AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cannes film Festival 2022: ಕಾನ್​ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ ಜ್ಯೂರಿ; ಜಾಗತಿಕ ಮಟ್ಟದಲ್ಲಿ ಹೆಚ್ಚಿತು ಕನ್ನಡತಿಯ ಗೌರವ

Deepika Padukone: ಮೇ 17ರಂದು ಕಾನ್​ ಫಿಲ್ಮ್​ ಫೆಸ್ಟಿವಲ್​ ಆರಂಭ ಆಗಲಿದೆ. ದೀಪಿಕಾ ಪಡುಕೋಣೆ ಅವರು ಜ್ಯೂರಿ ತಂಡದ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

Cannes film Festival 2022: ಕಾನ್​ ಚಿತ್ರೋತ್ಸವಕ್ಕೆ ದೀಪಿಕಾ ಪಡುಕೋಣೆ ಜ್ಯೂರಿ; ಜಾಗತಿಕ ಮಟ್ಟದಲ್ಲಿ ಹೆಚ್ಚಿತು ಕನ್ನಡತಿಯ ಗೌರವ
ದೀಪಿಕಾ ಪಡುಕೋಣೆ
TV9 Web
| Edited By: |

Updated on: Apr 27, 2022 | 1:52 PM

Share

ಚಿತ್ರರಂಗದಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಸಾಧನೆ ದೊಡ್ಡದು. ಭಿನ್ನ ವಿಭಿನ್ನ ಸಿನಿಮಾ ಮತ್ತು ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಕನ್ನಡದಿಂದ ಬಾಲಿವುಡ್​ಗೆ ಕಾಲಿಟ್ಟ ಅವರು ನಂತರ ಹಾಲಿವುಡ್​ನಲ್ಲಿ ನಟಿಸಿ ಸೈ ಎನಿಸಿಕೊಂಡರು. ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ಈಗ ಅವರ ಪಾಲಿಗೆ ಇನ್ನೊಂದು ಗೌರವ ಸೇರ್ಪಡೆ ಆಗುತ್ತಿದೆ. ಪ್ರತಿಷ್ಠಿತ ಕಾನ್​ ಚಿತ್ರೋತ್ಸವದಲ್ಲಿ (Cannes film Festival 2022) ದೀಪಿಕಾ ಪಡುಕೋಣೆ ಭಾಗವಹಿಸುತ್ತಿದ್ದಾರೆ. ಅದು ಕೂಡ ಜ್ಯೂರಿ ಆಗಿ ಎಂಬುದು ವಿಶೇಷ. ಈ ಹಿಂದೆ ಅನೇಕ ಬಾರಿ ಸೌಂದರ್ಯ ವರ್ಧಕ ಕಂಪನಿಗಳ ಪ್ರಚಾರ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಅವರು ಕಾನ್​ ಚಿತ್ರೋತ್ಸವದಲ್ಲಿ (Cannes film Festival) ಭಾಗಿ ಆಗಿದ್ದುಂಟು. ಆದರೆ ಇದೇ ಮೊದಲ ಬಾರಿಗೆ ಅವರು ಜ್ಯೂರಿ ತಂಡದ ಸದಸ್ಯರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಜಾಗತಿಕ ಮಟ್ಟದಲ್ಲಿ ದೀಪಿಕಾ ಪಡುಕೋಣೆ ಖ್ಯಾತಿ ಹೆಚ್ಚಿದೆ. ಈ ಸಾಧನೆಗಾಗಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಈ ಕನ್ನಡತಿಯ ಸಿನಿ ಜರ್ನಿಯನ್ನು ಮೆಲುಕು ಹಾಕಲಾಗುತ್ತಿದೆ.

ಕಾನ್​ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಮನ್ನಣೆ ಇದೆ. ಈ ಸಿನಿಮೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನ ಆಗಬೇಕು ಎಂದು ಎಷ್ಟೋ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕನಸು ಕಾಣುತ್ತಾರೆ. ಈ ಬಾರಿ 21 ಸಿನಿಮಾಗಳು ಸ್ಪರ್ಧಿಸುತ್ತಿವೆ. ಈ ಹಿಂದೆ ಭಾರತದ ನಟಿಯರಾದ ಐಶ್ವರ್ಯಾ ರೈ ಬಚ್ಚನ್​, ವಿದ್ಯಾ ಬಾಲನ್, ಶರ್ಮಿಳಾ ಟಾಗೋರ್​, ನಂದಿತಾ ದಾಸ್​ ಅವರು ಕಾನ್​ ಚಿತ್ರೋತ್ಸವದ ಜ್ಯೂರಿಗಳಾಗಿ ಕೆಲಸ ಮಾಡಿದ್ದರು. ಈಗ ಆ ನಟಿಯರ ಸಾಲಿಗೆ ದೀಪಿಕಾ ಪಡುಕೋಣೆ ಕೂಡ ಸೇರ್ಪಡೆ ಆಗಿದ್ದಾರೆ.

ಈ ಬಾರಿ ಕಾನ್​ ಚಿತ್ರೋತ್ಸವದ ಜ್ಯೂರಿ ತಂಡದಲ್ಲಿ ದೀಪಿಕಾ ಪಡುಕೋಣೆ ಜೊತೆ ‘ಐರನ್​ ಮ್ಯಾನ್​ 3’ ಸಿನಿಮಾ ಖ್ಯಾತಿಯ ನೂಮಿ ರಪಾಸ್​, ‘ಶೆರ್ಲಾಕ್​ ಹೋಮ್ಸ್​: ಎ ಗೇಮ್​ ಆಫ್​ ಶಾಡೋಸ್​’ ಖ್ಯಾತಿಯ ರೆಬಿಕಾ ಹಾಲ್, ಅಸ್ಗರ್​ ಫರ್ಹಾದಿ, ಜಾಸ್ಮಿನ್​ ತ್ರಿಂಕಾ, ಜೆಫ್​ ನಿಕೋಲ್ಸ್​​ ಮುಂತಾದವರು ಇರಲಿದ್ದಾರೆ.

ಮೇ 17ರಂದು ಕಾನ್​ ಫಿಲ್ಮ್​ ಫೆಸ್ಟಿವಲ್​ ಆರಂಭ ಆಗಲಿದೆ. ಮೇ 28ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಸಿನಿಪ್ರಿಯರಿಗಾಗಿ ಈ ಚಿತ್ರೋತ್ಸವ ನಡೆಯುತ್ತಿದೆ. ಕಾನ್​ ಚಿತ್ರೋತ್ಸವದ ವೆಬ್​ಸೈಟ್​ನಲ್ಲಿ ಜ್ಯೂರಿ ದೀಪಿಕಾ ಪಡುಕೋಣೆ ಅವರ ಪರಿಚಯ ಮಾಡಿಕೊಡಲಾಗಿದೆ. ಭಾರತದ ನಟಿ, ನಿರ್ಮಾಪಕಿ, ಸಮಾಜ ಸೇವಕಿ ಮತ್ತು ಉದ್ಯಮಿ ಎಂದು ಅವರ ಬಗ್ಗೆ ವಿವರ ನೀಡಲಾಗಿದೆ.

ಪಿಕು, ಪದ್ಮಾವತ್​, ಗೆಹರಾಯಿಯಾ, 83, ಚಪಾಕ್​ ಸಿನಿಮಾಗಳ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ. ದೀಪಿಕಾ ನಟಿಸಿದ ‘ಎಕ್ಸ್​ಎಕ್ಸ್​ಎಕ್ಸ್​: ದಿ ರಿಟರ್ನ್​​ ಆಫ್​ ಗ್ಸಾಂಡರ್​ ಕೇಜ್​’ ಚಿತ್ರದ ಕುರಿತಾಗಿಯೂ ಪ್ರಸ್ತಾಪಿಸಲಾಗಿದೆ. 2018ರಲ್ಲಿ ದೀಪಿಕಾ ಪಡುಕೋಣೆ ಅವರು ಟಾಪ್​ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದಿ ಲಿವ್​ ಲವ್​ ಲಾಫ್​ ಫೌಂಡೇಶನ್​ ಅನ್ನು ದೀಪಿಕಾ ನಡೆಸುತ್ತಿದ್ದಾರೆ ಎಂದು ಕೂಡ ಪರಿಚಯ ಮಾಡಿಕೊಡಲಾಗಿದೆ. ಶಾರುಖ್​ ಖಾನ್​ ಜೊತೆಗಿನ ‘ಪಠಾಣ್​’ ಸೇರಿದಂತೆ ಅನೇಕ ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ