Kolkata Municipal Corporation ಕೆಎಂಸಿ ಚುನಾವಣೆಯಲ್ಲಿ 17 ಸೀಟು ಗೆದ್ದ ಟಿಎಂಸಿ, 3 ವಾರ್ಡ್​​ಗಳಲ್ಲಿ ಬಿಜೆಪಿ ಮುನ್ನಡೆ

Kolkata Municipal Corporation Election Results 2021 ವಿಧಾನಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

Kolkata Municipal Corporation ಕೆಎಂಸಿ ಚುನಾವಣೆಯಲ್ಲಿ 17 ಸೀಟು ಗೆದ್ದ ಟಿಎಂಸಿ, 3 ವಾರ್ಡ್​​ಗಳಲ್ಲಿ ಬಿಜೆಪಿ ಮುನ್ನಡೆ
ಟಿಎಂಸಿ ಕಾರ್ಯಕರ್ತರ ಸಂಭ್ರಮಾಚರಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 21, 2021 | 12:28 PM

ಕೊಲ್ಕತ್ತಾ:  ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (Kolkata Municipal Corporation) ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷವು 17 ಸ್ಥಾನಗಳನ್ನು ಗಳಿಸುವ ಮೂಲಕ ಪ್ರಚಂಡ ಗೆಲುವು ದಾಖಲಿಸುವ ವಿಶ್ವಾಸವನ್ನುನಾಯಕರು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸೀಟು ಗೆದ್ದಿದೆ.  133  ವಾರ್ಡ್​​ಗಳಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ.  4,959 ಮತಗಟ್ಟೆಗಳಲ್ಲಿ ಭಾನುವಾರದಂದು ಹೆಚ್ಚಿನ ಭದ್ರತೆ ಮತ್ತು ಕೊವಿಡ್ -19 ಪ್ರೋಟೋಕಾಲ್‌ಗಳನ್ನು ಅನುಸರಿಸುವ ನಡುವೆ ಚುನಾವಣೆ ನಡೆದಿತ್ತು. ಎಡರಂಗದ ಪಕ್ಷಗಳು ನಾಲ್ಕು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿಯು ಎರಡನೇ ಸ್ಥಾನದಲ್ಲಿದೆ. ವಿಧಾನಸಭೆ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎರಡು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಟಿಎಂಸಿಯ ಪ್ರಮುಖ ಅಭ್ಯರ್ಥಿಗಳಾದ ದೇಬಾಶಿಶ್ ಕುಮಾರ್ (ವಾರ್ಡ್ 85), ತಾರಕ್ ಸಿಂಗ್ (ವಾರ್ಡ್ 118), ಮತ್ತು ಮಾಲಾ ರಾಯ್ (ವಾರ್ಡ್ 88) ವಿಜೇತರೆಂದು ಘೋಷಿಸಲಾಗಿದೆ. ಇಲ್ಲಿಯವರೆಗೆ ಟಿಎಂಸಿ 74.2 ರಷ್ಟು ಮತ ಹಂಚಿಕೆಯನ್ನು ಪಡೆದಿದೆ. ಬಿಜೆಪಿ ಶೇ 8 ಮತಗಳನ್ನು ಪಡೆದಿದ್ದು ಸಿಪಿಎಂ ಶೇ 9.1 ಮತಗಳನ್ನು ಪಡೆದಿದೆ. ಕೆಎಂಸಿ ಅನ್ನು 144 ಆಡಳಿತಾತ್ಮಕ ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಇವುಗಳನ್ನು 16 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸುಮಾರು 40.5 ಲಕ್ಷ ಮತದಾರರಲ್ಲಿ ಶೇಕಡಾ 63 ಕ್ಕಿಂತ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೂ ಸಹ, ಎರಡು ಬೂತ್‌ಗಳಲ್ಲಿ ಬಾಂಬ್‌ ಎಸೆತ ಸೇರಿದಂತೆ ವಿರಳವಾದ ಹಿಂಸಾಚಾರದ ಘಟನೆಗಳು ಭಾನುವಾರ ವರದಿ ಆಗಿದೆ.

ಟಿಎಂಸಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಲಘು ಘರ್ಷಣೆ ಮತ ಎಣಿಕೆ ನಡೆಯುತ್ತಿರುವ ನೇತಾಜಿ ಒಳಾಂಗಣ ಕ್ರೀಡಾಂಗಣದ ಹೊರಗೆ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಂತೋಷ್ ಪಾಠಕ್ ಬೆಂಬಲಿಗರು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಣ್ಣ ಘರ್ಷಣೆ ನಡೆದಿದೆ. ಆದರೆ ಪೊಲೀಸರು ಕೂಡಲೇ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಟಿಎಂಸಿಯ ಫಿರ್ಹಾದ್ ಹಕೀಂ ಅವರು 5ನೇ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆ ರಾಜ್ಯ ಸಚಿವ ಮತ್ತು ಹಿರಿಯ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರು ವಾರ್ಡ್ 82 ರಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಟಿಎಂಸಿ ಕೌನ್ಸಿಲರ್ ಆಗಿ ಇದು ಅವರ ಐದನೇ ಗೆಲುವು.  ನಾವು ಹಿಂದೆಂದೂ ಅಂತಹ ಬೃಹತ್ ವಿಜಯವನ್ನು ಸಾಧಿಸಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯ ವಿಷಯದಲ್ಲಿಯೂ ನಮ್ಮ ಮತಗಳ ಪ್ರಮಾಣ ಹೆಚ್ಚಾಗಿದೆ. ಜನರ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯಲು ನಾವು ಸಂತೋಷಪಡುತ್ತೇವೆ. ನಾವು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇವೆ ಎಂದು ಮಾಜಿ ಕೋಲ್ಕತ್ತಾ ಮೇಯರ್ ಮತ್ತು ಕೆಎಂಸಿಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಹಕೀಮ್ ಹೇಳಿದರು.

ಟಿಎಂಸಿಯ ತಾರಕ್ ಸಿಂಗ್ ಮಗ ಮತ್ತು ಮಗಳಿಗೆ ಗೆಲುವು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಟಿಎಂಸಿಯ ಹಿರಿಯ ನಾಯಕ ತಾರಕ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಿಂದ ಗೆದ್ದಿದ್ದಾರೆ. ಸಿಂಗ್ ಅವರು ವಾರ್ಡ್ 118 ರಿಂದ ಚುನಾವಣೆಯಲ್ಲಿ ಗೆದ್ದಿದ್ದರೆ ಅವರ ಪುತ್ರಿ ಕೃಷ್ಣ ಸಿಂಗ್ ಮತ್ತು ಮಗ ಅಮಿತ್ ಸಿಂಗ್ ಕ್ರಮವಾಗಿ ವಾರ್ಡ್ 116 ಮತ್ತು 117 ರಿಂದ ಗೆದ್ದಿದ್ದಾರೆ. ಏತನ್ಮಧ್ಯೆ, ವಾರ್ಡ್ 45 ರಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಪಾಠಕ್ 1,956 ಮತಗಳ ಅಂತರದಿಂದ ಗೆದ್ದಿದ್ದಾರೆ. ಟಿಎಂಸಿ ನಾಯಕರಿಗೆ ಗೆಲುವು ರಾಜ್ಯ ಸಚಿವ ಮತ್ತು ಹಿರಿಯ ಟಿಎಂಸಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಅವರ ಪುತ್ರ ಸೌರವ್ ಬಸು ಅವರು ವಾರ್ಡ್ 86 ರಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ವಾರ್ಡ್ 108 ರಿಂದ ಟಿಎಂಸಿ ಅಭ್ಯರ್ಥಿ ಸುಶಾಂತ ಕುಮಾರ್ ಘೋಷ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಏತನ್ಮಧ್ಯೆ ಪಕ್ಷದ ಅಭ್ಯರ್ಥಿ ಅನನ್ಯಾ ಬಂದೋಪಾಧ್ಯಾಯ ಅವರು ವಾರ್ಡ್ 109 ರಿಂದ ಚುನಾವಣೆಯಲ್ಲಿ 37,668 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ವಾರ್ಡ್ 115 ರ ಟಿಎಂಸಿ ಅಭ್ಯರ್ಥಿ ರತ್ನಾ ಸೂರ್ ಕೂಡಾ ಗೆದ್ದಿದ್ದಾರೆ.

ಕೆಎಂಸಿ ಚುನಾವಣೆಯಲ್ಲಿ ಬಿಜೆಪಿಯ ಮೀನಾ ದೇವಿ ಪುರೋಹಿತ್ ಸತತ 6ನೇ ಬಾರಿ ಗೆಲುವು ವಾರ್ಡ್ 22ರ ಬಿಜೆಪಿ ಅಭ್ಯರ್ಥಿ ಮೀನಾ ದೇವಿ ಪುರೋಹಿತ್ ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕೆಎಂಸಿ ಚುನಾವಣೆಯಲ್ಲಿ ಇದು ಅವರ ಸತತ ಆರನೇ ಗೆಲುವು.ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಬಿಜಯ್ ಓಜಾ ಅವರು ವಾರ್ಡ್ 23 ರಿಂದ ಗೆದ್ದಿದ್ದಾರೆ. ಇದು ಅವರ ಮೂರನೇ ಗೆಲುವು ಆಗಿದೆ.

ಇದನ್ನೂ ಓದಿ:  ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಹಿಳಾ ಸಬಲೀಕರಣ ಯೋಜನೆಗಳ ಫಲಾನುಭವಿಗಳಿಗೆ ₹1000 ಕೋಟಿ ವರ್ಗಾವಣೆ ಮಾಡಲಿದ್ದಾರೆ ಮೋದಿ

Published On - 12:05 pm, Tue, 21 December 21