ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ

ಅನ್ನ ಭಾಗ್ಯ, ತಾಳಿ ಭಾಗ್ಯ ಜನರನ್ನ ದರಿದ್ರ ಮಾಡುತ್ತದೆ; ಅದನ್ನ ಬಂದ್ ಮಾಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಒತ್ತಾಯ
ಬಸನಗೌಡ ಪಾಟೀಲ ಯತ್ನಾಳ್

Anna Bhagya: ತಾಳಿಭಾಗ್ಯ, ಅನ್ನಭಾಗ್ಯ ಯೋಜನೆ ನಿಲ್ಲಿಸಿ ಎಂದ ಯತ್ನಾಳ್ ಈ ಎಲ್ಲಾ ಯೋಜನೆಗಳು ಜನರನ್ನ ದರಿದ್ರ ಮಾಡುತ್ತವೆ. ಈ ಅನ್ನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತದೆ. ಈ ಯೋಜನೆಗಳನ್ನ ಬಂದ್ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಧೈರ್ಯ ತುಂಬುತ್ತಾ, ಒತ್ತಾಯಪೂರ್ವಕವಾಗಿ ಹೇಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

TV9kannada Web Team

| Edited By: sadhu srinath

Apr 26, 2022 | 5:38 PM

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (CM Basavaraj Bommai) ಇಂದು ವಿಜಯಪುರ ಪ್ರವಾಸದಲ್ಲಿದ್ದಾರೆ. ಈ ವೇಳೆ ಬಿಜೆಪಿಯ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Vijayapura BJP MLA Basanagouda Patil Yatnal) ಅವರು ಮುಖ್ಯಮಂತ್ರಿ ಸಮ್ಮುಖದಲ್ಲಿ ಭಾಷಣ ಮಾಡುವ ವೇಳೆ ಜನಪ್ರಿಯ ಯೋಜನೆಗಳನ್ನ ಬಂದ್​ ಮಾಡಿ ಎಂದು ಆ್ರಹಿಸಿದ್ದಾರೆ. ತಾಳಿ ಭಾಗ್ಯ, ಅನ್ನ ಭಾಗ್ಯ (Anna Bhagya) ಯೋಜನೆ ನಿಲ್ಲಿಸಿ ಎಂದ ಯತ್ನಾಳ್, ಈ ಎಲ್ಲಾ ಯೋಜನೆಗಳು ಜನರನ್ನ ದರಿದ್ರ ಮಾಡುತ್ತವೆ. ಈ ಅನ್ನಭಾಗ್ಯ ಯೋಜನೆ ಜನರನ್ನ ದರಿದ್ರ ಮಾಡುತ್ತದೆ. ಈ ಯೋಜನೆಗಳನ್ನ ಬಂದ್ ಮಾಡಿ ಎಂದು ಒತ್ತಾಯಿಸಿದರು. ಯೋಜನೆಗಳನ್ನ ಬಂದ್ ಮಾಡಲು ಧೈರ್ಯ ಮಾಡಬೇಕು. ಆಗಿದ್ದಾಗಲಿ ಬಂದ್ ಮಾಡಿ ಎಂದು ಯತ್ನಾಳ್ ಅವರು ಸಿಎಂ ಬೊಮ್ಮಾಯಿಗೆ ಧೈರ್ಯ ತುಂಬುತ್ತಾ, ಒತ್ತಾಯಪೂರ್ವಕವಾಗಿ ಹೇಳಿದರು.

ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆ ಹಂತ 1 ಪೈಪ್ ವಿತರಣಾ ಜಾಲದ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ವೇದಿಕೆಯಲ್ಲಿ ವಿಜಯಪುರ ‌ನಗರ ಶಾಸಕ ಯತ್ನಾಳ ಗುಡುಗಿದರು. ತಾಳಿ ಭಾಗ್ಯ ಬೇಡ, ಅನ್ನ ಭಾಗ್ಯ ಬೇಡ ಇತ್ಯಾದಿ‌ ಭಾಗ್ಯಗಳೂ ಬೇಡಾ ಎಂದು ಹೇಳಿದ ಯತ್ನಾಳ, ಇವೆಲ್ಲ ಜನರನ್ನ ದರಿದ್ರ ಮಾಡೋ ಯೋಜನೆಗಳು ಎಂದು ವಾಗ್ದಾಳಿ ನಡೆಸಿದರು.

ದೇವರ ಹಿಪ್ಪರಗಿ ಶಾಸಕರ ಮೇಲೆ ಸಿಎಂ ಬೊಮ್ಮಾಯಿಗೆ ಲವ್ ಇದೆ ಎಂದ ಯತ್ನಾಳ್, ಹಾಗಾಗಿ ಶಾಸಕ ಸೋಮನಗೌಡರ ಕೆಲಸಗಳನ್ನು ಮಾಡುತ್ತಾರೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಸೋಮನಗೌಡ ಪಾಟೀಲ್ ಪರ‌ ಮತ ಚಲಾಯಿಸಬೇಕು ಎಂದೂ ಯತ್ನಾಳ್ ಮನವಿ ಮಾಡಿದರು. ಭಾಷಣದ ವೇಳೆ ಸ್ವಪಕ್ಷೀಯ ಶಾಸಕ ನಡಹಳ್ಳಿ ಹಾಗೂ ಸಂಸದ ಜಿಗಜಿಣಗಿ ಅವರುಗಳಿಗೆ ಪರೋಕ್ಷವಾಗಿ ಯತ್ನಾಳ್ ಟಾಂಗ್ ನೀಡಿದರು.

Follow us on

Related Stories

Most Read Stories

Click on your DTH Provider to Add TV9 Kannada