ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

Shah Rukh Khan: ಈ ಎಲ್ಲ ಸ್ಟಾರ್​ ನಟರು ಅವರವರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅದರ ನಡುವೆಯೂ ಸಮಯ ಮಾಡಿಕೊಂಡು ಸೌದಿ ಅರೇಬಿಯಾದ ಸಚಿವರನ್ನು ಭೇಟಿ ಮಾಡಿದ್ದಾರೆ.

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಅಕ್ಷಯ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 03, 2022 | 12:07 PM

ಬಾಲಿವುಡ್​ ನಟರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅರಬ್​ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬಾಲಿವುಡ್​ ಸಿನಿಮಾಗಳನ್ನು ನೋಡುತ್ತಾರೆ. ಸೌದಿ ಅರೇಬಿಯಾಕ್ಕೆ ಆಗಾಗ ಬಿ-ಟೌನ್​ ತಾರೆಯರು ಭೇಟಿ ನೀಡುತ್ತಾರೆ. ಅದೇ ರೀತಿ ಸೌದಿ ಅರೇಬಿಯಾದ (Saudi Arabia) ಗಣ್ಯರು ಮುಂಬೈಗೆ ಬಂದರೆ ಹಿಂದಿ ಚಿತ್ರರಂಗ ಸೆಲೆಬ್ರಿಟಿಗಳನ್ನು ಭೇಟಿ ಆಗುತ್ತಾರೆ. ಈಗ ಸೌದಿ ಸಚಿವರ ಜೊತೆ ಶಾರುಖ್​ ಖಾನ್​ (Shah Rukh Khan) ಪೋಸ್​ ನೀಡಿರುವ ಫೋಟೋ ವೈರಲ್​ ಆಗಿದೆ. ಶಾರುಖ್​ ಖಾನ್​ ಮಾತ್ರವಲ್ಲದೇ ಸಲ್ಮಾನ್​ ಖಾನ್​, ಅಕ್ಷಯ್​ ಕುಮಾರ್​ (Akshay Kumar), ಸೈಫ್​ ಅಲಿ ಖಾನ್​ ಕೂಡ ಸೌದಿ ಸಚಿವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಅಷ್ಟಕ್ಕೂ ಇವರೆಲ್ಲ ಭೇಟಿ ಆಗಿದ್ದು ಎಲ್ಲಿ? ಯಾವ ಉದ್ದೇಶಕ್ಕೆ ಈ ಸಮ್ಮಿಲನ ಆಗಿದೆ? ಈ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡಿದೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಸೌದಿ ಅರೇಬಿಯಾ ರೆಡ್​ ಸೀ ಫಿಲ್ಮ್​ ಫೆಸ್ಟಿವಲ್​ ಅಧ್ಯಕ್ಷ ಮೊಹಮ್ಮದ್​ ಅಲ್​ ಟರ್ಕಿ ಅವರಿಗಾಗಿ ಶಾರುಖ್​ ಖಾನ್​ ಒಂದು ಔತಣಕೂಟ ಏರ್ಪಡಿಸಿದ್ದರು. ಶಾರುಖ್​ ನಿವಾಸ ಮನ್ನತ್​ನಲ್ಲಿ ಈ ಪಾರ್ಟಿ ನಡೆದಿದೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮೊಹಮ್ಮದ್​ ಅಲ್​ ಟರ್ಕಿ ಅವರು ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ‘ಭಾರತದಲ್ಲಿರುವ ನನ್ನ ಸಹೋದರ ಶಾರುಖ್​ ಖಾನ್​ ಅವರಿಂದ ರಂಜಾನ್​ ಹಬ್ಬದ ಶುಭಾಶಯಗಳು’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

ಸೌದಿ ಅರೇಬಿಯಾದ ಸಾಂಸ್ಕೃತಿ ಸಚಿವ ಫರ್ಹಾನ್​ ಅಲ್​ಸೌದ್​ ಜೊತೆ ಕೂಡ ಬಾಲಿವುಡ್​ ಮಂದಿ ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಫರ್ಹಾನ್​ ಅಲ್​ಸೌದ್ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಸಲ್ಮಾನ್​ ಖಾನ್​, ಸೈಫ್​ ಅಲಿ ಖಾನ್​, ಅಕ್ಷಯ್​ ಕುಮಾರ್​ ಮುಂತಾದವರು ಸಹ ಅವರನ್ನು ಭೇಟಿ ಆಗಿದ್ದಾರೆ. ಆ ಫೋಟೋಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇವರೆಲ್ಲರೂ ಶಾರುಖ್​ ನಿವಾಸ ಮನ್ನತ್​ನಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ.

‘ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಅಕ್ಷಯ್​ ಕುಮಾರ್​, ಸೈಫ್​ ಅಲಿ ಖಾನ್​ ಜೊತೆ ಸಿನಿಮಾ ಜಗತ್ತಿನ ಸುಂದರ ವಿಷಯಗಳ ಬಗ್ಗೆ ಸಂವಾದ ಮಾಡಿದ್ದಕ್ಕೆ ಖುಷಿ ಆಯಿತು’ ಎಂದು ಫರ್ಹಾನ್​ ಅಲ್​ಸೌದ್ ಅವರು ಅವರು ಬರೆದುಕೊಂಡಿದ್ದಾರೆ. ಈ ಎಲ್ಲ ಸ್ಟಾರ್​ ನಟರು ಅವರವರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅದರ ನಡುವೆಯೂ ಸಮಯ ಮಾಡಿಕೊಂಡು ಸೌದಿ ಅರೇಬಿಯಾದ ಸಚಿವರನ್ನು ಭೇಟಿ ಮಾಡಿದ್ದಾರೆ. ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದ ಶೂಟಿಂಗ್​ ಸಲುಗಾಗಿ ಸ್ಪೇನ್​ಗೆ ತೆರಳಿದ್ದರು. ಇತ್ತೀಚೆಗಷ್ಟೇ ಅವರು ಭಾರತಕ್ಕೆ ವಾಪಸ್​ ಬಂದಿದ್ದಾರೆ.

ಶಾರುಖ್​ ಖಾನ್​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರನ್ನು ವಿದೇಶದಲ್ಲಿ ಕೋಟ್ಯಂತರ ಜನರು ಇಷ್ಟಪಡುತ್ತಾರೆ. ಶಾರುಖ್​ ಖಾನ್​ ಎಂದರೆ ದುಬೈನಲ್ಲಿನ ಜನರಿಗೂ ಸಖತ್​ ಪ್ರೀತಿ. ಅದೇ ರೀತಿ ಶಾರುಖ್​ ಅವರಿಗೂ ದುಬೈ ಬಗ್ಗೆ ವಿಶೇಷ ಒಲವು ಇದೆ. ಅಲ್ಲಿನ ಪ್ರವಾಸಿ ತಾಣಗಳು ಅವರಿಗೆ ಇಷ್ಟ. ಆ ಕಾರಣದಿಂದ ಅವರನ್ನು ದುಬೈ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಅದರ ಭಾಗವಾಗಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ದುಬೈನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹಾಡಿ ಹೊಗಳಲಾಗಿತ್ತು. ಜೊತೆಗೆ, ದುಬೈ ಮಂದಿಗೆ ಶಾರುಖ್​ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದನ್ನು ತೋರಿಸಲಾಗಿತ್ತು.

ಇದನ್ನೂ ಓದಿ:

ಶಾರುಖ್​ ಖಾನ್​ ಹೊಸ ಲುಕ್​ ನೋಡಿ ವಾವ್​ ಎಂದ ಫ್ಯಾನ್ಸ್​; ಇಲ್ಲಿವೆ ಫೋಟೋಗಳು

8 ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​; ಮಸ್ತ್​ ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ