ಒಟಿಟಿಗೆ ಲಗ್ಗೆ ಇಡುತ್ತಿದೆ ‘ಹೀರೋಪಂತಿ 2’; ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡ ಟೈಗರ್

‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ.

ಒಟಿಟಿಗೆ ಲಗ್ಗೆ ಇಡುತ್ತಿದೆ ‘ಹೀರೋಪಂತಿ 2’; ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡ ಟೈಗರ್
ಹೀರೋಪಂತಿ 2
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 26, 2022 | 7:00 AM

ನಟ ಟೈಗರ್ ಶ್ರಾಫ್ (Tiger Shroff)​ ಸಿನಿಮಾಗಳಲ್ಲಿ ಆ್ಯಕ್ಷನ್​ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಮೈನವಿರೇಳಿಸುವ ದೃಶ್ಯಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಈ ಮೊದಲು ಇದು ಅನೇಕ ಬಾರಿ ಸಾಬೀತಾಗಿದೆ. ಅವರು ಮಾಡುವ ಸ್ಟಂಟ್ಸ್​​ಗಳನ್ನು ನೋಡೋಕೆ ಅವರ ಫ್ಯಾನ್ಸ್​ ಇಷ್ಟಪಡುತ್ತಾರೆ. ಇತ್ತೀಚೆಗೆ ಅವರ ನಟನೆಯ ‘ಹೀರೋಪಂತಿ 2’ ಸಿನಿಮಾ (Heropanti 2 ) ರಿಲೀಸ್ ಆಗಿತ್ತು. ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆಗಳು ಬಂದವು. ಇನ್ನು, ‘ಕೆಜಿಎಫ್ 2’ ಅಬ್ಬರಕ್ಕೆ ಚಿತ್ರ ನಲುಗಿ ಹೋಗಿತ್ತು. ಹೀಗಾಗಿ, ಕೆಲವೇ ದಿನಗಳಲ್ಲಿ ಟೈಗರ್​ ನಟನೆಯ ಸಿನಿಮಾ ಚಿತ್ರಮಂದಿರದಿಂದ ಕಾಲ್ಕಿತ್ತಿತು. ಈಗ ಸಿನಿಮಾ ಒಟಿಟಿಯಲ್ಲಿ ಲಗ್ಗೆ ಇಡುತ್ತಿದೆ.

ಏಪ್ರಿಲ್ 29ರಂದು ಬಾಲಿವುಡ್​ನಲ್ಲಿ ಟೈಗರ್ ಶ್ರಾಫ್ ಅಭಿನಯದ ‘ಹೀರೋಪಂತಿ 2’ ಹಾಗೂ ಅಜಯ್​ ದೇವಗನ್ ನಟನೆಯ ‘ರನ್​ವೇ 34’ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆದವು. ‘ಹೀರೋಪಂತಿ’ ಸಿನಿಮಾ ಗೆದ್ದು ಬೀಗಿತ್ತು. ಈ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿತ್ತು. ಆದರೆ, ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನ 6.50 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ರೂಪಾಯಿ ದಾಟಿಲ್ಲ.

‘ಹೀರೋಪಂತಿ 2’ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಅಮೇಜಾನ್​ ಪ್ರೈಮ್ ವಿಡಿಯೋ ಘೋಷಣೆ ಮಾಡಿದೆ. ಟ್ವಿಟರ್​ನಲ್ಲಿ ಟೈಗರ್​ ಶ್ರಾಫ್​ ವಿಡಿಯೋವನ್ನು ಅಮೇಜಾನ್ ಪ್ರೈಮ್ ವಿಡಿಯೋ ಹಂಚಿಕೊಂಡಿದೆ. ಈ  ವಿಡಿಯೋದಲ್ಲಿ ಮೇ 27ರಂದು ಒಟಿಟಿಯಲ್ಲಿ ‘ಹೀರೋಪಂತಿ 2’ ವೀಕ್ಷಿಸುವಂತೆ ಕೋರಿದ್ದಾರೆ. ಸಖತ್ ಫನ್ನಿಯಾಗಿ ಈ ವಿಡಿಯೋ ಮೂಡಿ ಬಂದಿದೆ. ಒಟಿಟಿಯಲ್ಲಿ ಜನರು ಈ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ದೇವಿ ಅವತಾರದಲ್ಲಿ ದರ್ಶನ ಕೊಟ್ಟ ಶಿಲ್ಪಾ ಶೆಟ್ಟಿ; ಯಾವುದು ಈ ಹೊಸ ಸಿನಿಮಾ?

ಅಹ್ಮದ್​ ಖಾನ್​ ನಿರ್ದೇಶನ ಮಾಡಿರುವ ‘ಹೀರೋಪಂತಿ 2’ ಸಿನಿಮಾದ ಮೊದಲ ಶೆಡ್ಯೂಲ್​ ಮುಂಬೈನಲ್ಲಿ ನೆರವೇರಿತ್ತು.  ನಂತರ ಚಿತ್ರತಂಡ ರಷ್ಯಾ ಮೊದಲಾದ ರಾಷ್ಟ್ರಗಳಿಗೆ ತೆರಳಿ ಶೂಟಿಂಗ್ ಮುಗಿಸಿತ್ತು. ಸಿನಿಮಾಗೆ ಕೋಟ್ಯಂತರ ರೂಪಾಯಿ ಸುರಿದು ನಿರ್ಮಾಪಕರು ಚಿತ್ರದಿಂದ ನಷ್ಟ ಅನುಭವಿಸಿದ್ದಾರೆ ಎಂದು ವರದಿ ಆಗಿದೆ. ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್​ ನಾಡಿಯದ್ವಾಲಾ ಅವರು ‘ಹೀರೋಪಂತಿ’ ಸಿನಿಮಾ ಮೂಲಕ ಟೈಗರ್​ ಶ್ರಾಫ್​ ಅವರನ್ನು ಲಾಂಚ್​ ಮಾಡಿದ್ದರು. ಈ ಸರಣಿಯ ಎರಡನೇ ಸಿನಿಮಾ ಪ್ಲಾಫ್ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ