ಕರಣಿ ಸೇನಾ ವಿರೋಧಕ್ಕೆ ಮಣಿದು ಟೈಟಲ್ ಬದಲಿಸಿದ ‘ಪೃಥ್ವಿರಾಜ್​’ ಸಿನಿಮಾ ತಂಡ; ಹೊಸ ಟೈಟಲ್ ಏನು?

ಕರಣಿ ಸೇನಾ ವಿರೋಧಕ್ಕೆ ಮಣಿದು ಟೈಟಲ್ ಬದಲಿಸಿದ ‘ಪೃಥ್ವಿರಾಜ್​’ ಸಿನಿಮಾ ತಂಡ; ಹೊಸ ಟೈಟಲ್ ಏನು?
ಅಕ್ಷಯ್ ಕುಮಾರ್

‘ಪೃಥ್ವಿರಾಜ್​’ ಇದು ಪೃಥ್ವಿರಾಜ್ ಚೌಹಾಣ್​​ ಅವರ ಜೀವನ ಆಧರಿಸಿ ಸಿದ್ಧಗೊಂಡ ಸಿನಿಮಾ. ಇದಕ್ಕೆ ಯಶ್​ ರಾಜ್​ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪೃಥ್ವಿರಾಜ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

May 27, 2022 | 9:53 PM

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’​ ಸಿನಿಮಾ ತೆರೆಕಾಣವುದಕ್ಕೆ ಕರಣಿ ಸೇನಾ ಸಂಘಟನೆಯವರು ಸಾಕಷ್ಟು ಅಡಚಣೆ ಉಂಟು ಮಾಡಿದ್ದರು. ಸಿನಿಮಾದಲ್ಲಿ ಇಲ್ಲ ಸಲ್ಲದ್ದನ್ನು ತೋರಿಸಲಾಗಿದೆ ಎಂದು ಆರೋಪಿಸಿ ‘ಪದ್ಮಾವತಿ’ ಎಂದಿದ್ದ ಸಿನಿಮಾ ಹೆಸರನ್ನು ‘ಪದ್ಮಾವತ್’​ ಎಂದು (Padmavat Movie) ಬದಲಾಯಿಸಲು ಆಗ್ರಹಿಸಿದ್ದರು. ಅಷ್ಟೇ ಅಲ್ಲ, ನಾಲ್ಕೈದು ರಾಜ್ಯಗಳಲ್ಲಿ ಸಿನಿಮಾ ತೆರೆಕಾಣದೆ ಇರಲು ಕಾರಣರಾಗಿದ್ದರು. ಅದೇ ರೀತಿ ಅಕ್ಷಯ್​ ಕುಮಾರ್​ ನಟನೆಯ ‘ಪೃಥ್ವಿರಾಜ್’​ ಸಿನಿಮಾದ (Prithviraj Movie) ಮೇಲೆ ಕರಣಿ ಸೇನಾ ಕಣ್ಣು ಬಿದ್ದಿತ್ತು. ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ಕಿರಿಕ್ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಬದಲಾಯಿಸುವ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ.

‘ಪೃಥ್ವಿರಾಜ್​’ ಇದು ಪೃಥ್ವಿರಾಜ್ ಚೌಹಾಣ್​​ ಅವರ ಜೀವನ ಆಧರಿಸಿ ಸಿದ್ಧಗೊಂಡ ಸಿನಿಮಾ. ಇದಕ್ಕೆ ಯಶ್​ ರಾಜ್​ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪೃಥ್ವಿರಾಜ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನುಷಿ ಚಿಲ್ಲರ್​ ಅವರು ಸನ್ಯೋಗಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾ ಟೈಟಲ್​ ಬದಲಿಸುವಂತೆ ಕರಣಿ ಸೇನಾದವರು ಈ ಮೊದಲೇ ಪಟ್ಟು ಹಿಡಿದಿದ್ದರು. ಇದಕ್ಕೆ ತಂಡ ಮಣಿದಿದೆ.

‘ವೀರ ಯೋಧ ಸಾಮ್ರಾಟ್​ ಪೃಥ್ವಿರಾಜ್ ಚೌಹಾಣ್’​ ಎಂಬುದಾಗಿ ಚಿತ್ರದ ಟೈಟಲ್ ಬದಲಿಸಲು ಕರಣಿ ಸೇನಾದವರು ಆಗ್ರಹಿಸಿದ್ದರು. ಟೈಟಲ್ ಇಷ್ಟು ಉದ್ದ ಇದ್ದರೆ ಜನರಿಗೆ ಕನೆಕ್ಟ್ ಆಗುವುದಿಲ್ಲ. ಈ ಕಾರಣಕ್ಕೆ ಸಿನಿಮಾ ತಂಡದವರು ‘ಸಾಮ್ರಾಟ್​ ಪೃಥ್ವಿರಾಜ್’ ಎಂದು ಟೈಟಲ್ ಬದಲಿಸಿದ್ದಾರೆ.

ಇದನ್ನೂ ಓದಿ: ‘ಪೃಥ್ವಿರಾಜ್​’ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆದ ನಟಿ ಮಾನುಷಿ ಚಿಲ್ಲರ್​; ಇಲ್ಲಿವೆ ಫೋಟೋಗಳು  

‘ಹಲವು ಹಂತದಲ್ಲಿ ನಾವು ಚರ್ಚೆ ನಡೆಸಿ, ಶಾಂತಿಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಚಿತ್ರದ ಹೆಸರು ಸಾಮ್ರಾಟ್ ಪೃಥ್ವಿರಾಜ್ ಎಂದು ಬದಲಾಯಿಸಲಾಗಿದೆ’ ಎಂದು ಯಶ್ ರಾಜ್​ ಫಿಲ್ಮ್ಸ್ ತಿಳಿಸಿದೆ.

‘ಈ ಚಿತ್ರ ತೆರೆಕಾಣುವುದಕ್ಕೂ ಮೊದಲು ನಮಗೆ ಹಾಗೂ ರಜಪೂತ್​​ ಸಮಾಜದವರಿಗೆ ತೋರಿಸಬೇಕು’ ಎನ್ನುವ ಆಗ್ರಹವೂ ಕರಣಿ ಸೇನಾ ಮಾಡಿತ್ತು. ಇದಕ್ಕೆ ಚಿತ್ರತಂಡ ಮಣಿದಿತ್ತು. ಸಿನಿಮಾವನ್ನು ಅವರಿಗೆ ತೋರಿಸಿ ಗ್ರೀನ್ ಸಿಗ್ನಲ್ ಪಡೆಯಲಾಯಿತು. ಆ ಬಳಿಕ ಟೈಟಲ್ ಬದಲಾಯಿಸುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೂ ನಿರ್ಮಾಣ ಸಂಸ್ಥೆ ಈಗ ಮಣಿದಿದೆ. ಪೃಥ್ವಿರಾಜ್ ಸಿನಿಮಾ ಜೂನ್ 3ರಂದು ತೆರೆಗೆ ಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada