AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂಬೈನಲ್ಲಿ ಮನೆ ಖರೀದಿಗಾಗಿ ತನ್ನ 5 ವರ್ಷಗಳ ಸಂಪಾದನೆಯನ್ನೇಲ್ಲ ಖರ್ಚು ಮಾಡಿದ ಪೃಥ್ವಿ ಶಾ..!

IPL 2022: ಈ ಋತುವಿನಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ ಅವರನ್ನು 7.50 ಕೋಟಿ ರೂ.ಗೆ ಉಳಿಸಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಪೃಥ್ವಿ ದೆಹಲಿಯಿಂದ 12.30 ಕೋಟಿ ರೂ. ಸಂಭಾವನೆ ಪಡೆದಿದ್ದು, ಆ ಹಣದ ಬಹುಪಾಲನ್ನು ಐಷಾರಾಮಿ ಆಸ್ತಿ ಖರೀದಿಗೆ ಖರ್ಚು ಮಾಡಿದ್ದಾರೆ.

IPL 2022: ಮುಂಬೈನಲ್ಲಿ ಮನೆ ಖರೀದಿಗಾಗಿ ತನ್ನ 5 ವರ್ಷಗಳ ಸಂಪಾದನೆಯನ್ನೇಲ್ಲ ಖರ್ಚು ಮಾಡಿದ ಪೃಥ್ವಿ ಶಾ..!
ಪೃಥ್ವಿ ಶಾ
TV9 Web
| Edited By: |

Updated on:May 03, 2022 | 4:28 PM

Share

ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ಭಾರತ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಲು ಹೋರಾಡುತ್ತಿದ್ದಾರೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವರ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಆದರೆ ಪೃಥ್ವಿ ಶಾಗೆ ಮಾತ್ರ ಐಪಿಎಲ್‌ನಲ್ಲಿ ಸಾಕಷ್ಟು ಬೇಡಿಕೆಯಿದೆ. ಹೀಗಾಗಿ ಅವರನ್ನು ಖರೀದಿಸಲು ಅನೇಕ ಫ್ರಾಂಚೈಸಿಗಳು ಹಣದ ಮಳೆಯನ್ನೇ ಸುರಿಸಿದ್ದವು. ಹೀಗೆ ಐಪಿಎಲ್​ (IPL)ನಲ್ಲಿ ಬಂದ ಆದಾಯವನ್ನೆಲ್ಲ ಕೂಡಿಟ್ಟಿದ್ದ ಪೃಥ್ವಿ ಈಗ ಒಂದು ವೈಭವದ ಮನೆಯನ್ನು ಖರೀದೆ ಮಾಡಿದ್ದಾರೆ. ಮಾಯಾನಗರಿ ಮುಂಬೈನಲ್ಲಿ ಮನೆ ಪಡೆಯುವುದು ಸಾಮಾನ್ಯ ವ್ಯಕ್ತಿಗೆ ಅಥವಾ ಸೆಲೆಬ್ರಿಟಿಗೆ ಸುಲಭವಲ್ಲ. ಮುಂಬೈನಲ್ಲಿ ಮನೆ ಪಡೆಯಲು ಜನಸಾಮಾನ್ಯರು ಲಕ್ಷಗಟ್ಟಲೆ ಖರ್ಚು ಮಾಡಬೇಕಾಗಿದೆ. ಸೆಲೆಬ್ರಿಟಿಗಳಿಗೂ ಸಹ ಮನೆ ಖರೀದಿಸುವುದು ಸುಲಭವಲ್ಲ. ಆದರೆ ಪೃಥ್ವಿ ಶಾ ತಮ್ಮ ಕಳೆದ ಐದು ವರ್ಷಗಳ ಐಪಿಎಲ್ ಗಳಿಕೆಯನ್ನು ಮನೆ ಖರೀದಿಸಲು ಖರ್ಚು ಮಾಡಿದ್ದಾರೆ. ಐಪಿಎಲ್‌ನಿಂದ ಬಂದ ಹಣದಲ್ಲಿ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

ಕೇವಲ ಒಂದು ಸಾವಿರ ಚದರ ಮೀಟರ್ ಕಾರ್ಪೆಟ್ ಪ್ರದೇಶ ಪೃಥ್ವಿ ಶಾ 81 Aureate ವಸತಿ ಗೋಪುರದಲ್ಲಿ ಎಂಟನೇ ಮಹಡಿಯಲ್ಲಿ ಫ್ಲಾಟ್ ಖರೀದಿಸಿದ್ದಾರೆ. ಕಟ್ಟಡವು ಬಾಂದ್ರಾ ರಿಕ್ಲಮೇಷನ್‌ನಲ್ಲಿದೆ. ಬಾಂದ್ರಾವು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಶ್ರೀಮಂತರಿಗೆ ನೆಲೆಯಾಗಿದೆ. ಪೃಥ್ವಿ ಅಪಾರ್ಟ್‌ಮೆಂಟ್ 2209 ಚದರ ಮೀಟರ್‌ನ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ. 1654 ಚದರ ಮೀಟರ್‌ನಲ್ಲಿ ಟೆರೇಸ್ ಇದೆ. ಮೂರು ಕಾರ್ ಪಾರ್ಕಿಂಗ್ ಸ್ಲಾಟ್‌ಗಳೂ ಇವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸ್ಟಾಂಪ್ ಡ್ಯೂಟಿಗೆ ಖರ್ಚಾಗಿದ್ದೆಷ್ಟು? ಮನೆ ಖರೀದಿಸುವಾಗ ಪೃಥ್ವಿ 52.50 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. ಕೆಲ ದಿನಗಳ ಹಿಂದೆ ಏಪ್ರಿಲ್ 28ರಂದು ಆಸ್ತಿ ನೋಂದಣಿಯಾಗಿದೆ. ಮೂಲಗಳ ಪ್ರಕಾರ ಈ ಮನೆಗೆ ಪೃಥ್ವಿ ಶಾ ಬರೋಬ್ಬರಿ 10.5 ಕೋಟಿ ರೂ. ವ್ಯಯಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಕಟ್ಟಡವನ್ನು ಪಿರಮಿಡ್ ಡೆವಲಪರ್ಸ್ ಮತ್ತು ಅಲ್ಟ್ರಾ ಲೈಫ್‌ಸ್ಪೇಸ್ ನಿರ್ಮಿಸಿದೆ.

ಎಷ್ಟು ಕೋಟಿ ಖರೀದಿಸಿದೆ? ಮುಂಬೈನಲ್ಲಿ ನಡೆದ ಶಾಲಾ ಮಟ್ಟದ ಕ್ರಿಕೆಟ್ ಟೂರ್ನಿಯಿಂದಲೂ ಪೃಥ್ವಿ ಶಾ ಹೆಸರು ಸುದ್ದಿಯಲ್ಲಿದೆ. ಆದರೆ 2018 ರಲ್ಲಿ, ಅವರು ನಿಜವಾದ ಮನ್ನಣೆ ಪಡೆದರು. ಆಗ ಪೃಥ್ವಿ ನಾಯಕತ್ವದಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಶಾ ಅವರನ್ನು ತಕ್ಷಣವೇ 1.2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಈಗ ಆ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.

ಈ ಋತುವಿನಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ ಅವರನ್ನು 7.50 ಕೋಟಿ ರೂ.ಗೆ ಉಳಿಸಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಪೃಥ್ವಿ ದೆಹಲಿಯಿಂದ 12.30 ಕೋಟಿ ರೂ. ಸಂಭಾವನೆ ಪಡೆದಿದ್ದು, ಆ ಹಣದ ಬಹುಪಾಲನ್ನು ಐಷಾರಾಮಿ ಆಸ್ತಿ ಖರೀದಿಗೆ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ:IPL 2022: ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ 9 ವರ್ಷಗಳ ಹಳೆಯ ದಾಖಲೆ ಮುರಿದ ಧೋನಿ..!

Published On - 4:26 pm, Tue, 3 May 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು