ಐಶ್ವರ್ಯಾ ರೈ ಇ.ಡಿ.ವಿಚಾರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿದ ಜಯಾ ಬಚ್ಚನ್​; ಕೆಂಪು ಟೋಪಿ ಶಕ್ತಿ ತೋರಿಸುತ್ತೇವೆಂದು ಖಡಕ್​ ಎಚ್ಚರಿಕೆ

ಮುಳುಗುತ್ತಿರುವ ಹಡಗು ಏನಾಗುತ್ತದೆ? ಯಾರು ಮೊದಲು ಓಡುತ್ತಾರೆ? ಅದೇ ಪರಿಸ್ಥಿತಿ ಬಿಜೆಪಿಗೂ ಎದುರಾಗಿದೆ.  ಈಗಲೇ ಬಿಜೆಪಿಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ ಎಂದು ಸಂಸದೆ ಜಯಾ ಬಚ್ಚನ್​ ಹೇಳಿದ್ದಾರೆ.

ಐಶ್ವರ್ಯಾ ರೈ ಇ.ಡಿ.ವಿಚಾರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿದ ಜಯಾ ಬಚ್ಚನ್​; ಕೆಂಪು ಟೋಪಿ ಶಕ್ತಿ ತೋರಿಸುತ್ತೇವೆಂದು ಖಡಕ್​ ಎಚ್ಚರಿಕೆ
ಜಯಾ ಬಚ್ಚನ್​
Follow us
| Updated By: Lakshmi Hegde

Updated on: Dec 21, 2021 | 1:32 PM

ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ರಸಗೊಬ್ಬರ ಕಾರ್ಖಾನೆ ಉದ್ಘಾಟನೆ ಮಾಡಲು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಂಪು ಟೋಪಿ (Laal Topi) ಧರಿಸುವವರು ಉತ್ತರ ಪ್ರದೇಶಕ್ಕೆ ರೆಡ್​ ಅಲರ್ಟ್​ ಇದ್ದ ಹಾಗೆ ಎಂದು ಹೇಳಿದ್ದರು. ಈ ಮೂಲಕ ಕೆಂಪು ಟೋಪಿ ಧರಿಸುವ ಸಮಾಜವಾದಿ ಪಕ್ಷ ಉತ್ತರಪ್ರದೇಶಕ್ಕೆ ಮಾರಕ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಈ ಹೇಳಿಕೆಗೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್(Samajwadi Party MP Jaya Bachchan)​ ತಿರುಗೇಟು ನೀಡಿದ್ದಾರೆ. ಕೆಂಪುಟೋಪಿಯವರು ಮಾತ್ರ ಬಿಜೆಪಿಯವರನ್ನು ಕೋರ್ಟ್​ಗೆ ಎಳೆದು ತರಬಲ್ಲರು ಎಂದು ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗೇ, ಪ್ರತಿಪಕ್ಷ ಬಿಜೆಪಿಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

ನಟಿ ಜಯಾ ಬಚ್ಚನ್​ ಖ್ಯಾತ ನಟ ಅಮಿತಾಭ್ ಬಚ್ಚನ್​ ಪತ್ನಿ. ಸಮಾಜವಾದಿ ಪಾರ್ಟಿ ಸಂಸದೆಯಾಗಿರುವ ಅವರು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುತ್ತಾರೆ. ಇಂದು ಮಾಧ್ಯಮದವರ ಬಳಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಕೆಂಪು ಟೋಪಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಪನಾಮಾ ಪೇಪರ್ ಕೇಸ್​​ನಲ್ಲಿ ಜಯಾ ಬಚ್ಚನ್​ ಸೊಸೆ ಐಶ್ವರ್ಯಾ ರೈ ಹೆಸರು ಕೂಡ ಕೇಳಿಬಂದಿದ್ದು, ಅವರಿಗೆ ಇ.ಡಿ. ನೋಟಿಸ್ ನೋಡಿತ್ತು. ಅಂತೆಯೇ ಐಶ್ವರ್ಯಾ ರೈ, ಜಾರಿ ನಿರ್ದೇಶನಾಯಲಯದ ಕಚೇರಿಗೆ ತೆರಳಿ ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜಯಾ ಬಚ್ಚನ್​ ಉತ್ತರ ನೀಡಲಿಲ್ಲ. ನಾನಿಲ್ಲಿ ನನ್ನ ಬಗ್ಗೆಯಾಗಲಿ, ನನ್ನ ಕುಟುಂಬದ ಬಗ್ಗೆಯಾಗಲಿ ಮಾತನಾಡಲಾರೆ ಎಂದಿದ್ದಾರೆ.

ಆದರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಳುಗುತ್ತಿರುವ ಹಡಗು ಏನಾಗುತ್ತದೆ? ಯಾರು ಮೊದಲು ಓಡುತ್ತಾರೆ? ಅದೇ ಪರಿಸ್ಥಿತಿ ಬಿಜೆಪಿಗೂ ಎದುರಾಗಿದೆ.  ಈಗಲೇ ಬಿಜೆಪಿಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ ಎಂದು ಹೇಳಿದರು. ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ನ್ಯಾಯ ಮತ್ತು ನಿಷ್ಪಕ್ಷಪಾತದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಸೋಮವಾರ ಐಶ್ವರ್ಯಾ ರೈ ಇ.ಡಿ. ವಿಚಾರಣೆಗೆ ಹಾಜರಾದ ಕೆಲವೇ ಹೊತ್ತಲ್ಲಿ, ಜಯಾ ಬಚ್ಚನ್​ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿಯವರಿಗೆ ಶೀಘ್ರದಲ್ಲೇ ಕೆಟ್ಟ ದಿನ ಪ್ರಾರಂಭವಾಗಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆಯ ಕಿಟಕಿ ಕಂಬಿ ಕತ್ತರಿಸಿ 19 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ