ಒಂದು ಆ್ಯಕ್ಷನ್ ದೃಶ್ಯಕ್ಕೆ 35 ಲಕ್ಷ ರೂ. ವೆಚ್ಛ ಮಾಡಿದ ‘ಗೌಳಿ’ ತಂಡ; ಶ್ರೀನಗರ ಕಿಟ್ಟಿ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​

ಸಿನಿಮಾದಲ್ಲಿ ಬರುವ ಹೀರೋ ಹಾಗೂ ವಿಲನ್ ಗುಂಪಿನ ನಡುವಿನ ಒಂದು ಫೈಟ್ ಭರ್ಜರಿ ಆಗಿರಲಿದೆ. 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆಯಲಾಗಿತ್ತು. ಅಲ್ಲಿ ವಿಶೇಷ ಸೆಟ್ ಹಾಕಿ ಫೈಟ್ ದೃಶ್ಯ ಶೂಟ್ ಮಾಡಲಾಗಿದೆ.

ಒಂದು ಆ್ಯಕ್ಷನ್ ದೃಶ್ಯಕ್ಕೆ 35 ಲಕ್ಷ ರೂ. ವೆಚ್ಛ ಮಾಡಿದ ‘ಗೌಳಿ’ ತಂಡ; ಶ್ರೀನಗರ ಕಿಟ್ಟಿ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 24, 2022 | 10:04 PM

ಆ್ಯಕ್ಷನ್​ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದರೆ ಸಿನಿಮಾದ ಮೈಲೇಜ್ ಹೆಚ್ಚುತ್ತದೆ. ಹೊಸಹೊಸ ರೀತಿಯಲ್ಲಿ ಫೈಟಿಂಗ್ ದೃಶ್ಯಗಳನ್ನು ತೆರೆಮೇಲೆ ತಂದರೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಈಗ ಶ್ರೀನಗರ ಕಿಟ್ಟಿ (Srinagar Kitty) ನಟನೆಯ ‘ಗೌಳಿ’ ಸಿನಿಮಾ ತಂಡ ಒಂದು ಆ್ಯಕ್ಷನ್ ದೃಶ್ಯಕ್ಕಾಗಿ 35 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈಗಾಗಲೇ ‘ಗೌಳಿ’ ಸಿನಿಮಾ (Gowli Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ಈ ಲೇಟೆಸ್ಟ್ ಮಾಹಿತಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಫೈಟ್​​ ದೃಶ್ಯಗಳು ಹೇಗೆ ಮೂಡಿ ಬಂದಿರಬಹುದು ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿ ಮೂಡಿದೆ.

ರಘು ಸಿಂಗಂ ‘ಗೌಳಿ’ ಚಿತ್ರವನ್ನು ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಹಿಂದೆಂದೂ ಮಾಡಿರದಂಥ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ. ಇದಕ್ಕೂ ಪಾತ್ರದ ಹೆಸರಿಗೂ ಏನಾದರೂ ಸಂಬಂಧವಿದೆಯೇ ಎಂಬುದು ಸದ್ಯದ ಕುತೂಹಲ. ಸದ್ಯ ‘ಗೌಳಿ’ ಚಿತ್ರದ ಡಬ್ಬಿಂಗ್ ಕೆಲಸಗಳು ಕೊನೇ ಹಂತದಲ್ಲಿವೆ. ಈ ಪಾತ್ರಕ್ಕಾಗಿ ಕಿಟ್ಟಿ ಅವರು ಉದ್ದವಾದ ಕುರುಚಲು ಗಡ್ಡ ಬಿಟ್ಟಿದ್ದಾರೆ. ಸಿನಿಮಾ ಉದ್ದಕ್ಕೂ ಇದೇ ಗೆಟಪ್ ಇರಲಿದೆ.

ಸಿನಿಮಾದಲ್ಲಿ ಬರುವ ಹೀರೋ ಹಾಗೂ ವಿಲನ್ ಗುಂಪಿನ ನಡುವಿನ ಒಂದು ಫೈಟ್ ಭರ್ಜರಿ ಆಗಿರಲಿದೆ. 3 ಎಕರೆ ಬಾಳೆತೋಟ ಹಾಗೂ 2 ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆಯಲಾಗಿತ್ತು. ಅಲ್ಲಿ ವಿಶೇಷ ಸೆಟ್ ಹಾಕಿ ಫೈಟ್ ದೃಶ್ಯ ಶೂಟ್ ಮಾಡಲಾಗಿದೆ. ಕಿಟ್ಟಿ, ಯಶ್ ಶೆಟ್ಟಿ ಜತೆಗೆ 130ಕ್ಕೂ ಅಧಿಕ ಕಲಾವಿದರು  ಹಾಗೂ ನುರಿತ ಫೈಟರ್ಸ್ ಭಾಗವಹಿಸಿದ್ದರು. ಯಲ್ಲಾಪುರ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲೂ ಇಂಥದ್ದೇ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ
Image
‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ
Image
Gowli Teaser: ‘ಗೌಳಿ’ ಮೂಲಕ ಶ್ರೀನಗರ ಕಿಟ್ಟಿ ಭರ್ಜರಿ ಕಮ್​ಬ್ಯಾಕ್; ಫ್ಯಾನ್ಸ್ ಮನಗೆಲ್ಲುತ್ತಿರುವ ಟೀಸರ್ ಇಲ್ಲಿದೆ 

ಇದನ್ನೂ ಓದಿ: ‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ

ಸಿನಿಮಾ ಉತ್ತರ ಕನ್ನಡ ಸೊಗಡಿನ ಕಥೆ. ಈ ಕಾರಣಕ್ಕೆ ಶಿರಸಿ, ಯಲ್ಲಾಪುರ, ಹೊನ್ನಾವರ ಮೊದಲಾದ ಕಡೆ ಶೂಟ್ ಮಾಡಲಾಗಿದೆ. ಸಿನಿಮಾಗೆ ಸರಿಹೊಂದುವ ಲೊಕೇಶನ್​ಗಳನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ರಘು ಸಿಂಗಂ ಅವರು ‘ಸೋಹನ ಫಿಲಂ ಫ್ಯಾಕ್ಟರಿ’ ಹೆಸರಿನ ಬ್ಯಾನರ್‌ ಆರಂಭಿಸಿ ಆ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕಿ ಪಾವನಾ ಗೌಡ ಮೊದಲಬಾರಿಗೆ ಪಕ್ಕಾ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.

ರಂಗಾಯಣ ರಘು, ಯಶ್‌ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸಮಾಡಿ ಅನುಭವ ಹೊಂದಿರುವ ಸೂರ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಕೂಡ ಸೂರ ಅವರದ್ದೇ. ನಿರ್ದೇಶಕರಾಗಿ ಇದು ಮೊದಲ ಸಿನಿಮಾ.

ಇದನ್ನೂ ಓದಿ: Gowli Teaser: ‘ಗೌಳಿ’ ಮೂಲಕ ಶ್ರೀನಗರ ಕಿಟ್ಟಿ ಭರ್ಜರಿ ಕಮ್​ಬ್ಯಾಕ್; ಫ್ಯಾನ್ಸ್ ಮನಗೆಲ್ಲುತ್ತಿರುವ ಟೀಸರ್ ಇಲ್ಲಿದೆ 

ಶಶಾಂಕ್ ಶೇಷಗಿರಿ ಅವರು ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂ ಮೋರ್, ಅರ್ಜುನ್ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ