AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pooja Hegde: ಉಡುಪಿಯಲ್ಲಿ ಪೂಜಾ ಹೆಗ್ಡೆ; ಕಾಪು ಮಾರಿಗುಡಿ ದರ್ಶನ ಪಡೆದ ನಟಿ

Pooja Hegde: ಉಡುಪಿಯಲ್ಲಿ ಪೂಜಾ ಹೆಗ್ಡೆ; ಕಾಪು ಮಾರಿಗುಡಿ ದರ್ಶನ ಪಡೆದ ನಟಿ

TV9 Web
| Edited By: |

Updated on: May 04, 2022 | 7:30 AM

Share

Pooja Hegde visits to Native | Udupi: ಮೂಲತಃ ಕಾರ್ಕಳದವರಾದ ಪೂಜಾ ಹೆಗ್ಡೆ ಮಂಗಳವಾರದಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭೇಟಿಯ ವೇಳೆ ಸ್ಥಳೀಯರೊಂದಿಗೆ ಪೂಜಾ ತುಳು ಭಾಷೆಯಲ್ಲೇ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿರುವ ಪೂಜಾ ಹೆಗ್ಡೆ (Pooja Hegde) ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಇದೀಗ ನಟಿ ತವರಿಗೆ ಭೇಟಿ ನೀಡಿದ್ದಾರೆ. ಮಂಗಳವಾರದಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿ, ದೇವಿಯ ಸನ್ನಿಧಾನದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದರು. ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಸೇವೆಯಲ್ಲಿ ಪಾತ್ರಿಗಳಿಂದ ಆಶೀರ್ವಾದ ಪಡೆದರು. ಈ ಹಿಂದೆಯೂ ಮಾರಿಗುಡಿಗೆ ಭೇಟಿ ನೀಡಿದ್ದ ಪೂಜಾ ಹೆಗ್ಡೆ, ಕ್ಷೇತ್ರದ ಬಗ್ಗೆ ತಮಗಿರುವ ಅಗಾಧ ಭಕ್ತಿ ಹಾಗೂ ಪ್ರೀತಿಯನ್ನು ಈ ವೇಳೆ ಹೇಳಿಕೊಂಡರು. ಕುಟುಂಬ ಸದಸ್ಯರೊಂದಿಗೆ ದೇವಾಲಯದ ಅವರಣದಲ್ಲಿ ಕೆಲ ಕಾಲ ಕಳೆದ ನಟಿ ನಂತರ ಮರಳಿದರು. ಭೇಟಿಯ ವೇಳೆ ಸ್ಥಳೀಯರೊಂದಿಗೆ ಪೂಜಾ ತುಳು ಭಾಷೆಯಲ್ಲೇ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಾಲಿವುಡ್, ತಮಿಳು, ತೆಲುಗು ಚಿತ್ರರಂಗದಲ್ಲಿ ಖ್ಯಾತರಾಗಿರುವ ಪೂಜಾ ಹೆಗ್ಡೆ ಹಲವು ಹಿಟ್ ಸಿನಿಮಾಗಳನ್ನು ನೀಡಿದವರು. ದಕ್ಷಿಣದ ಖ್ಯಾತನಾಮರೊಂದಿಗೆ ಬಣ್ಣಹಚ್ಚಿದ ಕೀರ್ತಿ ಪೂಜಾರದ್ದು. ಕೆಲ ವರ್ಷಗಳ ಹಿಂದೆ ಪೂಜಾ ನಟಿಸಿದ್ದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಆದರೆ ಅವರ ಇತ್ತೀಚಿನ ಮೂರೂ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಸೋಲು ಕಂಡಿದ್ದವು. ಪ್ರಭಾಸ್ ಜತೆ ನಟಿಸಿದ ‘ರಾಧೆ ಶ್ಯಾಮ್’, ವಿಜಯ್ ಜತೆ ನಟಿಸಿದ ‘ಬೀಸ್ಟ್’ ಹಾಗೂ ರಾಮ್​ ಚರಣ್, ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಕಾಣಿಸಿಕೊಂಡಿದ್ದರು. ಆದರೆ ಈ ಮೂರೂ ಚಿತ್ರಗಳು ಗಳಿಕೆಯಲ್ಲಿ ಸೋಲು ಕಂಡಿದ್ದಲ್ಲದೇ, ವಿಮರ್ಶಕರಿಂದಲೂ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಪೂಜಾ ಹೆಗ್ಡೆ ತವರಿಗೆ ಮರಳಿ, ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:Pooja Hegde: ಎರಡೇ ತಿಂಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡ ಪೂಜಾ ಹೆಗ್ಡೆ 

Pooja Hegde: ಕಿಲ್ಲಿಂಗ್ ಲುಕ್​ನಲ್ಲಿ ಪೂಜಾ ಹೆಗ್ಡೆ​; ಇಲ್ಲಿವೆ ಮಸ್ತ್​​ ಫೋಟೋಸ್​