Love Birds Movie: ‘ಲವ್ ಬರ್ಡ್ಸ್​’ನಲ್ಲಿ ತೆರೆ ಹಂಚಿಕೊಳ್ಳಲಿರುವ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್

Darling Krishna | Milana Nagaraj: ಪಿಸಿ ಶೇಖರ್ ನಿರ್ದೇಶನದ, ಕಡ್ಡಿಪುಡಿ ಚಂದ್ರು ನಿರ್ಮಾಣದ ಚಿತ್ರ ‘ಲವ್ ಬರ್ಡ್ಸ್​​’ನಲ್ಲಿ ರಿಯಲ್ ಲವ್​ ಬರ್ಡ್ಸ್​​ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Love Birds Movie: ‘ಲವ್ ಬರ್ಡ್ಸ್​’ನಲ್ಲಿ ತೆರೆ ಹಂಚಿಕೊಳ್ಳಲಿರುವ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್
‘ಲವ್ ಬರ್ಡ್ಸ್​’ ಚಿತ್ರದ ಪೋಸ್ಟರ್ (ಎಡ), ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್
Follow us
TV9 Web
| Updated By: shivaprasad.hs

Updated on:May 25, 2022 | 8:12 AM

ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಪಿಸಿ ಶೇಖರ್ (PC Shekar) ಕಾಂಬಿನೇಷನ್​ನಲ್ಲಿ ಚಿತ್ರವೊಂದು ಬರೋದು ಕನ್ಫರ್ಮ್ ಆಗಿತ್ತು. ಇದೀಗ ಚಿತ್ರದ ನಾಯಕಿಯನ್ನು ಪರಿಚಯಿಸಲಾಗಿದೆ. ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿರುವ ಚಿತ್ರ ‘ಲವ್ ಬರ್ಡ್ಸ್​​’ನಲ್ಲಿ (Love Birds Movie) ರಿಯಲ್ ಲವ್​ ಬರ್ಡ್ಸ್​​ ಕೃಷ್ಣ ಹಾಗೂ ಮಿಲನಾ ನಾಗರಾಜ್ (Milana Nagaraj)​ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ್ದು, ಸಂತಸ ಹಂಚಿಕೊಂಡಿದೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಶೀಘ್ರದಲ್ಲೇ ಫಸ್ಟ್​​ ಲುಕ್ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ‘ಲವ್​ ಮಾಕ್ಟೇಲ್ 2’ ಯಶಸ್ಸಿನ ಸಂತಸದಲ್ಲಿರುವ ಈ ಜೋಡಿ ಮತ್ತೊಂದು ಚಿತ್ರದಲ್ಲಿ ತೆರೆ ಹಂಚಿಕೊಳ್ಳುವುದು ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಮದುವೆ ಆದ ಮೇಲಿನ ಪ್ರೀತಿಯ ಕತೆಯನ್ನು ‘ಲವ್ ಬರ್ಡ್ಸ್​​’ ಒಳಗೊಂಡಿದೆ.

ಮಿಲನಾ ನಾಗರಾಜ್ ಟ್ವೀಟ್:

ಇದನ್ನೂ ಓದಿ
Image
Karan Johar: 50ನೇ ವಸಂತಕ್ಕೆ ಕಾಲಿಟ್ಟ ಕರಣ್ ಜೋಹರ್; ಸ್ಟಾರ್ ನಿರ್ಮಾಪಕನ ಪಾರ್ಟಿಯಲ್ಲಿ ಯಶ್?
Image
ಒಂದು ಆ್ಯಕ್ಷನ್ ದೃಶ್ಯಕ್ಕೆ 35 ಲಕ್ಷ ರೂ. ವೆಚ್ಛ ಮಾಡಿದ ‘ಗೌಳಿ’ ತಂಡ; ಶ್ರೀನಗರ ಕಿಟ್ಟಿ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​
Image
ಮೇ ತಿಂಗಳನ್ನು ಕಳೆದಿದ್ದು ಹೇಗೆ ಎಂಬುದನ್ನು ಫೋಟೋ ಮೂಲಕ ವಿವರಿಸಿದ ಜಾನ್ವಿ ಕಪೂರ್
Image
‘ಮೊಬೈಲ್ ಸಂಖ್ಯೆ ಬದಲಿಸಿ ಈ ಮಹಾಮೋಸ ನಡೆದಿದೆ’; ಪತಿ ವಿರುದ್ಧ ಸುದ್ದಿಗೋಷ್ಠಿಯಲ್ಲಿ ನಟಿ ಚೈತ್ರಾ ಹಳ್ಳಿಕೇರಿ ಆರೋಪ

ಹೊಸ ಚಿತ್ರದ ಬಗ್ಗೆ ಮಾತನಾಡಿರುವ ಮಿಲನಾ, ಸಂತಸ ಹಂಚಿಕೊಂಡಿದ್ದಾರೆ. ‘‘ಕೃಷ್ಣ ಹಾಗೂ ನಾನು ತೆರೆಯ ಮೇಲೆ ಮತ್ತೆ ಜತೆಯಾಗಿ ಕಾಣಿಸಿಕೊಳ್ಳಬೇಕು, ಅದಕ್ಕೆ ಸ್ಕ್ರಿಪ್ಟ್ ಬರೆಯಬೇಕು ಎಂದು ಯೋಚಿಸಿದ್ದೆವು. ಆದರೆ ಅವರು ಪ್ರಸ್ತುತ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಚಿತ್ರದ ಸ್ಕ್ರಿಪ್ಟ್ ಕೇಳಿದಾಗ ಕನೆಕ್ಟ್ ಆಯಿತು. ಲವ್​ ಮಾಕ್ಟೇಲ್ ರೊಮಾನ್ಸ್ ಬಗ್ಗೆಯಿದ್ದರೆ, ಇದೊಂದು ಹೊಸ ಅನುಭವವಾಗಿರಲಿದೆ. ಪಿಸಿ ಶೇಖರ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ’’ ಎಂದಿದ್ದಾರೆ ಮಿಲನಾ.

ಹೊಸದಾಗಿ ಮದುವೆಯಾದ ಆಧುನಿಕ ಕಾಲಘಟ್ಟದ ದಂಪತಿಯ ಕತೆಯನ್ನು ಚಿತ್ರ ಒಳಗೊಂಡಿದೆ. ಕಳೆದ ಒಂದೆರಡು ದಶಕಗಳಲ್ಲಿ ಮದುವೆಯ ಬಗೆಗಿನ ದೃಷ್ಟಿಕೋನಗಳು ಬದಲಾಗಿವೆ. ಈಗ ಮಹಿಳೆ ಪುರುಷನ ಮೇಲೆ ಅವಲಂಬಿತವಾಗಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಿರುವುದು ಮನೆಯಲ್ಲಿನ ಅಧಿಕಾರದ ದೃಷ್ಟಿಕೋನವನ್ನು ಬದಲಾಯಿಸಿದೆ. ಇದೆಲ್ಲವನ್ನು ಚಿತ್ರ ಒಳಗೊಂಡಿರಲಿದೆ ಎಂದಿದ್ದಾರೆ ನಿರ್ದೇಶಕ ಪಿಸಿ ಶೇಖರ್.

ಇದನ್ನೂ ಓದಿ: ಸಿಂಗಾಪುರದಲ್ಲಿ ಮಿಲನಾ ನಾಗರಾಜ್​-ಡಾರ್ಲಿಂಗ್ ಕೃಷ್ಣ; ವೈರಲ್ ಆಯ್ತು ಫೋಟೋ

ಮ್ಯೂಸಿಕಲ್ ಲವ್ ಸ್ಟೋರಿಯಾಗಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನೀಡುತ್ತಿದ್ದಾರೆ. ಪಿಸಿ ಶೇಖರ್ ಹಾಗೂ ಅರ್ಜುನ್ ಜನ್ಯ ಒಂಬತ್ತನೇ ಬಾರಿ ಚಿತ್ರವೊಂದರಲ್ಲಿ ಜತೆಯಾಗಿ ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್, ಅವಿನಾಶ್ ಮೊದಲಾದ ಕಲಾವಿದರು ಬಣ್ಣಹಚ್ಚಲಿದ್ದಾರೆ. ಚಿತ್ರಕ್ಕಾಗಿ ಸೆಟ್​ಗಳ ತಯಾರಿ ನಡೆಯುತ್ತಿದ್ದು, ಅಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 am, Wed, 25 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ