ವೀಲ್ ಚೇರ್ ರೋಮಿಯೋದಲ್ಲಡಗಿದೆ ಅಪ್ಪ ಮಗನ ಸೆಂಟಿಮೆಂಟ್ !

ವೀಲ್ ಚೇರ್ ರೋಮಿಯೋದಲ್ಲಡಗಿದೆ ಅಪ್ಪ ಮಗನ ಸೆಂಟಿಮೆಂಟ್ !

ವೀಲ್ ಚೇರ್ ರೋಮಿಯೋ ಸಿನಿಮಾ ಕಣ್ಣಿಲ್ಲದ ವೇಶ್ಯೆ ಮತ್ತು ಕಾಲಿಲ್ಲದ ಹುಡುಗನ ಮಧ್ಯೆ ಶುರುವಾಗುವ ಪ್ರೀತಿ ಪ್ರೇಮದ ಕಥೆಯನ್ನು ಹೊಂದಿದೆ. ಇದೇ ತಿಂಗಳ 27 ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

TV9kannada Web Team

| Edited By: Rajesh Duggumane

May 25, 2022 | 5:56 PM

ಇಷ್ಟು ದಿನ ಅದೆಷ್ಟೋ ಸಿನಿಮಾಗಳಲ್ಲಿ ಅಮ್ಮ ಮಗನ ಸೆಂಟಿಮೆಂಟ್ ನೋಡಿ ಖುಷಿ ಪಟ್ಟಿದ್ದೀವಿ. ಆದರೆ ತಂದೆಗೂ ಮಗನನ್ನ ತಾಯಿಯಂತೆ ನೋಡಿಕೊಳ್ಳುವುದು ಗೊತ್ತು. ಅದು ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಅನಾವರಣವಾಗಿದೆ. ಒಬ್ಬ ಕಾಲಿಲ್ಲದ ಮಗನನ್ನು ಸಿಕ್ಕಾಪಟ್ಟೆ ತಾಳ್ಮೆಯಿಂದ, ಎಲ್ಲದನ್ನು ಕೊಟ್ಟು, ಮಗನಿಗೆ ಸುಂದರ ಪ್ರಪಂಚ ತೋರಿಸುವ ಅದ್ಭುತ ಫಿಲೀಂಗ್ ಈ ಸಿನಿಮಾದಲ್ಲಿ ಸಿಗಲಿದೆ.

ಟ್ರೇಲರ್ ರಿಲೀಸ್ ಮಾಡಿರುವ ಚಿತ್ರತಂಡ ಒಂದಷ್ಟು ಭರವಸೆಗಳನ್ನು ಹುಟ್ಟು ಹಾಕಿದೆ. ಅದೇ ಟ್ರೇಲರ್ ನಲ್ಲಿ ತಂದೆ ಮಗನ ಪ್ರೀತಿ ಎದ್ದು ಕಾಣುತ್ತಿದೆ. ನ್ಯೂನತೆ ಇದ್ದರು ಆ ತಂದೆ ಮಗನಿಗೆ ಆಕಾಶವನ್ನೇ ತೋರಿಸುತ್ತಾನೆ. ವೇಶ್ಯವಾಟಿಕೆಯ ಜಾಗಕ್ಕೆ ಹೋಗಬೇಕೆಂದರೂ ತಂದೆ ಹಿಂದು ಮುಂದು ಯೋಚಿಸುವುದಿಲ್ಲ. ಮಗನ ಆಸೆಯನ್ನ ಈಡೇರಿಸಲೇಬೇಕೆಂಬ ಅಪ್ಪನ ಧ್ಯೇಯ, ಆ ಜಾಗಕ್ಕೆ ಹೋಗುವ ದಾರಿ ಯಾವುದು ಎಂಬುದನ್ನು ಹುಡುಕುತ್ತಿರುತ್ತಾನೆ. ಇದು ತಂದೆಗೆ ಮಗನ ಮೇಲಿನ ಮಮಕಾತ, ಪ್ರೀತಿ ವಾತ್ಸಲ್ಯವನ್ನು ತೋರಿಸುತ್ತಿದೆ.

ವೀಲ್ ಚೇರ್ ರೋಮಿಯೋ ಸಿನಿಮಾ ಕಣ್ಣಿಲ್ಲದ ವೇಶ್ಯೆ ಮತ್ತು ಕಾಲಿಲ್ಲದ ಹುಡುಗನ ಮಧ್ಯೆ ಶುರುವಾಗುವ ಪ್ರೀತಿ ಪ್ರೇಮದ ಕಥೆಯನ್ನು ಹೊಂದಿದೆ. ಇದೇ ತಿಂಗಳ 27 ಕ್ಕೆ ತೆರೆಗೆ ಬರುತ್ತಿದ್ದು, ಮಯೂರಿ ನಾಯಕಿಯಾಗಿ, ರಾಮ್ ಚೇತನ್ ನಾಯಕನಾಗಿ ನಟಿಸುತ್ತಿದ್ದಾರೆ. ನಟರಾಜ್ ಸಿನಿಮಾ ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ಟ್ರೇಲರ್ ಮೂಲಕವೇ ಗಮನ ಸೆಳೆಯುತ್ತಿದ್ದಾನೆ ವೀಲ್ ಚೇರ್ ರೋಮಿಯೋ !

ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್  ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada