Karan Johar: 50ನೇ ವಸಂತಕ್ಕೆ ಕಾಲಿಟ್ಟ ಕರಣ್ ಜೋಹರ್; ಸ್ಟಾರ್ ನಿರ್ಮಾಪಕನ ಪಾರ್ಟಿಯಲ್ಲಿ ಯಶ್?

ಕರಣ್​ ಜೋಹರ್​ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಈ ಪಾರ್ಟಿ ಫೋಟೋಗಳು ವೈರಲ್ ಆಗುತ್ತವೆ. ಈ ಬಾರಿ ಅವರ ಬರ್ತ್​ಡೇ ವಿಶೇಷವಾಗಿರಲಿದೆ.

Karan Johar: 50ನೇ ವಸಂತಕ್ಕೆ ಕಾಲಿಟ್ಟ ಕರಣ್ ಜೋಹರ್; ಸ್ಟಾರ್ ನಿರ್ಮಾಪಕನ ಪಾರ್ಟಿಯಲ್ಲಿ ಯಶ್?
ಕರಣ್ ಜೋಹರ್-ಯಶ್
TV9kannada Web Team

| Edited By: Rajesh Duggumane

May 25, 2022 | 7:00 AM

ಕರಣ್ ಜೋಹರ್ ಅವರು (Karan Johar) ನಿರ್ಮಾಣ ಹಾಗೂ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಆಲಿಯಾ ಭಟ್ (Alia Bhatt), ವರುಣ್ ಧವನ್​ ಸೇರಿ ಸಾಕಷ್ಟು ಜನರನ್ನು ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ (Bollywood) ಸಕ್ರಿಯರಾಗಿರುವ ಅವರು ತಮ್ಮದೇ ಚಾರ್ಮ್ ಸೃಷ್ಟಿಸಿಕೊಂಡಿದ್ದಾರೆ. ಅವರು ಅತ್ಯಂತ ಪ್ರಭಾವಿ ವ್ಯಕ್ತಿ ಕೂಡ ಹೌದು. ಅದ್ದೂರಿ ಸಿನಿಮಾಗಳ ಮೂಲಕ ಹೆಸರು ಮಾಡಿರುವ ಅವರು ಇಂದು (ಮೇ 25) ತಮ್ಮ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅವರ ಬರ್ತ್​ಡೇ ಅದ್ದೂರಿಯಾಗಿ ನಡೆಯಲಿದೆ. ಈ ಪಾರ್ಟಿಗೆ ಯಶ್ ಸೇರಿ ದಕ್ಷಿಣದ ಅನೇಕ ಸೆಲೆಬ್ರಿಟಿಗಳು ಬರುವ ಸಾಧ್ಯತೆ ಇದೆ.

ಕರಣ್​ ಜೋಹರ್​ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ತಮ್ಮ ಸರ್ಕಲ್​ನಲ್ಲಿರುವ ಅನೇಕ ಸೆಲೆಬ್ರಿಟಿಗಳಿಗೆ ಅವರು ಆಹ್ವಾನ ನೀಡುತ್ತಾರೆ. ಈ ಪಾರ್ಟಿಯಲ್ಲಿ ಎಲ್ಲರೂ ಕುಡಿದು, ತಿಂದು, ಕುಣಿದು ಕುಪ್ಪಳಿಸುತ್ತಾರೆ. ಈ ಪಾರ್ಟಿ ಫೋಟೋಗಳು ವೈರಲ್ ಆಗುತ್ತವೆ. ಈ ಬಾರಿ ಅವರ ಬರ್ತ್​ಡೇ ವಿಶೇಷವಾಗಿರಲಿದೆ. ಅದಕ್ಕೆ ಕಾರಣಕ್ಕೆ ದಕ್ಷಿಣದವರಿಗೆ ಅವರು ಆಹ್ವಾನ ನೀಡಿದ್ದಾರೆ ಎಂಬ ವಿಚಾರ.

ಕರಣ್ ಜೋಹರ್ ಅವರು ಬಾಲಿವುಡ್​ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಹಲವು ಬಾಲಿವುಡ್​ ಸೆಲೆಬ್ರಿಟಿ ಮಕ್ಕಳನ್ನು ಅವರು ಪರಿಚಯಿಸಿದ್ದಾರೆ. ಆದರೆ, ಈಗ ಅವರಿಗೆ ದಕ್ಷಿಣದ ಜತೆ ಒಳ್ಳೆಯ ನಂಟು ಬೆಳೆದಿದೆ. ದಕ್ಷಿಣದ ನಟ ವಿಜಯ್ ದೇವರಕೊಂಡ ಅವರ ‘ಲೈಗರ್​’ ಚಿತ್ರ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಕರಣ್ ಹೊತ್ತಿದ್ದಾರೆ. ‘ಕೆಜಿಎಫ್ 2’ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದರು. ಈ ಚಿತ್ರವನ್ನು ನೋಡಿ ಅವರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ದಕ್ಷಿಣದವರ ಮೇಲೆ ಅವರಿಗೆ ವಿಶೇಷ ಪ್ರೀತಿ ಬೆಳೆದಿದೆ.

ಇದನ್ನೂ ಓದಿ: ‘ತಲೆ ಉಪಯೋಗಿಸಿ ಸ್ವಂತವಾಗಿ ಏನನ್ನಾದರೂ ಮಾಡಿ’; ಕರಣ್ ಜೋಹರ್​ಗೆ ನೆಟ್ಟಿಗರ ಟೀಕೆ

ಕರಣ್ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬರ್ತ್​ಡೇಗೆ ಯಶ್, ವಿಜಯ್ ದೇವರಕೊಂಡ, ನಿರ್ದೇಶಕ ಪ್ರಶಾಂತ್​ ನೀಲ್​, ನಿರ್ಮಾಪಕ ವಿಜಯ್​ ಕಿರಗಂದೂರು ಮೊದಲಾದವರಿಗೆ ಆಹ್ವಾನ ನೀಡಲಾಗಿದೆ ಎಂದು ವರದಿ ಆಗಿದೆ. ನಾಳೆ ಫೋಟೋ ಹೊರಬಿದ್ದ ನಂತರವೇ ಯಾರೆಲ್ಲ ಪಾರ್ಟಿಗೆ ಬಂದಿದ್ದರು ಎಂಬ ವಿಚಾರ ತಿಳಿಯಲಿದೆ. ಕರಣ್ ಬರ್ತ್​ಡೇ ಪ್ರಯುಕ್ತ ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ಶುಭಾಯಶಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ತಿಳಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada