ರಣಬೀರ್-ಆಲಿಯಾ ಮದುವೆಗೆ ಕೊನೆಗೂ ನಿಗದಿ ಆಯ್ತು ಮುಹೂರ್ತ; ಪೂರ್ವಜರ ಮನೆಯಲ್ಲಿ ವಿವಾಹ ಕಾರ್ಯ

ರಣಬೀರ್-ಆಲಿಯಾ ಮದುವೆಗೆ ಕೊನೆಗೂ ನಿಗದಿ ಆಯ್ತು ಮುಹೂರ್ತ; ಪೂರ್ವಜರ ಮನೆಯಲ್ಲಿ ವಿವಾಹ ಕಾರ್ಯ
ರಣಬೀರ್​-ಆಲಿಯಾ

ರಣಬೀರ್ ಕಪೂರ್ ಅವರು ಮದುವೆಗೆ ಯಾವುದೋ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾ​ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ.

TV9kannada Web Team

| Edited By: Rajesh Duggumane

Apr 02, 2022 | 5:36 PM

ರಣಬೀರ್ ಕಪೂರ್ (Rambir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆ ವಿಚಾರ ಹಲವು ತಿಂಗಳಿಂದ ಚರ್ಚೆಯಲ್ಲಿದೆ. ಕೊವಿಡ್ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ವರದಿ ಆಗಿತ್ತು. ಆದರೆ, ಈವರೆಗೆ ಇಬ್ಬರೂ ವಿವಾಹ ಆಗುತ್ತಿರುವುದು ಯಾವಾಗ ಎನ್ನುವ ವಿಚಾರ ಅಧಿಕೃತವಾಗಿಲ್ಲ. ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಪ್ರಕಾರ, ಬಾಲಿವುಡ್​ನ ಈ ಕ್ಯೂಟ್ ಜೋಡಿ​​ ಶೀಘ್ರದಲ್ಲೇ ಹಸೆಮಣೆ ಏರಲಿದೆ. ಮದುವೆ ಆಗುವುದಕ್ಕೆ ಜಾಗ ಕೂಡ ನಿಗದಿ ಆಗಿದ್ದು, ದಿನಾಂಕ ಕೂಡ ಫೈನಲ್​ ಮಾಡಲಾಗಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್​ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿದೆ. ವಿಶೇಷ ಎಂದರೆ, ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತು. ಹೀಗಿರುವಾಗಲೇ ಇಬ್ಬರೂ ಜತೆಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದೆ. ಈಗ ಈ ಪ್ರೀತಿ ಮದುವೆವರೆಗೆ ಬಂದು ನಿಂತಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಂಬರುವ ಏಪ್ರಿಲ್​ನಲ್ಲಿ ಮದುವೆ ಆಗುತ್ತಿರುವ ಬಗ್ಗೆ ಪಿಂಕ್​ವಿಲ್ಲಾ ವರದಿ ಮಾಡಿದೆ. ರಣಬೀರ್ ಕಪೂರ್ ಅವರು ಮದುವೆಗೆ ಯಾವುದೋ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾ​ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಇದೇ ಮನೆಯಲ್ಲಿ ರಣಬೀರ್ ಕಪೂರ್ ತಂದೆ-ತಾಯಿ, ರಿಷಿ ಕಪೂರ್ ಹಾಗೂ ನೀತು ಕಪೂರ್​ 1980ರ ಜನವರಿ 20ರಂದು ಮದುವೆ ಆಗಿದ್ದರು. ರಣಬೀರ್​-ಆಲಿಯಾ ವಿವಾಹಕ್ಕೆ ಸುಮಾರು 450 ಅತಿಥಿಗಳು ಬರುವ ನಿರೀಕ್ಷೆ ಇದೆ. ಏಪ್ರಿಲ್ ಎರಡನೇ ವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸಿಟ್ಟಾಗಿದ್ದ ರಣಬೀರ್​

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಜೋಡಿ 2020ರಲ್ಲೇ ಮದುವೆ ಆಗಬೇಕಿತ್ತು. ಆದರೆ, ಆಗ ಕೊವಿಡ್​ ಕಾಣಿಸಿಕೊಂಡಿತು. ಆ ಬಳಿಕ ರಣಬೀರ್​ ತಂದೆ ರಿಷಿ ಕಪೂರ್ ನಿಧನ ಹೊಂದಿದರು. ಇದರಿಂದ ರಣಬೀರ್​-ಆಲಿಯಾ ಮದುವೆ ವಿಳಂಬವಾಯಿತು. ಈಗ ಇಬ್ಬರೂ ಮದುವೆ ಆಗುವ ದಿನಾಂಕ ಹತ್ತಿರವಾಗಿದೆ. ಈ ಬಗ್ಗೆ ಎನ್​ಡಿಟಿವಿ ಅವರು ರಣಬೀರ್​ಗೆ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ರಣಬೀರ್ ಸಿಟ್ಟಾಗಿದ್ದರು.

ರಣಬೀರ್​ ಅವರ ಎದುರು ‘ನಿಮ್ಮ ಮದುವೆ ಯಾವಾಗ’ ಎಂದು ಕೇಳಲಾಗಿತ್ತು. ಈ ಪ್ರಶ್ನೆಯಿಂದ ಅವರು ಅಸಮಾಧಾನಗೊಂಡರು. ‘ನನ್ನ ಮದುವೆ ಯಾವಾಗ? ಎಲ್ಲಿ ನಡೆಯಲಿದೆ? ಎಂಬ ಮಾಹಿತಿಯನ್ನು ಮಾಧ್ಯಮದವರಿಗೆ ನೀಡಲು ನನಗೆ ಹುಚ್ಚು ನಾಯಿ ಕಚ್ಚಿಲ್ಲ’ ಎಂದಿದ್ದರು ಅವರು. ಇದಾದ ನಂತರ ಸ್ವಲ್ಪ ಶಾಂತರಾದ ಅವರು ‘ಶೀಘ್ರದಲ್ಲೇ ಮದುವೆ ಆಗುತ್ತೇವೆ’ ಎಂದಷ್ಟೇ ಹೇಳಿ ಹೊರಟರು.

ಇದನ್ನೂ ಓದಿ:ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ 

Alia Bhatt: ‘ಆರ್​ಆರ್​ಆರ್​’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್​ ಫ್ಯಾನ್ಸ್

Follow us on

Related Stories

Most Read Stories

Click on your DTH Provider to Add TV9 Kannada