ಪಶ್ಚಾತ್ತಾಪ ಪಡುತ್ತಿರುವವರ ಮೊರೆ ಆಲಿಸಲೆಂದೇ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾರೆ: ಬಸನಗೌಡ ಯತ್ನಾಳ್

ಪಶ್ಚಾತ್ತಾಪ ಪಡುತ್ತಿರುವವರ ಮೊರೆ ಆಲಿಸಲೆಂದೇ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾರೆ: ಬಸನಗೌಡ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 03, 2022 | 10:25 PM

ನಾಗರಾಜ್ ನೊಂದುಕೊಂಡಿರುವುದು ನಿಜವಾದರೂ ಅವರ ಮನಸ್ಸಿನಲ್ಲಿ ಕೆಟ್ಟ ವಿಚಾರಗಳಿಲ್ಲ. ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ಪಶ್ಚಾತ್ತಾಪ ಪಡುತ್ತಿದ್ದರೆ ಅದನ್ನು ಸರಿಪಡಿಸಲೆಂದೇ ಬೆಂಗಳೂರಿಗೆ ಅಮಿತ್ ಶಾ ಬಂದಿದ್ದಾರೆ ಎಂದು ಯತ್ನಾಳ್ ಹೇಳಿದರು.

Vijayapura: ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವುದು, ತಮ್ಮ ಪಕ್ಷದ ನಾಯಕರ ವಿರುದ್ಧವೇ ಬಾಯಿಬಿಡುವುದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರ ಜಾಯಮಾನ. ಇತ್ತಿಚೆಗೆಗಂತೂ ಅವರ ವಾಗ್ದಾಳಿ ಹೆಚ್ಚುತ್ತಿದ್ದೆ. ಹೆಚ್ಚುಕಡಿಮೆ ಪ್ರತಿದಿನ ತಮ್ಮ ಪಕ್ಷದ ನಾಯಕರ ವಿರುದ್ಧ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮಂಗಳವಾರ ಅವರಿಗೆ ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಅವರು ಕಾಂಗ್ರೆಸ್ ತೊರೆದು ಪಶ್ಚಾತ್ತಾಪ ಪಡುವಂತಾಗಿದೆ ಅಂತ ಹೇಳಿರುವ ಬಗ್ಗೆ ಕೇಳಲಾಯಿತು. ನಾಗರಾಜ್ ಬಗ್ಗೆ ಯತ್ನಾಳ್ ಅವರಲ್ಲಿ ನಿಸ್ಸಂದೇಹವಾಗಿ ಸಾಫ್ಟ್ ಕಾರ್ನರ್ (soft corner) ಇದೆ ಮಾರಾಯ್ರೇ. ಅವರನ್ನು ಬಹಳ ಹತ್ತಿರದಿಂದ ಬಲ್ಲೆ, ಬಹಳ ಒಳ್ಳೆಯ ಮನುಷ್ಯ, ಅವರು ನೊಂದಿಕೊಂಡಿರುವುದು ಸತ್ಯ, ಅವರು ವಸತಿ ಖಾತೆ ಬಯಸಿದ್ದರು ಅದರೆ ಅದು ಸಿಗಲಿಲ್ಲ ಎಂದು ಯತ್ನಾಳ್ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಅವರ ಬಹಳ ದೊಡ್ಡ ಕೊಡುಗೆ ಇದೆ. ಆಪರೇಶನ್ ಕಮಲಗೆ ಅವರು ತನು-ಮನ-ಧನದಿಂದ ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದವರೇ ಅವರ ಕೈಬಿಟ್ಟರು ಎಂದು ಯತ್ನಾಳ್ ಹೇಳಿದಾಗ ಅವರು ಬಿ ಎಸ್ ಯಡಿಯೂರಪ್ಪನವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಿದ್ದಾರೆನ್ನುವುದು ಅರ್ಥಮಾಡಿಕೊಳ್ಳಬಹುದಿತ್ತು.

ನಾಗರಾಜ್ ನೊಂದುಕೊಂಡಿರುವುದು ನಿಜವಾದರೂ ಅವರ ಮನಸ್ಸಿನಲ್ಲಿ ಕೆಟ್ಟ ವಿಚಾರಗಳಿಲ್ಲ. ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ಪಶ್ಚಾತ್ತಾಪ ಪಡುತ್ತಿದ್ದರೆ ಅದನ್ನು ಸರಿಪಡಿಸಲೆಂದೇ ಬೆಂಗಳೂರಿಗೆ ಅಮಿತ್ ಶಾ ಬಂದಿದ್ದಾರೆ. ಪಶ್ಚಾತ್ತಾಪ ಪಡುತ್ತಿರುವವರ ಸಮಸ್ಯೆಯನ್ನು ಕೇಳಲು ಅವರು ಬಂದಿದ್ದಾರೆ, ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ