ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಸ್ಯಾಂಡಲ್ವುಡ್ನ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
ಕನ್ನಡ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆಯೂ ಮಾತನಾಡಿದ್ದರು. ಟಿವಿ9 ಜತೆ ಮಾತನಾಡುತ್ತಾ ಅವರು ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಕಾಸ್ಟಿಂಗ್ ಕೌಚ್ (Casting couch) ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಕೆಲ ನಟಿಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ತಮಗೆ ಆದ ಕಹಿ ಅನುಭವದ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ. ಟಾಲಿವುಡ್ ನಿರ್ದೇಶಕ ಗೀತ ಕೃಷ್ಣ ಅವರು (Geetha Krishna) ಈಗಲೂ ಕಾಸ್ಟಿಂಗ್ ಕೌಚ್ ಇದೆ ಎನ್ನುವ ಶಾಕಿಂಗ್ ಹೇಳಿಕೆ ನೀಡಿದ್ದರು. ಅಲ್ಲದೆ, ಕನ್ನಡ ಚಿತ್ರರಂಗದ (Sandalwood) ಕಾಸ್ಟಿಂಗ್ ಕೌಚ್ ಬಗ್ಗೆಯೂ ಮಾತನಾಡಿದ್ದರು. ಟಿವಿ9 ಜತೆ ಮಾತನಾಡುತ್ತಾ ಅವರು ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
‘ಕಾಸ್ಟಿಂಗ್ ಕೌಚ್ ಹುಟ್ಟಿದ್ದು ಕಾಲಿವುಡ್ನಲ್ಲಿ. ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು. ಅವಕಾಶ ಬೇಕು ಎಂದು ಮಂಚ ಏರುವುದು ಕನ್ನಡದಲ್ಲಿ ಕಾಮನ್ ಆಗಿಬಿಟ್ಟಿದೆ. ಹೀಗಾಗಿ ನಾನು 20 ವರ್ಷಗಳ ಹಿಂದೆ ಕನ್ನಡದ ಸಹವಾಸ ಬಿಟ್ಟೆ’ ಎನ್ನುವ ಹೇಳಿಕೆಯನ್ನು ಗೀತ ಕೃಷ್ಣ ಅವರು ನೀಡಿದ್ದರು. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಎಲ್ಲ ಕಡೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಗೀತ ಕೃಷ್ಣ ಈ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ
‘ಅವಕಾಶಕ್ಕಾಗಿ ಮಂಚ ಏರುವುದು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ ಸೇರಿ ಎಲ್ಲಾ ಇಂಡಸ್ಟ್ರಿಯಲ್ಲೂ ಇದೆ. ಚಾನ್ಸ್ಗಾಗಿ ಮಂಚಕ್ಕೆ ಕರೆಯಲಾಗುತ್ತದೆ. ನಾನು ಇಲ್ಲಿ ಪ್ರಮುಖವಾಗಿ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿಲ್ಲ. ನನಗೆ ಆದ ಅನುಭವದ ಬಗ್ಗೆ ಹೇಳಿದ್ದೇನೆ. ಎಲ್ಲಾ ಭಾಷೆಗಳಲ್ಲೂ ಕಾಸ್ಟಿಂಗ್ಕೌಚ್ ಇತ್ತು, ಈಗಲೂ ಇದೆ ಅಂತ ಹೇಳಿದ್ದೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ’ ಎಂದಿದ್ದಾರೆ ಗೀತ ಕೃಷ್ಣ.
‘ಕೋಕಿಲ’, ‘ಟೈಮ್’, ‘ಕಾಫಿ ಬಾರ್’ ಮೊದಲಾದ ಸಿನಿಮಾಗಳನ್ನು ಗೀತ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಟಾಲಿವುಡ್ನಲ್ಲಿ ಅವರ ಪರಿಚಯ ಅನೇಕರಿಗೆ ಇದೆ. ಅವರು ನೀಡಿದ್ದ ಹೇಳಿಕೆ ಚರ್ಚೆ ಸೃಷ್ಟಿಸಿರುವುದರಿಂದ ಸ್ಪಷ್ಟನೆ ನೀಡುವ ಕೆಲಸ ಆಗಿದೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಸ್ಟೈಲ್ ಹೇಗಿತ್ತು?
ಗೀತ ಕೃಷ್ಣ ಅವರ ಹೇಳಿಕೆಗೆ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಭಾಷೆ ಈಗ ಬೆಳೆಯುತ್ತಾ ಇದೆ. ಪ್ರಪಂಚದಾದ್ಯಂತ ಕನ್ನಡ ಭಾಷೆಯ ತಾಕತ್ತು ಏನು ಅನ್ನೊದು ಎಲ್ಲರಿಗೂ ಗೊತ್ತು. ಯಾರೋ ಮಾತನಾಡಿದರ ಬಗ್ಗೆ ನಾವು ಕಿವಿ ಕೊಡೋದು ಬೇಡ. ಅವರು ಮಾತನಾಡಲಿ. ನಾವು ಬೆಳೆಯುತ್ತ ಹೋಗೋಣ. ನಾವ್ ಬೆಳೆಯುತ್ತಾ ಇದ್ದೇವೆ ಎಂಬ ಕಾರಣಕ್ಕೆ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:31 pm, Wed, 25 May 22