ವಿಶೇಷ ದಿನ ಏಪ್ರಿಲ್​ 14ಕ್ಕೂ ಮೊದಲೇ ಶಾಹಿದ್ ಕಪೂರ್ ಮನೆಗೆ ಬಂತು 3 ಕೋಟಿ ರೂ. ಕಾರು

ವಿಶೇಷ ದಿನ ಏಪ್ರಿಲ್​ 14ಕ್ಕೂ ಮೊದಲೇ ಶಾಹಿದ್ ಕಪೂರ್ ಮನೆಗೆ ಬಂತು 3 ಕೋಟಿ ರೂ. ಕಾರು

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಐಷಾರಾಮಿ ಕಾರು ಖರೀದಿ ಮಾಡೋಕೆ ಇಷ್ಟಪಡುತ್ತಾರೆ. ಹಲವು ಸೆಲೆಬ್ರಿಟಿಗಳ ಬಳಿ ದೊಡ್ಡ ಕಾರ್​ ಕಲೆಕ್ಷನ್ ಇದೆ. ಇದಕ್ಕೆ ಶಾಹಿದ್​ ಕೂಡ ಹೊರತಾಗಿಲ್ಲ.

TV9kannada Web Team

| Edited By: Rajesh Duggumane

Apr 02, 2022 | 5:01 PM

ಶಾಹಿದ್ ಕಪೂರ್ (Shahid Kapoor)  ಅವರಿಗೆ ಏಪ್ರಿಲ್​ 14 ವಿಶೇಷ ದಿನ. ಅದಕ್ಕೆ ಕಾರಣ ‘ಜೆರ್ಸಿ’ ಸಿನಿಮಾ (Jersey Movie). ಅವರ ನಟನೆಯ ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರ ರಿಲೀಸ್ ಆಗೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮೊದಲೇ ಶಾಹಿದ್ ಕಪೂರ್ ಮನೆಗೆ ಐಷಾರಾಮಿ ಕಾರು (Laxury car) ಬಂದಿದೆ. ಇದರ ಬೆಲೆ 3 ಕೋಟಿ ರೂಪಾಯಿ. ಈ ವಿಡಿಯೋವನ್ನು ಶಾಹಿದ್ ಕಪೂರ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೋ ನೋಡಿ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಐಷಾರಾಮಿ ಕಾರು ಖರೀದಿ ಮಾಡೋಕೆ ಇಷ್ಟಪಡುತ್ತಾರೆ. ಹಲವು ಸೆಲೆಬ್ರಿಟಿಗಳ ಬಳಿ ದೊಡ್ಡ ಕಾರ್​ ಕಲೆಕ್ಷನ್ ಇದೆ. ಇದಕ್ಕೆ ಶಾಹಿದ್​ ಕೂಡ ಹೊರತಾಗಿಲ್ಲ. ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಇದಕ್ಕೆ ಈಗ ಹೊಸ ಸೇರ್ಪಡೆ ಆಗಿದೆ. ಅವರು ಮರ್ಸಿಡಿಸ್-ಮೇಬ್ಯಾಕ್ ಎಸ್​580 ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಎಕ್ಸ್​ ಶೋರೂಂ ಬೆಲೆ 2.79 ಕೋಟಿ ರೂಪಾಯಿ. ಆನ್​ರೋಡ್​ ಬೆಲೆ 3 ಕೋಟಿ ರೂಪಾಯಿ ದಾಟಲಿದೆ.

ಶಾಹಿದ್ ಅವರು ಕಾರಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕ ಅಭಿಮಾನಿಗಳು ಶಾಹಿದ್​ಗೆ ಶುಭಾಶಯ ತಿಳಿಸಿದ್ದಾರೆ. ಇನ್ನೂ ಕೆಲವರು ಶಾಹಿದ್ ಕಪೂರ್ ಅವರ ಸಿನಿಮಾ ‘ಜೆರ್ಸಿ’ಗಾಗಿ ಕಾಯುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ತೆಲುಗಿನ ‘ಜೆರ್ಸಿ’ ಸಿನಿಮಾ ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆಗಿದೆ. ಶಾಹಿದ್ ಅವರು ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ನಾನಿ ಮಾಡಿದ್ದ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ರಿಲೀಸ್ ಆಗುತ್ತಿದೆ. ಇದೇ ದಿನ ಕನ್ನಡದ ‘ಕೆಜಿಎಫ್​ 2’ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಎರಡೂ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಟ್ಟೆ ಧರಿಸದೇ ರಸ್ತೆಗೆ ಬಂದ್ರಾ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​? ನೆಟ್ಟಿಗರಿಂದ ವ್ಯಂಗ್ಯದ ಪ್ರಶ್ನೆ

ಕೊರೊನಾ ಮಧ್ಯೆಯೂ ಹೊಸ ಪ್ರಯೋಗಕ್ಕೆ ಮುಂದಾದ ಶಾಹಿದ್ ಕಪೂರ್

Follow us on

Related Stories

Most Read Stories

Click on your DTH Provider to Add TV9 Kannada