- Kannada News Photo gallery Atul Kulkarni Charan V S and others starrer Manasmita Kannada movie ready for release
ಟ್ರೇಲರ್ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ
ಚಂದನವನದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ಗೆ ರೆಡಿ ಆಗಿವೆ. ಆ ಪೈಕಿ ‘ಮನಸ್ಮಿತ’ ಚಿತ್ರ ಕೂಡ ಗಮನ ಸೆಳೆಯುತ್ತಿದೆ.
Updated on: May 23, 2022 | 3:54 PM

Atul Kulkarni Charan V S and others starrer Manasmita Kannada movie ready for release

Atul Kulkarni Charan V S and others starrer Manasmita Kannada movie ready for release

‘ಮನಸ್ಮಿತ’ ಚಿತ್ರಕ್ಕೆ ಅಪ್ಪಣ್ಣ ಸಂತೋಷ್ ನಿರ್ದೇಶನ ಮಾಡಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಇತ್ತೀಚೆಗೆ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಮನಸ್ಮಿತ’ ಸಿನಿಮಾ ಗಮನ ಸೆಳೆಯುತ್ತಿದೆ. ಗಾಯಕನ ಪಾತ್ರದಲ್ಲಿ ಅತುಕ್ ಕುಲಕರ್ಣಿ ನಟಿಸಿದ್ದಾರೆ.

ಕೆ. ಕಲ್ಯಾಣ್ ಬರೆದಿರುವ ನಾಲ್ಕು ಹಾಡುಗಳಿಗೆ ಹರಿಕಾವ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ದೇವರ ಹಾಡಿಗೆ ಶಂಕರ್ ಮಹದೇವನ್ ಧ್ವನಿ ನೀಡಿರುವುದು ವಿಶೇಷ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ.

ಜೂನ್ 3ರಂದು ‘ಮನಸ್ಮಿತ’ ಸಿನಿಮಾ ಬಿಡುಗಡೆ ಆಗಲಿದೆ. ‘ಜಮುನಾ ಪ್ರೊಡಕ್ಷನ್ಸ್’ ಮೂಲಕ ಸೀತಮ್ಮ ವಿ.ಟಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೀಪಿಕಾ ವಿ.ಎಸ್. ಸಹ-ನಿರ್ಮಾಪಕಿ ಆಗಿದ್ದಾರೆ. ನಟ ಚರಣ್ ಅವರು ಈ ಸಿನಿಮಾದಲ್ಲಿ ಹಲವು ಶೇಡ್ನ ಪಾತ್ರ ನಿಭಾಯಿಸಿದ್ದಾರೆ.




