ನ್ಯೂಸ್ ಚ್ಯಾನೆಲ್ ಗಳಲ್ಲಿ ಯಾವ ಸುದ್ದಿ ಬಿತ್ತರಿಸಬೇಕೆಂದು ಬಿಜೆಪಿಯ ಅರುಣ್ ಸಿಂಗ್ ಕನ್ನಡ ಮಾಧ್ಯಮಗಳಿಗೆ ಸಲಹೆ ನೀಡಿದರು!

ಅದಕ್ಕೆ ಪತ್ರಕರ್ತರು, ಸರ್ ಅಕ್ರಮ ನಡೆದಿರೋದು ಕರ್ನಾಟಕದಲ್ಲಿ ಮತ್ತು ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ ನಾಯಕರು ಹೇಗೆ ಅಕ್ರಮದಲ್ಲಿ ಭಾಗಿಯಾಗುತ್ತಾರೆ? ಅಂತ ಕೇಳಿದಾಗ ಅದಕ್ಕೆ ಅವರಲ್ಲಿ ಸಮರ್ಪಕ ಉತ್ತರವಿರಲಿಲ್ಲ.

TV9kannada Web Team

| Edited By: Arun Belly

May 03, 2022 | 7:32 PM

Bengaluru:  ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರು ಬೆಂಗಳೂರಲ್ಲಿಂದು ಮಾಧ್ಯಮದವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ವಿಫಲರಾಗಿ ವಿಷಯಾಂತರ ಮಾಡಿದ ಪ್ರಸಂಗ ನಡೆಯಿತು. ಮುಂದಿನ ವಿಧಾನ ಸಭಾ ಚುನಾವಣೆ ಬಗ್ಗೆ ಅವರು ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ವರದಿ ಸಲ್ಲಿಸಬೇಕಿರುವ ಕಾರಣ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅವರು ಒಂದು ಸಭೆ ನಡೆಸಲು ತೆರಳುವ ಮೊದಲು ಕಚೇರಿ ಆವರಣದಲ್ಲಿ ಪತ್ರಕರ್ತರು ಪಿ ಎಸ್ ಐ ನೇಮಕಾತಿ ಅಕ್ರಮದಲ್ಲಿ (PSI Recruitment Scam) ಸಚಿವ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಭಾಗಿಯಾಗಿರುವ ಬಗ್ಗೆ ಅರೋಪದ ಬಗ್ಗೆ ಕೇಳಿದಾಗ ಅರುಣ್ ಸಿಂಗ್, ಅದೆಲ್ಲ ಸುಳ್ಳು, ಕಾಂಗ್ರೆಸ್ ಅವರ ವಿರುದ್ಧ ಸುಖಾಸುಮ್ಮನೆ ದೋಷಾರೋಪಣೆ ಮಾಡುತ್ತಿದೆ, ಕಾಂಗ್ರೆಸ್ ಕುತಂತ್ರಿ ಪಕ್ಷ ಅಂತ ಹೇಳಿದರು.

ಅದಕ್ಕೆ ಪತ್ರಕರ್ತರು, ಸರ್ ಅಕ್ರಮ ನಡೆದಿರೋದು ಕರ್ನಾಟಕದಲ್ಲಿ ಮತ್ತು ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ ನಾಯಕರು ಹೇಗೆ ಅಕ್ರಮದಲ್ಲಿ ಭಾಗಿಯಾಗುತ್ತಾರೆ? ಅಂತ ಕೇಳಿದಾಗ ಅದಕ್ಕೆ ಅವರಲ್ಲಿ ಸಮರ್ಪಕ ಉತ್ತರವಿರಲಿಲ್ಲ. ಹಾಗಾಗೇ ಅವರು, ಕರ್ನಾಟಕದಲ್ಲಿ ಇವತ್ತು ಬಹಳ ದೊಡ್ಡ ದಿನ, ಎಲ್ಲೆಡೆ ಬಸವ ಜಯಂತಿ ಆಚರಿಸಲಾಗುತ್ತಿದೆ. ಜನರೆಲ್ಲ ಸಂತೋಷದಲ್ಲಿದ್ದಾರೆ. ಮತ್ತೊಂದು ಮಹತ್ವದ ಸಂಗತಿಯೆಂದರೆ, ಖೇಲೋ ಇಂಡಿಯಾದ ಸಮಾರೋಪ ಸಮಾರಂಭವಿದೆ, ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದಾರೆ, ನಿಮ್ಮ ಗಮನವೆಲ್ಲ ಅವರ ಮೇಲೆ ಇರಬೇಕು. ನಿಮ್ಮ ಚ್ಯಾನೆಲ್ ಗಳಲ್ಲಿ ಇದನ್ನು ಮಾತ್ರ ತೋರಿಸಬೇಕು ಅಂತ ಹೇಳಿದರು.

ನೋಡಿದ್ರಾ ಸ್ನೇಹಿತರೇ, ಕನ್ನಡ ಚ್ಯಾನೆಲ್ ಗಳು ಏನು ತೋರಿಸಬೇಕೆಂದು ಉತ್ತರ ಭಾರತದ ಅರುಣ್ ಸಿಂಗ್ ಹೇಳುತ್ತಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿ ಏನೋ ಒಂದು ಹೇಳಿ ಬಿಡೋದು ನಮ್ಮ ನಾಯಕರ ಜಾಯಮಾನವೇ?

ಇದನ್ನೂ ಓದಿ:   ನನ್ನ ವಿರುದ್ಧ ಬಿಜೆಪಿ ವರಿಷ್ಠರಿಗೆ ದೂರು ಕೊಟ್ಟಿದ್ದಾರೆ, ಅರುಣ್ ಸಿಂಗ್ ಫೋನ್ ಮಾಡಿದ್ದರು: ರೇಣುಕಾಚಾರ್ಯ

Follow us on

Click on your DTH Provider to Add TV9 Kannada