1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

TV9kannada Web Team

TV9kannada Web Team | Edited By: Rajesh Duggumane

Updated on: May 25, 2022 | 1:34 PM

 ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದರು.

1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ
ಐಶ್ವರ್ಯಾ ರೈ

ಐಶ್ವರ್ಯಾ ರೈ ಅವರು (Aishwarya Rai) ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇಟ್ಟುಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಅವರನ್ನು ವರಿಸಿದ ನಂತರ ಐಶ್ವರ್ಯಾ ಕುಟುಂಬ ಕೆಲಸಗಳಲ್ಲಿ ಬ್ಯುಸಿ ಆದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದರೆ  ಈಗಲೂ ಅವರಿಗೆ ಕೋಟಿಕೋಟಿ ಸಂಭಾವನೆ ನೀಡೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ, ಅವರು ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಹೀಗಾಗಿ ದುಡ್ಡಿಗಾಗಿ ಅವರು ಬರುವ ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆರಂಭದಲ್ಲಿ ಐಶ್ವರ್ಯಾ ರೈ ತುಂಬಾನೇ ಕಷ್ಟಪಟ್ಟಿದ್ದರು. ಅವರು ಕಡಿಮೆ ಸಂಭಾವನೆ ಪಡೆಯುತ್ತಿದ್ದರು. 1992ರಲ್ಲಿ ಐಶ್ವರ್ಯಾ ಅವರು ಪಡೆದ ಸಂಭಾವನೆಯ (Aishwarya Rai Remuneration) ವಿಚಾರ ಈಗ ಹೊರಬಿದ್ದಿದೆ. ಈ ಫೋಟೋಗಳು ಈಗ ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಅವರಿಗೆ 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಕ್ಕಿತು. ಅದಕ್ಕೂ ಮೊದಲು ಅವರು ಸಂಪೂರ್ಣವಾಗಿ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದರು. 1992ರಲ್ಲಿ ಐಶ್ವರ್ಯಾ ರೈ ಅವರು ಫೋಟೋಶೂಟ್ ಒಂದರಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಅವರು ಪಡೆದ ಹಣ ಕೇವಲ 1500 ರೂಪಾಯಿ ಆಗಿತ್ತು. ಅವರು ಪಡೆದ ಚೆಕ್​ನ ಫೋಟೋ ಈಗ ವೈರಲ್ ಆಗುತ್ತಿದೆ.

ತಾಜಾ ಸುದ್ದಿ

1992ರ ಸಂದರ್ಭದಲ್ಲಿ ಐಶ್ವರ್ಯಾ ಅವರ ವಯಸ್ಸು 18 ವರ್ಷ ಆಗಿತ್ತು. ಮ್ಯಾಗಜಿನ್ ಕೆಟಲಾಗ್​ಗೆ ನಡೆದ ಈ ಶೂಟ್​ನಲ್ಲಿ ಅವರು ಪಾಲ್ಗೊಂಡಿದ್ದರು. ಈ ಚೆಕ್​ನ ಫೋಟೋವನ್ನು ವಿಮಲ್ ಉಪಾಧ್ಯಾಯ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಅವರು ವಿಶ್ವ ಸುಂದರಿ ಪಟ್ಟ ಗೆದ್ದ ಕೆಲ ವರ್ಷಗಳ ನಂತರ ಅಂದರೆ 1997ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ನಂತರ ಹಿಂದಿಯಲ್ಲಿ ಬ್ಯುಸಿ ಆದರು.

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಸ್ಟೈಲ್​​ ಹೇಗಿತ್ತು?

ಸದ್ಯ ಫ್ರಾನ್ಸ್​ನಲ್ಲಿ ‘ಕಾನ್ ಸಿನಿಮೋತ್ಸವ’ ನಡೆಯುತ್ತಿದೆ. ಈ ಫಿಲ್ಮ್​ ಫೆಸ್ಟಿವಲ್​ನಲ್ಲಿ ನಟಿ ಐಶ್ವರ್ಯಾ ರೈ ಕೂಡ ಭಾಗಿ ಆಗಿದ್ದಾರೆ. ಅವರು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಾಜೀವ್​ ಮುಲ್ಚಂದಾನಿ ಜತೆ ಆಪ್ತತೆ 

ಐಶ್ವರ್ಯಾ ರೈ ಬಾಲಿವುಡ್​ಗೆ ಕಾಲಿಡುವುದಕ್ಕೂ ಮುನ್ನ ಮಾಡೆಲಿಂಗ್​ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಆ ಸಂದರ್ಭದಲ್ಲಿ ರಾಜೀವ್​ ಮುಲ್ಚಂದಾನಿ ಕೂಡ ಮಾಡೆಲ್​ ಆಗಿ ಮಿಂಚುತ್ತಿದ್ದರು. ರಾಜೀವ್​ ಮತ್ತು ಐಶ್ವರ್ಯಾ ಜೊತೆ ಹೆಚ್ಚು ಆಪ್ತತೆ ಬೆಳೆದಿತ್ತು. ಆದರೆ ಅವರಿಬ್ಬರ ನಡುವೆ ನಟಿ ಮನಿಷಾ ಕೊಯಿರಾಲಾ ಎಂಟ್ರಿ ನೀಡಿದರು. ಮನಿಷಾ ಮತ್ತು ರಾಜೀವ್​ ನಡುವೆ ಒಡನಾಟ ಹೆಚ್ಚಿದ ಬಳಿಕ ಐಶ್ವರ್ಯಾ ಸೈಲೆಂಟ್​ ಆಗಿಬಿಟ್ಟರು. ಆದರೆ ರಾಜೀವ್​ ಜೊತೆ ಮನಿಷಾ ಹೆಚ್ಚು ಕಾಲ ಚೆನ್ನಾಗಿ ಇರಲಿಲ್ಲ. ಕೆಲವೇ ತಿಂಗಳ ಬಳಿಕ ಇಬ್ಬರ ನಡುವೆ ಬ್ರೇಕಪ್​ ಆಯಿತು. ಅದಕ್ಕೆ ಐಶ್ವರ್ಯಾ ರೈ ಕಾರಣ ಎಂದು ಮನಿಷಾ ಆರೋಪ ಮಾಡಿದ್ದರು. ಇದು ಐಶ್ವರ್ಯಾಗೆ ಬೇಸರ ತರಿಸಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada