AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhool Bhulaiyaa 2 Box Office Collection: ಬಾಕ್ಸಾಫೀಸ್​ನಲ್ಲಿ ಮುಂದುವರೆದ ‘ಭೂಲ್ ಭುಲಯ್ಯ 2’ ಓಟ; ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?

Bhool Bhulaiyaa 2 Movie | Kartik Aaryan: ‘ದಿ ಕಾಶ್ಮೀರ್ ಫೈಲ್ಸ್’ ಹೊರತುಪಡಿಸಿ ಮತ್ಯಾವ ಬಾಲಿವುಡ್ ಚಿತ್ರಗಳೂ ಬಾಕ್ಸಾಫೀಸ್​ನಲ್ಲಿ ಕಮಾಯಿ ಮಾಡಿರಲಿಲ್ಲ. ಸ್ಟಾರ್ ಚಿತ್ರಗಳಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಮಾತ್ರ ಗೆದ್ದಿತ್ತು. ಇದೀಗ ‘ಭೂಲ್ ಭುಲಯ್ಯ 2’ ವಿಮರ್ಶಕರ ಜತೆಗೆ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಪರಿಣಾಮವಾಗಿ ಚಿತ್ರದ ಕಲೆಕ್ಷನ್​ನಲ್ಲಿ ಏರಿಕೆಯಾಗುತ್ತಿದೆ.

Bhool Bhulaiyaa 2 Box Office Collection: ಬಾಕ್ಸಾಫೀಸ್​ನಲ್ಲಿ ಮುಂದುವರೆದ ‘ಭೂಲ್ ಭುಲಯ್ಯ 2’ ಓಟ; ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?
‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್​
TV9 Web
| Edited By: |

Updated on: May 24, 2022 | 12:13 PM

Share

ಬಾಲಿವುಡ್ (Bollywood) ಚಿತ್ರರಂಗ ಇತ್ತೀಚೆಗೆ ಸಾಲು ಸಾಲು ಸೋಲಿನಿಂದ ಕಂಗೆಟ್ಟಿತ್ತು. ಯಾವುದೇ ನಿರೀಕ್ಷಿತ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಕಮಾಯಿ ಮಾಡದೇ ಚಿತ್ರರಂಗದ ಆತಂಕ ಹೆಚ್ಚಾಗುತ್ತಲೇ ಇತ್ತು. ಸ್ಟಾರ್ ನಟರ ಚಿತ್ರಗಳು ಕೂಡ ಜನರ ಮನಗೆಲ್ಲುವಲ್ಲಿ ಸೋತಿದ್ದವು. ಕೆಲವು ತಾರೆಯರ ಚಿತ್ರಗಳಿಗೆ ಅಭಿಮಾನಿಗಳಿಂದಲೇ ನೆಗೆಟಿವ್ ವಿಮರ್ಶೆ ಬಂತು. ಈ ನಡುವೆ ದಕ್ಷಿಣದ ಚಿತ್ರಗಳು ಬಾಲಿವುಡ್​ ಗಲ್ಲಾಪೆಟ್ಟಿಗೆಯನ್ನು ದೋಚಿದವು. ಒಟ್ಟಾರೆ 2022ರಲ್ಲಿ ಗೆಲುವು ಕಾಣದೇ ನಿರಾಶೆಗೊಂಡಿದ್ದ ಹಿಂದಿ ಚಿತ್ರರಂಗಕ್ಕೆ ‘ಭೂಲ್ ಭುಲಯ್ಯ 2’ (Bhool Bhulaiyaa 2) ತುಸು ಚೇತರಿಕೆ ನೀಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ಹೊರತುಪಡಿಸಿ ಮತ್ಯಾವ ಬಾಲಿವುಡ್ ಚಿತ್ರಗಳೂ ಬಾಕ್ಸಾಫೀಸ್​ನಲ್ಲಿ ಕಮಾಯಿ ಮಾಡಿರಲಿಲ್ಲ. ಸ್ಟಾರ್ ಚಿತ್ರಗಳಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಮಾತ್ರ ಗೆದ್ದಿತ್ತು. ಇದೀಗ ಕಮರ್ಷಿಯಲ್ ಚಿತ್ರವಾದ ‘ಭೂಲ್ ಭುಲಯ್ಯ 2’ ವಿಮರ್ಶಕರ ಜತೆಗೆ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಪರಿಣಾಮವಾಗಿ ಚಿತ್ರದ ಕಲೆಕ್ಷನ್​ನಲ್ಲಿ ಏರಿಕೆಯಾಗುತ್ತಿದೆ.

ಹಾರರ್ ಕಾಮಿಡಿ ಜಾನರ್​ನ ಚಿತ್ರವಾಗಿರುವ ‘ಭೂಲ್ ಭುಲಯ್ಯ 2’ನಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾನಿ ಮೊದಲಾದವರು ನಟಿಸಿದ್ದಾರೆ. ಕಂಗನಾ ರಣಾವತ್ ನಟನೆಯ ‘ಧಾಕಡ್​’ ಇದೇ ಚಿತ್ರದೊಂದಿಗೆ ತೆರೆಕಂಡಿದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದೆ. ಆ ಚಿತ್ರದ ಸ್ಕ್ರೀನ್​ಗಳನ್ನು ‘ಭೂಲ್ ಭುಲಯ್ಯ 2’ ಪಡೆದುಕೊಳ್ಳುತ್ತಿದೆ. ಬಾಯ್ಮಾತಿನ ಪ್ರಚಾರವೂ ಸಿಕ್ಕಿದ್ದು, ಮನರಂಜನೆ ನೀಡುವ ಚಿತ್ರವಾಗಿರುವ ಕಾರಣ ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ
Image
Ragini Dwivedi Birthday: ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ
Image
ಟ್ರೇಲರ್​ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್​ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ
Image
Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು
Image
ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​

ಇದನ್ನೂ ಓದಿ: ಹೀನಾಯ ಸೋಲು ಕಂಡ ಕಂಗನಾ ರಣಾವತ್; 50 ಲಕ್ಷ ರೂ. ದಾಟಲಿಲ್ಲ ‘ಧಾಕಡ್’ ಸಿನಿಮಾ ಗಳಿಕೆ

ನಾಲ್ಕನೇ ದಿನ ‘ಭೂಲ್ ಭುಲಯ್ಯ 2’ ಗಳಿಸಿದ್ದೆಷ್ಟು?

ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್​ ಚಿತ್ರದ ಗಳಿಕೆಯ ವಿವರ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಚಿತ್ರವು ಇದುವರೆಗೆ ಒಟ್ಟಾರೆ 66.71 ಕೋಟಿ ರೂ ಬಾಚಿಕೊಂಡಿದೆ. ರಿಲೀಸ್ ಆದ ಮೊದಲ ದಿನ ಅಂದರೆ ಶುಕ್ರವಾರ 14.11 ಕೋಟಿ ರೂ ಗಳಿಸಿದ್ದ ಚಿತ್ರವು, ಶನಿವಾರ 18.34 ಕೋಟಿ ರೂ, ಭಾನುವಾರ 23.51 ಕೋಟಿ ರೂ ಕಲೆಕ್ಷನ್ ಮಾಡಿತ್ತು.

ನಿನ್ನೆ ಅಂದರೆ ಸೋಮವಾರದಂದು 10.75 ಕೋಟಿ ರೂಗಳನ್ನು ಚಿತ್ರ ಗಳಿಸಿದೆ. ಯಾವುದೇ ರಜಾ ದಿನಗಳಿಲ್ಲದೇ ‘ಭೂಲ್ ಭುಲಯ್ಯ 2’ ಅಷ್ಟು ಗಳಿಸಿರುವುದು ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ. ಹೀಗಾಗಿ ಮೊದಲ ವಾರದಲ್ಲಿ ಸುಮಾರು 88 ಕೋಟಿ ರೂಗಳನ್ನು ಗಳಿಸುವ ನಿರೀಕ್ಷೆ ಇದೆ.

2022ರಲ್ಲಿ ರಿಲೀಸ್ ಆದ ಸಿನಿಮಾಗಳ ಪೈಕಿ ಮೊದಲ ಸೋಮವಾರದಲ್ಲಿ ಅತ್ಯಂತ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ‘ಭೂಲ್ ಭುಲಯ್ಯ 2’ ಎರಡನೇ ಸ್ಥಾನ ಪಡೆದಿದೆ. ಚಿತ್ರವು ಸೋಮವಾರ 10.75 ಕೋಟಿ ರೂ ಕಲೆಕ್ಷನ್ ಮಾಡಿದೆ. ‘ದಿ ಕಾಶ್ಮೀರ್ ಫೈಲ್ಸ್’ 15.05 ಕೋಟಿ ರೂ ಗಳಿಸಿದ್ದರೆ, ‘ಗಂಗೂಬಾಯಿ ಕಾಠಿಯಾವಾಡಿ’ 8.19 ಕೋಟಿ ರೂ ಗಳಿಸಿತ್ತು.

ಅನೀಸ್ ಬಜ್ಮಿ ನಿರ್ದೇಶನದ ‘ಭೂಲ್ ಭುಲಯ್ಯ 2’ 2007ರಲ್ಲಿ ತೆರೆಕಂಡಿದ್ದ ‘ಭೂಲ್ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಿಯದರ್ಶನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ