ರಂಜಾನ್ ಪ್ರಯುಕ್ತ ಶಾರುಖ್ ಮನೆ ಎದುರು ಜನಸಾಗರ; ಕಿಂಗ್ ಖಾನ್ ದರ್ಶನಕ್ಕೆ ಬಂದ ಅಭಿಮಾನಿಗಳ ದಂಡು
ಶಾರುಖ್ ಖಾನ್ ನಿವಾಸ ‘ಮನ್ನತ್’ ಎದುರು ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ರಂಜಾನ್ ಶುಭಾಶಯ ಕೋರಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲಿಯೂ ಅವರ ಮನೆ ಎದುರು ಫ್ಯಾನ್ಸ್ ಜಮಾಯಿಸುತ್ತಾರೆ. ಮನೆಯ ಬಾಲ್ಕನಿಗೆ ಬರುವ ಶಾರುಖ್ ಖಾನ್ ಅವರು ಅಭಿಮಾನಿಗಳ (Shah Rukh Khan Fans) ಕಡೆಗೆ ಕೈ ಬೀಸುತ್ತಾರೆ. ಎಲ್ಲರಿಗೂ ನಮಸ್ಕರಿಸಿ ಖುಷಿಪಡಿಸುತ್ತಾರೆ. ಈಗ ರಂಜಾನ್ (Ramadan 2022) ಪ್ರಯುಕ್ತ ಕೂಡ ಈ ಸನ್ನಿವೇಶ ಮರುಕಳಿಸಿದೆ. ಶಾರುಖ್ ನಿವಾಸ ‘ಮನ್ನತ್’ ಎದುರು ನೆರೆದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಕಿಂಗ್ ಖಾನ್. ಆ ಸಂದರ್ಭದ ವಿಡಿಯೋ ಇಲ್ಲಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ‘ಪಠಾಣ್’, ‘ಡಂಕಿ’ ಮುಂತಾದ ಚಿತ್ರಗಳ ಕೆಲಸದಲ್ಲಿ ಶಾರುಖ್ ಬ್ಯುಸಿ ಆಗಿದ್ದಾರೆ. ‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದು, ರಾಜ್ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ‘ಡಂಕಿ’ ಮೂಡಿಬರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್; ಶಾರುಖ್ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್
ದುಬೈ ಬಗ್ಗೆ ಶಾರುಖ್ ಪ್ರೀತಿಯ ಮಾತು; ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?