ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
ಶಾರುಖ್ ಖಾನ್

Shah Rukh Khan Pathaan: ‘ಪಠಾಣ್​’ ಸಿನಿಮಾ ಬಗ್ಗೆ ಸ್ವತಃ ಶಾರುಖ್​ ಖಾನ್​ ಅವರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

TV9kannada Web Team

| Edited By: Madan Kumar

May 04, 2022 | 9:10 AM

ಯಾವುದೇ ನಟನ ಒಂದೆರಡು ಸಿನಿಮಾ ಬ್ಯಾಕ್​ ಟು ಬ್ಯಾಕ್​ ಸೋತರೆ ಚಿತ್ರರಂಗದಲ್ಲಿ ನೆಗೆಟಿವ್​ ಪ್ರಚಾರ ಶುರುವಾಗುತ್ತದೆ. ಇನ್ಮುಂದೆ ಈ ಹೀರೋ ಕಥೆ ಮುಗಿಯಿತು ಎಂದೇ ಮಾತನಾಡುತ್ತಾರೆ ಗಾಸಿಪ್​ ಮಂದಿ. ನಟ ಶಾರುಖ್​ ಖಾನ್​ (Shah Rukh Khan) ವಿಚಾರದಲ್ಲೂ ಹಾಗೆಯೇ ಆಗಿತ್ತು. ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಅವರು ಸರಣಿ ಸೋಲು ಕಂಡಿದ್ದಾರೆ. ಫ್ಯಾನ್​, ರಯೀಸ್​, ಜಬ್​ ಹ್ಯಾರಿ ಮೆಟ್​ ಸೇಜಲ್​, ಜೀರೋ ಸಿನಿಮಾಗಳು ಸತತವಾಗಿ ಸೋತವು. ಹಾಗಾಗಿ ಶಾರುಖ್​ ಖಾನ್​ ಅವರ ವೃತ್ತಿಜೀವನ ಅಳಿವಿನಂಚಿನಲ್ಲಿದೆ ಎಂದು ಎಲ್ಲರೂ ಮಾತನಾಡಿಕೊಂಡರು. ಆದರೆ ಶಾರುಖ್​ ಮತ್ತೆ ಹೊಸ ಚಾರ್ಮ್​ನೊಂದಿಗೆ ಮರಳುತ್ತಿದ್ದಾರೆ. ಆಡಿಕೊಂಡವರ ಬಾಯಿ ಮುಚ್ಚಿಸಲು ಅವರು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ ‘ಪಠಾಣ್​’ ಸಿನಿಮಾ (Pathaan Movie) ಸಲುವಾಗಿ ಅವರು ಸಿಕ್ಕಾಪಟ್ಟೆ ಕಸರತ್ತು ನಡೆಸಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಇನ್ನೂ ಸಮಯ ಇದೆ. ಅಷ್ಟರಲ್ಲಾಗಲೇ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳ ಮಾರಾಟದ ಬಗ್ಗೆ ಗುಸುಗುಸು ಸುದ್ದಿ ಕೇಳಿಬಂದಿದೆ. ಮೂಲಗಳ ಪ್ರಕಾರ ಬರೋಬ್ಬರಿ 200 ಕೋಟಿ ರೂಪಾಯಿಗೆ ‘ಪಠಾಣ್​’ ಸಿನಿಮಾದ ಒಟಿಟಿ (OTT Platform) ಪ್ರಸಾರ ಹಕ್ಕುಗಳು ಸೇಲ್​ ಆಗಿವೆ!

ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ನಲ್ಲಿ ‘ಪಠಾಣ್​’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದ ಪ್ರಸಾರ ಹಕ್ಕುಗಳು ಒಟಿಟಿಗೆ ಮಾರಾಟ ಆಗಿವೆ ಎಂದ ಮಾತ್ರಕ್ಕೆ ಚಿತ್ರಮಂದಿರದಲ್ಲಿ ರಿಲೀಸ್​ ಆಗುವುದಿಲ್ಲ ಎಂದರ್ಥವಲ್ಲ. 2023ರ ಜ.25ರಂದು ಥಿಯೇಟರ್​ನಲ್ಲಿ ‘ಪಠಾಣ್​’ ರಿಲೀಸ್​ ಆಗಲಿದೆ. ಚಿತ್ರಮಂದಿರದ ಬಳಿಕ ಒಟಿಟಿಗೆ ಕಾಲಿಡಲಿದೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆಯ ಬಹುತೇಕ ಚಿತ್ರಗಳು ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕವೇ ಪ್ರಸಾರ ಕಂಡಿವೆ. ಹಾಗಾಗಿ ‘ಪಠಾಣ್​’ ಕೂಡ ಇದೇ ಹಾದಿ ಹಿಡಿದಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಪಠಾಣ್​’ ಸಿನಿಮಾ ಬಗ್ಗೆ ಸ್ವತಃ ಶಾರುಖ್​ ಖಾನ್​ ಅವರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಜೀರೋ’ ಚಿತ್ರದ ಸೋಲಿನ ಬಳಿಕ ಅವರು ಬಹಳ ಸಮಯ ತೆಗೆದುಕೊಂಡು ಒಪ್ಪಿಕೊಂಡ ಸಿನಿಮಾ ಇದು. ಈ ಚಿತ್ರಕ್ಕೆ ‘ಬ್ಯಾಂಗ್​ ಬ್ಯಾಂಗ್​’, ‘ವಾರ್​’ ಸಿನಿಮಾ ಖ್ಯಾತಿಯ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

‘ಪಠಾಣ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಸಿಕ್ಸ್​ ಪ್ಯಾಕ್​ ಗೆಟಪ್​ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅದರ ಫಸ್ಟ್​ಲುಕ್​ ಕೂಡ ಈಗಾಗಲೇ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಶೂಟಿಂಗ್​ ಸಂದರ್ಭದ ಕೆಲವು ಫೋಟೋಗಳು ಲೀಕ್​ ಆಗಿವೆ. ಆ ಮೂಲಕವೂ ‘ಪಠಾಣ್​’ ಸಿನಿಮಾ ಸುದ್ದಿ ಮಾಡಿದೆ. ಇದಲ್ಲದೇ ಇನ್ನೂ ಅನೇಕ ಸಿನಿಮಾಗಳನ್ನು ಶಾರುಖ್​ ಖಾನ್​ ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ಮಾಡಲಿರುವ ‘ಡಂಕಿ’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ. ‘ಮುನ್ನಾ ಭಾಯ್​ ಎಂಬಿಬಿಎಸ್​’, ‘ಪಿಕೆ’ ರೀತಿಯ ವಿಶೇಷವಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಾಜ್​ಕುಮಾರ್​ ಹಿರಾನಿ ಅವರು ಈಗ ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಯಾವ ಕಥೆಯನ್ನು ತೆರೆಗೆ ತರಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

8 ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​; ಮಸ್ತ್​ ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

Follow us on

Related Stories

Most Read Stories

Click on your DTH Provider to Add TV9 Kannada