ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !

ಕಾಫಿ ವಿತ್​ ಕರಣ್​ದ ಕೊನೇ ಶೋ 2019ರಲ್ಲಿ ನಡೆದಿದೆ. ಅಲ್ಲಿಂದ ಇಲ್ಲಿಯವರೆಗೆ ಹೊಸ ಸೀಸನ್​ ಶುರುವಾಗಿರಲಿಲ್ಲ. ಆದರೆ ಈ ಬಾರಿ ಪಕ್ಕಾ ಪ್ರಾರಂಭವಾಗಲಿದೆ. ಮೇ ತಿಂಗಳಿಂದ ಕರಣ್​ ಶೂಟಿಂಗ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. 

ಮತ್ತೆ ಪ್ರಾರಂಭವಾಗುವುದಿಲ್ಲ ಕಾಫಿ ವಿತ್ ಕರಣ್​; ಭಾವನಾತ್ಮಕ ಸಾಲುಗಳ ಮೂಲಕ ವಿಷಯ ತಿಳಿಸಿದ ಕರಣ್​ ಜೋಹರ್​ !
ಕಾಫಿ ವಿತ್​ ಕರಣ್​
Follow us
TV9 Web
| Updated By: Lakshmi Hegde

Updated on:May 04, 2022 | 6:38 PM

ಹಿಂದಿಯ ಖ್ಯಾತ ಶೋ ಕಾಫಿ ವಿತ್​ ಕರಣ್ (Koffee With Karan)​ ಮತ್ತೆ ಶುರುವಾಗೋದಿಲ್ಲ. ಕರಣ್​ ಜೋಹರ್​ ನಿರೂಪಣೆ ಮಾಡುತ್ತಿದ್ದ ಈ ಕಾರ್ಯಕ್ರಮದ ಪಾಸಿಟಿವ್​ ಆಗಿ ಎಷ್ಟು ಜನಪ್ರಿಯವಾಗಿತ್ತೋ, ಅಷ್ಟೇ ವಿವಾದಗಳಿಂದಲೂ ಪ್ರಸಿದ್ಧಿ ಪಡೆದಿತ್ತು. ಕಳೆದ ಸೀಸನ್​​ನಲ್ಲಿ ಕೂಡ ಸಾಕಷ್ಟು ವಿವಾದ ಉಂಟು ಮಾಡಿದ್ದ ಕಾಫಿ ವಿತ್​ ಕರಣ್​, ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಆರಂಭವಾಗಲಿದೆ. ಹೊಸ ಸೀಸನ್ (7ನೇ ಸೀಸನ್​)​ ಶುರುಮಾಡಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಅಭಿಮಾನಿಗಳಿಗೆ ಕರಣ್ ಜೋಹರ್ ಒಂದು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.  ‘ಕಾಫಿ ವಿತ್​ ಕರಣ್​’ ಹೊಸ ಸೀಸನ್​ ನಡೆಯೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ, ಈ ಬಗ್ಗೆ ಒಂದು ಭಾವನಾತ್ಮಕ ಬರಹವನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಾಫಿ ವಿತ್​ ಕರಣ್​ ಎಂಬುದು ಅತ್ಯಂತ ಹಳೇ ಶೋ. 2004ರಲ್ಲಿ ಮೊದಲು ಪ್ರಾರಂಭವಾದ ಈ ಕಾರ್ಯಕ್ರಮ ಮುಂದೆ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿತು. ಬರಬರುತ್ತ ಈ ಶೋ ನೋಡುವವರ ಸಂಖ್ಯೆಯೂ ಏರಿತು. ಶೋದಲ್ಲಿ ದೊಡ್ಡದೊಡ್ಡ ಸ್ಟಾರ್​ಗಳೆಲ್ಲ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ಅದರೊಂದಿಗೆ ಈ ಶೋದಲ್ಲಿ ಕರಣ್​ ಕೇಳುವ ಕೆಲವು ಪ್ರಶ್ನೆಗಳು, ಉತ್ತರಕ್ಕಾಗಿ ನೀಡುವ  ಆಯ್ಕೆಗಳೆಲ್ಲ ವಿವಾದ ಸೃಷ್ಟಿಸಿದ್ದವು. ಒಂದಷ್ಟು ಸ್ಟಾರ್ ನಟ/ನಟಿಯರು ಬೇಸರ ಮಾಡಿಕೊಂಡಿದ್ದೂ ಇದೆ. ಇಷ್ಟೆಲ್ಲ ಆದರೂ ಅದೊಂದು ಭರ್ಜರಿ ಟಿಆರ್​ಪಿ ಇರುವ ಶೋ ಆಗಿತ್ತು.

ಕಾಫಿ ವಿತ್​ ಕರಣ್​ದ ಕೊನೇ ಶೋ 2019ರಲ್ಲಿ ನಡೆದಿದೆ. ಅಲ್ಲಿಂದ ಇಲ್ಲಿಯವರೆಗೆ ಹೊಸ ಸೀಸನ್​ ಶುರುವಾಗಿರಲಿಲ್ಲ. ಆದರೆ ಈ ಬಾರಿ ಪಕ್ಕಾ ಪ್ರಾರಂಭವಾಗಲಿದೆ. ಮೇ ತಿಂಗಳಿಂದ ಕರಣ್​ ಶೂಟಿಂಗ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.  ಆದರೆ ಕರಣ್​ ಜೋಹರ್​ ಈಗ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ‘ ಕಾಫಿ ವಿತ್​ ಕರಣ್​ ಎಂಬುದು ನನ್ನ ಮತ್ತು ನಿಮ್ಮೆಲ್ಲರ (ವೀಕ್ಷಕರ) ಜೀವನದ ಒಂದು ಭಾಗವೇ ಆಗಿಹೋಗಿತ್ತು. ಈ ಶೋ ಆರು ಸೀಸನ್​​ಗಳನ್ನು ಪೂರ್ಣಗೊಳಿಸಿದೆ. ಹಾಗೇ ನಾವು ವೀಕ್ಷಕರ ಮೇಲೆ ಪ್ರಭಾವ ಬೀರಿದ್ದೇವೆ ಮತ್ತು ಪಾಪ್​ ಸಂಸ್ಕೃತಿಯ (ಇಂದಿನ ಯುವಜನರು ಇಷ್ಟಪಡುವ ಆಧುನಿಕ ಸಂಸ್ಕೃತಿ) ಇತಿಹಾಸದಲ್ಲಿ ಸ್ಥಾನ ಪಡೆದಿದ್ದೇವೆ ಎಂಬ ನಂಬಿಕೆ ನನಗೆ ಇದೆ. ಆದರೆ ಇನ್ನು ಮುಂದೆ ಕಾಫಿ ವಿತ್​ ಕರಣ್ ಎಂಬ ಶೋ ಇರುವುದಿಲ್ಲ. ಹೊಸ ಸೀಸನ್​ ಶುರುವಾಗುವುದಿಲ್ಲ ಎಂಬುದನ್ನು ಅತ್ಯಂತ ಭಾರವಾದ ಹೃದಯದಿಂದ ನಾನು ನಿಮಗೆ ತಿಳಿಸುತ್ತಿದ್ದೇನೆ’ ಎಂದು ಕರಣ್​ ಜೋಹರ್​ ಬರೆದಿದ್ದಾರೆ.

ಅಭಿಮಾನಿಗಳಿಗಿತ್ತು ಕುತೂಹಲ ಕಾಫಿ ವಿತ್​ ಕರಣ್​ ಶೋ ಮತ್ತೆ ಬರಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅದರ ವೀಕ್ಷಕರು, ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಅದೂ ಕೂಡ ಪ್ರೀ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿಬಿಟ್ಟಿವೆ. ಕರಣ್​ ಜೋಹರ್​ ಅವರು ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಶೂಟಿಂಗ್​ನಲ್ಲಿದ್ದು, ಅದು ಕೊನೇ ಹಂತದಲ್ಲಿ. ಮೇ ತಿಂಗಳಲ್ಲಿ ಕಾಫಿ ವಿತ್​ ಕರಣ್​ ಶೂಟಿಂಗ್​ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಬಾರಿ ಯಾರೆಲ್ಲ ಅತಿಥಿಗಳು ಬರಬಹುದು ಎಂಬ ಚರ್ಚೆ ಅದಾಗಲೇ ಶುರುವಾಗಿತ್ತು. ರಷ್ಮಿಕಾ ಮಂದಣ್ಣ ಕೂಡ ಕಾಫಿ ವಿತ್​ ಕರಣ್​ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ವರದಿಯಾಗಿತ್ತು.

ನೆಟ್ಟಿಗರಿಗೆ ನಂಬಿಕೆಯಿಲ್ಲ

ಇನ್ನು ಕರಣ್ ಜೋಹರ್ ಸೋಷಿಯಲ್​ ಮೀಡಿಯಾ ಪೋಸ್ಟ್ ಹಾಕಿದ್ದರೂ ಕೂಡ ನೆಟ್ಟಿಗರು ಅದನ್ನು ನಂಬುತ್ತಿಲ್ಲ. ಕಾಫಿ ವಿತ್​ ಕರಣ್​ ಶೋ ಇರುವುದಿಲ್ಲ ಎಂದು ನೀವು ತಮಾಷೆ ಮಾಡುತ್ತಿದ್ದೀರಿ. ಖಂಡಿತ ಶುರುವಾಗುತ್ತದೆ ಎಂದು ಅನೇಕರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸೀಸನ್​ 7 ಮತ್ತೆ ಶುರುವಾಗುತ್ತದೆ ಎಂದು ಅನೇಕರು ಭರವಸೆ ವ್ಯಕ್ತಪಡಿಸಿದ್ದಾರೆ. ನಾವು ಕಾಯುತ್ತಿರುತ್ತೇವೆ, ಮತ್ತೊಂದು ಸೀಸನ್​​ ಮೂಲಕ ಬನ್ನಿ ಎಂದು ಒಂದಷ್ಟು ಜನರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Siddaramaiah Press Meet: ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು; ಸಿದ್ದರಾಮಯ್ಯ ಒತ್ತಾಯ

Published On - 12:52 pm, Wed, 4 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ