆಟ್ಟದಲ್ಲಿ ಮಾತ್ರ ಲಿಲಿಯನ್ನು ಕಾಣಬಹುದಾಗಿದೆ.

An endangered Shirui lily flower

2 / 7
ಶಿರುಯಿ ಬೆಟ್ಟ ಉಖ್ರುಲ್​ನ ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಇದು ತಂಗ್​ಖುಲ್ ನಾಗಾ ಬುಡಕಟ್ಟು ಜನಾಂಗದವರ ನೆಲೆಯಾಗಿದೆ.

An endangered Shirui lily flower

3 / 7
ಜಗತ್ತು ಆಧುನಿಕರಣವಾಗುತ್ತಿರುವ ನಡುವೆ ಪರಿಸರದಲ್ಲಿ ಒಂದಷ್ಟು ಸಂತತಿಗಳು ನಶಿಸುತ್ತಿವೆ. ಅವುಗಳ ಪೈಕಿ ಶಿರುಯಿ ಲಿಲಿ ಕೂಡ ಒಂದು.

An endangered Shirui lily flower

4 / 7
ಅಳಿವಿನಂಚಿನಲ್ಲಿರುವ ಶಿರುಯಿ ಹೂವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಮಣಿಪುರ ಸರ್ಕಾರ ರಾಜ್ಯಮಟ್ಟದ ಶಿರುಯಿ ಲಿಲಿ ಫೆಸ್ಟಿವಲ್ ಅನ್ನು ಪ್ರಾರಂಭಿಸಿದೆ.

An endangered Shirui lily flower

5 / 7
ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ಮೇ 25ರಿಂದ ಮೇ 28ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮವು 4ನೇ ಆವೃತ್ತಿಯಾಗಿದೆ.

An endangered Shirui lily flower

6 / 7
ಕಾರ್ಯಕ್ರಮದಲ್ಲಿ ಉಖ್ರುಲ್​ನ ಪ್ರಾಚೀನ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಲ್ಲಿನ ನಿವಾಸಿಗಳಿಂದ ಪ್ರದರ್ಶನಗಳೊಳ್ಳಲಿದೆ.

An endangered Shirui lily flower

7 / 7