Mohammad Rizwan: ಸ್ಲಿಪ್ನಲ್ಲಿ ನಿಂತ ಮೊಹಮ್ಮದ್ ರಿಜ್ವಾನ್ರಿಂದ ರೋಚಕ ಕ್ಯಾಚ್: ಇಲ್ಲಿದೆ ನೋಡಿ ವಿಡಿಯೋ
ಈ ಪಂದ್ಯದಲ್ಲಿ ಸಸೆಕ್ಸ್ (Sussex) ತಂಡದ ಪರ ಆಡುತ್ತಿರುವ ಪಾಕಿಸ್ತಾನ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ (Mohammad Rizwan) ಇದೀಗ ಅದ್ಭುತ ಕ್ಯಾಚ್ ಹಿಡಿದು ಸುದ್ದಿಯಲ್ಲಿದ್ದಾರೆ.
ಇಂಗ್ಲೆಂಡ್ನ ಹೂವೆ ಕೌಂಟಿ ಗ್ರೌಂಡ್ನಲ್ಲಿ ನಡೆದ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಸಸೆಕ್ಸ್ ಹಾಗೂ ದರ್ಹಮ್ ನಡುವಣ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಈ ಪಂದ್ಯದಲ್ಲಿ ಸಸೆಕ್ಸ್ (Sussex) ತಂಡದ ಪರ ಆಡುತ್ತಿರುವ ಪಾಕಿಸ್ತಾನ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ (Mohammad Rizwan) ಇದೀಗ ಅದ್ಭುತ ಕ್ಯಾಚ್ ಹಿಡಿದು ಸುದ್ದಿಯಲ್ಲಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಇವರು ಮೊದಲ ಇನ್ನಿಂಗ್ಸ್ನಲ್ಲಿ 145 ಎಸೆತಗಳಲ್ಲಿ 79 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ಭಾರತದ ಚೇತೇಶ್ವರ್ ಪೂಜಾರ(Cheteshwar Pujara) ಜೊತೆಗೂಡಿ ಅತ್ಯುತ್ತಮ ಆಟವಾಡಿದ್ದರು. ಇದೀಗ ಸ್ಪಿಪ್ನಲ್ಲಿ ನಿಂತು ಸೂಪರ್ ಮ್ಯಾನ್ನಂತೆ ಹಾರಿ ಅದ್ಭುತ ಕ್ಯಾಚ್ ಹಿಡಿದು ದರ್ಹಮ್ ತಂಡದ ಡೇವಿಡ್ ಬೆದಿಂಗ್ಮ್ ಅವರನ್ನು ಔಟ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದರ್ಹಮ್ ತಂಡ 73.5 ಓವರ್ನಲ್ಲಿ ಕೇವಲ 223 ರನ್ಗೆ ಆಲೌಟ್ ಆಯಿತು. ಲಿಯಾಮ್ ಟ್ರೆವಸ್ಕಿಸ್ 88 ರನ್ ಬಾರಿಸಿದರೆ ಸೀನ್ ಡಿಕ್ಸನ್ 34 ರನ್ ಗಳಿಸಿದರು. ಸಸೆಕ್ಸ್ ಪರ ಆರೋನ್ ಬಿಯರ್ಡ್ ಹಾಗೂ ಟಾಮ್ ಕ್ಲಾರ್ಕ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.
This catch from @iMRizwanPak. ? ? #GOSBTS pic.twitter.com/uOdy7JJ2nr
— Sussex Cricket (@SussexCCC) May 1, 2022
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಸಸೆಕ್ಸ್ ತಂಡ ಎರಡನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 362 ರನ್ ಬಾರಿಸಿದೆ. ಅಲಿಸ್ಟರ್ ಓರ್(27) ಹಾಗೂ ನಾಯಕ ಟಾಮ್ ಹೇನೆಸ್ ಮೊದಲ ವಿಕೆಟ್ಗೆ 68 ರನ್ಗಳ ಉತ್ತಮ ಜೊತೆಯಾಟ ಆಡಿದರು. ನಂತರ ಬಂದ ಮೋಸನ್ ಕ್ರೇನ್ 13 ರನ್ಗೆ ಔಟಾದರು. ಈ ಸಂದರ್ಭ ಜೊತೆಯಾದ ಚೇತೇಶ್ವರ್ ಪೂಜಾರ ಹಾಗೂ ಟಾಮ್ ಅಲ್ಸೋಪ್ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಪೂಜಾರ- ಅಲ್ಸೋಪ್ 4ನೇ ವಿಕೆಟ್ಗೆ 99 ರನ್ಗಳ ಕಾಣಿಕೆ ನೀಡಿದರು. ಅಲ್ಸೋಪ್ 129 ಎಸೆತಗಳಲ್ಲಿ 66 ರನ್ ಬಾರಿಸಿ ಔಟಾದರು. ನಂತರ ಟಾಮ್ ಕ್ಲಾರ್ಕ್ ಜೊತೆಯಾದ ಪೂಜಾರ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದಲ್ಲದೆ 143 ರನ್ಗಳನ್ನು ಕೂಡಿಸಿದರು. ಕ್ಲಾರ್ಕ್ 99 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟಾದರು.
IPL 2022 Points Table: ಐಪಿಎಲ್ 2022 ಅಂಕಪಟ್ಟಿ ಹೇಗಿದೆ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
ಇದರ ನಡುವೆ ಚೇತೇಶ್ವರ್ ಪೂಜಾರ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಬಳಿಕ 6ನೇ ವಿಕೆಟ್ಗೆ ಪೂಜಾರ ಜೊತೆಯಾಗಿರುವ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 158 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಪೂಜಾರ 334 ಎಸೆತಗಳಲ್ಲಿ 24 ಫೋರ್ನೊಂದಿಗೆ 203 ರನ್ ಗಳಿಸಿದರೆ ಹಾಗೂ ರಿಜ್ವಾನ್ 79 ರನ್ ಸಿಡಿಸಿದರು. ಪರಿಣಾಮ ಸಸೆಕ್ಸ್ ತಂಡ 153.5 ಓವರ್ನಲ್ಲಿ 538 ರನ್ಗೆ ಆಲೌಟ್ ಆಯಿತು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ದರ್ಹಮ್ ತಂಡ ಮೊದಲ ವಿಕೆಟ್ಗೆನೆ ದಾಖಲೆಯ 313 ರನ್ಗಳ ಜೊತೆಯಾಟ ಆಡಿತು. ಅಲೆಕ್ಸ್ ಲೀಸ್ 262 ಎಸೆತಗಳಲ್ಲಿ 105 ರನ್ ಬಾರಿಸಿದರೆ ಸೀನ್ ಡಿಕ್ಸನ್ 290 ಎಸೆತಗಳಲ್ಲಿ 186 ರನ್ ಚಚ್ಚಿದರು. ಅಂತಿಮ ದಿನದಾಟದ ವೇಳೆ ದರ್ಹಮ್ 113 ಓವರ್ಗೆ 364 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ