Alina Khan: ಕಾನ್​ ಚಿತ್ರೋತ್ಸವದ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ ಪಾಕಿಸ್ತಾನದ ತೃತೀಯ ಲಿಂಗಿ ಕಲಾವಿದೆ

Cannes Film Festival 2022: ಕಾನ್ ಚಿತ್ರೋತ್ಸವದಲ್ಲಿ ಪಾಕಿಸ್ತಾನಿ ಮೂಲದ ತೃತೀಯ ಲಿಂಗಿ ನಟಿ ಅಲಿನಾ ಖಾನ್​ ಭಾಗಿಯಾಗಿದ್ದಾರೆ. ಅವರು ನಟಿಸಿರುವ ‘ಜಾಯ್​ಲ್ಯಾಂಡ್’ ಪ್ರದರ್ಶನಗೊಂಡಿದ್ದು ಮೆಚ್ಚುಗೆ ಗಳಿಸಿದೆ. ಜತೆಗೆ ಅಲಿನಾ ಮೊದಲ ಬಾರಿಗೆ ರೆಡ್ ಕಾರ್ಪೆಟ್​​ನಲ್ಲಿ ಹೆಜ್ಜೆ ಹಾಕಿದ್ದಾರೆ.

Alina Khan: ಕಾನ್​ ಚಿತ್ರೋತ್ಸವದ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ ಪಾಕಿಸ್ತಾನದ ತೃತೀಯ ಲಿಂಗಿ ಕಲಾವಿದೆ
ಪಾಕಿಸ್ತಾನ ಮೂಲದ ಅಲಿನಾ ಖಾನ್​Image Credit source: Getty Images
Follow us
TV9 Web
| Updated By: shivaprasad.hs

Updated on: May 25, 2022 | 1:13 PM

2022ರ ಕಾನ್ ಚಲನಚಿತ್ರೋತ್ಸವ (Cannes Film Festival 2022) ಈ ಬಾರಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹಾಲಿವುಡ್, ಭಾರತೀಯ ಚಿತ್ರರಂಗ ಸೇರಿದಂತೆ ವಿಶ್ವದ ಪ್ರಖ್ಯಾತ ತಾರೆಯರು ರೆಡ್​ ಕಾರ್ಪೆಟ್​ನಲ್ಲಿ ವಿಶೇಷ ಉಡುಗೆಗಳನ್ನು ತೊಟ್ಟು ಹೆಜ್ಜೆಹಾಕಿದ್ದಾರೆ. ಭಾರತ ಈ ಬಾರಿ ‘country of honour’ ವಿಭಾಗದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ಅಚ್ಚರಿಯೆಂದರೆ ಈ ಚಿತ್ರೋತ್ಸವದಲ್ಲಿ ಪಾಕಿಸ್ತಾನದ ಚಿತ್ರವೊಂದಕ್ಕೆ ಅವಕಾಶ ಸಿಕ್ಕಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಚಿತ್ರವೊಂದು ಈ ಅವಕಾಶ ಪಡೆದಿದೆ ಎಂದು ವರದಿಗಳು ಹೇಳಿವೆ. ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ ‘ಜಾಯ್‌ಲ್ಯಾಂಡ್’ ಚಿತ್ರದಲ್ಲಿ ತೃತೀಯ ಲಿಂಗಿ ನಟಿ ಅಲಿನಾ ಖಾನ್ (Alina Khan) ಕೂಡ ಇದ್ದಾರೆ. ಮೊದಲ ಬಾರಿಗೆ ಅಲಿನಾ ಖಾನ್ ರೆಡ್​ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು, ಇದೀಗ ವಿಶ್ವಾದ್ಯಂತ ಸಖತ್ ಸುದ್ದಿಯಾಗಿದೆ.​

ಸೈಮ್ ಸಾದಿಕ್ ನಿರ್ದೇಶನದ ‘ಜಾಯ್​ಲ್ಯಾಂಡ್’ ಚಲನಚಿತ್ರದಲ್ಲಿ ಅಲಿನಾ ಖಾನ್ ಬಣ್ಣಹಚ್ಚಿದ್ದಾರೆ. ಪ್ರಸ್ತುತ ಕಾನ್ ಚಿತ್ರೋತ್ಸವದಲ್ಲಿ ಅವರು ಧರಿಸಿದ್ದ ದಿರಿಸು ಗಮನ ಸೆಳೆದಿದೆ. ಹಳದಿ- ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ ಅವರು ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದರು. ಅಲಿನಾ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆಹಾಕುವಾಗ ಮರೂನ್ ಬಣ್ಣದ ಸೀರೆ ಧರಿಸಿ ಕಾಣಿಸಿಕೊಂಡಿದ್ದರು. ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನಸೆಳೆದಿದೆ.

Alina Khan

ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆಹಾಕಿದ ‘ಜಾಯ್​ಲ್ಯಾಂಡ್​’ ಚಿತ್ರತಂಡ

ಇದನ್ನೂ ಓದಿ: Hina Khan Cannes Look : ಕಾನ್ ಚಿತ್ರೋತ್ಸವ; ಬೋಲ್ಡ್​​ ಅವತಾರದಲ್ಲಿ ಕಾಣಿಸಿಕೊಂಡ ಹಿನಾ ಖಾನ್​

ಇದನ್ನೂ ಓದಿ
Image
Ram Gopal Varma: ರಾಮ್​ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲು; ಚಿತ್ರ ನಿರ್ಮಿಸುತ್ತಿದ್ದೇನೆಂದು ಹೇಳಿ ಮೋಸ ಮಾಡಿದ್ರಾ ನಿರ್ದೇಶಕ?
Image
Prithviraj Movie: ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಚಿತ್ರವನ್ನು ವೀಕ್ಷಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
Image
Love Birds Movie: ‘ಲವ್ ಬರ್ಡ್ಸ್​’ನಲ್ಲಿ ತೆರೆ ಹಂಚಿಕೊಳ್ಳಲಿರುವ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್
Image
Karan Johar: 50ನೇ ವಸಂತಕ್ಕೆ ಕಾಲಿಟ್ಟ ಕರಣ್ ಜೋಹರ್; ಸ್ಟಾರ್ ನಿರ್ಮಾಪಕನ ಪಾರ್ಟಿಯಲ್ಲಿ ಯಶ್?

ಪಾಕಿಸ್ತಾನದ ತೃತೀಯ ಲಿಂಗಿ ಸಂಸ್ಕೃತಿ ಸೇರಿದಂತೆ ಹಲವು ವಿಚಾರಗಳನ್ನು ‘ಜಾಯ್​ಲ್ಯಾಂಡ್’ ಚಿತ್ರದ ಮೂಲಕ ಪ್ರಸ್ತುತಪಡಿಸಲಾಗಿದೆ. ಕಾನ್​ ಚಿತ್ರೋತ್ಸವದ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಈ ಸಿನಿಮಾ ಮೊದಲ ಪ್ರದರ್ಶನ ಕಂಡಿತು. ಚಿತ್ರದಲ್ಲಿ ಅಲಿನಾ ಖಾನ್ ಜತೆಗೆ ಅಲಿ ಜುನೇಜೊ, ರಸ್ತಿ ಫಾರೂಕ್, ಸರ್ವತ್ ಗಿಲಾನಿ, ಸೊಹೈಲ್ ಸಮೀರ್, ಸಲ್ಮಾನ್ ಪೀರ್ಜಾದಾ ಮತ್ತು ಸಾನಿಯಾ ಸಯೀದ್ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: Cannes film Festival 2022: ಕಾನ್​ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ ಜ್ಯೂರಿ; ಜಾಗತಿಕ ಮಟ್ಟದಲ್ಲಿ ಹೆಚ್ಚಿತು ಕನ್ನಡತಿಯ ಗೌರವ

ಕಾನ್ ಚಿತ್ರೋತ್ಸವವು ಮೇ 17ರಂದು ಆರಂಭವಾಗಿತ್ತು. ಮೇ 28ರ ಶನಿವಾರದಂದು ಈ ಉತ್ಸವ ಮುಕ್ತಾಯವಾಗಲಿದೆ. ಭಾರತದ ಅನೇಕ ತಾರೆಯರು ಈ ಬಾರಿ ಅಲ್ಲಿ ಹೆಜ್ಜೆಹಾಕಿದ್ಧಾರೆ. ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡಿದ್ದರು. ತಮನ್ನಾ ಭಾಟಿಯಾ, ಐಶ್ವರ್ಯಾ ರೈ, ಹಿನಾ ಖಾನ್, ಪೂಜಾ ಹೆಗ್ಡೆ ಸೇರಿದಂತೆ ಹಲವು ತಾರೆಯರು ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ