ಅಮಿತ್ ಶಾಗಾಗಿ ರೇಸ್​ಕೋರ್ಸ್​ ರಸ್ತೆಯ ಒಂದು ಬದಿ ವಾಹನ ಸಂಚಾರ ತಡೆದಿದ್ದರಿಂದ ಜನ ತಾಳ್ಮೆ ಕಳೆದುಕೊಂಡರು

ಅಮಿತ್ ಶಾಗಾಗಿ ರೇಸ್​ಕೋರ್ಸ್​ ರಸ್ತೆಯ ಒಂದು ಬದಿ ವಾಹನ ಸಂಚಾರ ತಡೆದಿದ್ದರಿಂದ ಜನ ತಾಳ್ಮೆ ಕಳೆದುಕೊಂಡರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 03, 2022 | 8:39 PM

ರಸ್ತೆಯ ಮತ್ತೊಂದು ಭಾಗದಲ್ಲಿ ವಾಹನಗಳು ಇರುವೆಗಳೋಪಾದಿಯಲ್ಲಿ ಜಮಾ ಆಗಲಾರಂಭಿಸಿದ್ದವು. ಉರಿಬಿಸಿಲಲ್ಲಿ ಕಾಯುವ ವ್ಯವಧಾನ ಜನರಿಗೆ ಇರಲಿಲ್ಲ. ಬಿಸಲು ಮತ್ತು ಸಂಚಾರಿ ಪೊಲೀಸರು ಅವರ ತಾಳ್ಮೆಯ ಪರೀಕ್ಷೆ ತೆಗೆದುಕೊಳ್ಳಲಾರಂಭಿಸಿದ್ದರು. ಅನೇಕರು ಪೊಲೀಸರೊಂದಿಗೆ ವಾಗ್ವಾದಕ್ಕೆ ಬಿದ್ದಿದ್ದರು

Bengaluru:  ಎರಡೆರಡು ಹಬ್ಬಗಳ ಹಿನ್ನೆಲೆಯಲ್ಲ್ಲಿ ಸರ್ಕಾರೀ ರಜೆ (General Holiday) ಹೊರತಾಗಿಯೂ ಮಂಗಳವಾರದಂದು ಬೆಂಗಳೂರು ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಮಿಕ್ಕಿದ ದಿನಗಳಿಗಿಂತ ಹೆಚ್ಚಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಬಸವ ಜಯಂತಿ ಅಂಗವಾಗಿ ಹಲವಾರು ಕಾರ್ಯಕ್ರಮಗಳು ನಗರದಲ್ಲಿ ಆಯೋಜನೆಗೊಂಡಿದ್ದವು. ರಂಜಾನ್ ಹಬ್ಬದ (Ramadan Festival) ಪ್ರಯುಕ್ತ ಮುಸಲ್ಮಾನರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗಳಿಗೆ ವಾಪಸ್ಸು ಹೋಗುತ್ತಿದ್ದರು. ಖೇಲೋ ಇಂಡಿಯ (Khelo India) ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೇಂದ್ರ ಹೃಹ ಸಚಿವ ಅಮಿತ್ ಶಾ (Amit Shah) ಅವರು ನಗರಕ್ಕೆ ಆಗಮಿಸಿದ್ದರು. ಇದೇ ಕಾರಣಕ್ಕೆ ಅಂದರೆ ಅಮಿತ್ ಶಾ ಅವರ ಸುಗಮ ಮತ್ತು ತಡೆರಹಿತ ಓಡಾಟಕ್ಕೆ ಅನುವಾಗಲು ಬ್ಯೂಸಿ ರೇಸ್ ಕೋರ್ಸ್ ರಸ್ತೆಯ ಒಂದು ಭಾಗ ಸಾರ್ವಜನಿಕರ ಓಡಾಟಕ್ಕೆ ನಿಷೇಧಿಸಲಾಗಿತ್ತು.

ಹಾಗಾಗೇ, ರಸ್ತೆಯ ಮತ್ತೊಂದು ಭಾಗದಲ್ಲಿ ವಾಹನಗಳು ಇರುವೆಗಳೋಪಾದಿಯಲ್ಲಿ ಜಮಾ ಆಗಲಾರಂಭಿಸಿದ್ದವು. ಉರಿಬಿಸಿಲಲ್ಲಿ ಕಾಯುವ ವ್ಯವಧಾನ ಜನರಿಗೆ ಇರಲಿಲ್ಲ. ಬಿಸಲು ಮತ್ತು ಸಂಚಾರಿ ಪೊಲೀಸರು ಅವರ ತಾಳ್ಮೆಯ ಪರೀಕ್ಷೆ ತೆಗೆದುಕೊಳ್ಳಲಾರಂಭಿಸಿದ್ದರು. ಅನೇಕರು ಪೊಲೀಸರೊಂದಿಗೆ ವಾಗ್ವಾದಕ್ಕೆ ಬಿದ್ದಿದ್ದರು.

ಖಾಸಗಿ ಕಂಪನಿಗಳಿಗೆ ಮಂಗಳವಾರ ರಜೆ ಇರಲಿಲ್ಲವಾ ಎಂಬಬ ಸಂಶಯ ಮೂಡುತ್ತದೆ. ಯಾಕೆಂದರೆ, ಇಲ್ಲಿರುವ ವಾಹನ ಚಾಲಕರ ಪೈಕಿ ಒಂದಿಬ್ಬರು ಯಾವನು ಬಂದರೆ ನಮಗೇನ್ರೀ, ನಮ್ಮ ಕೆಲಸ ಹೋದರೆ ಅವ್ನಾ ಕೊಡ್ತಾನೆ ಅಂತ ಪೊಲೀಸರಿಗೆ ಹೇಳುತ್ತಿದ್ದರು. ತಡೆಯಲಾಗದ ಬಿಸಲು, ವಾಹನಗಳ ಎಡೆಬಿಡದ ಹಾರ್ನ್ ನಿಂದ ಪೊಲೀಸರು ಸಹ ಕಂಗೆಟ್ಟು ಹೋಗಿದ್ದರು.

ಇದನ್ನೂ ಓದಿ:  Mohammad Rizwan: ಸ್ಲಿಪ್​ನಲ್ಲಿ ನಿಂತ ಮೊಹಮ್ಮದ್ ರಿಜ್ವಾನ್​ರಿಂದ ರೋಚಕ ಕ್ಯಾಚ್: ಇಲ್ಲಿದೆ ನೋಡಿ ವಿಡಿಯೋ