AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​

ಕಾರ್ತಿಕ್ ಆರ್ಯನ್ ಅವರು ಈ ಮೊದಲು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಹಿಟ್ ಸಿಕ್ಕಿರಲಿಲ್ಲ. ಇದು ಅವರ ಕರಿಯರ್​ನಲ್ಲೇ ದೊಡ್ಡ ಓಪನಿಂಗ್ ಎಂದು ಬಾಲಿವುಡ್ ಪಂಡಿತರು ಲೆಕ್ಕಾಚಾರ ನೀಡಿದ್ದಾರೆ.

ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​
ಕಾರ್ತಿಕ್ ಆರ್ಯನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 23, 2022 | 1:49 PM

ಬಾಲಿವುಡ್​ಗೆ (Bollywood) ಕೊನೆಗೂ ಚೇತರಿಸಿಕೊಳ್ಳುವ ಕಾಲ ಬಂದಿದೆ. ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಗಲ್ಲಾ (Bhool Bhulaiyaa 2) ಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. ಮೂರೇ ದಿನಕ್ಕೆ ಈ ಸಿನಿಮಾ ಅರ್ಧಶತಕ ಬಾರಿಸಿದೆ. ಈ ಮೂಲಕ ಅನಾಯಾಸವಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ. ಈ ಸಿನಿಮಾದಿಂದ ಮಂಕಾಗಿದ್ದ ಬಾಲಿವುಡ್​ಗೆ ಹೊಸ ಚೇತರಿಕೆ ಸಿಕ್ಕಂತೆ ಆಗಿದೆ. ಈ ಸಿನಿಮಾ ಸೋಮವಾರದ (ಮೇ 23) ಪರೀಕ್ಷೆಯಲ್ಲಿ ಪಾಸ್ ಆಗಲಿದೆಯೇ ಎಂಬುದು ಸದ್ಯದ ಕುತೂಹಲ.

2007ರಲ್ಲಿ ‘ಭೂಲ್​ ಭುಲಯ್ಯ’ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಈ ಚಿತ್ರವನ್ನು ಟೀ-ಸೀರಿಸ್ ನಿರ್ಮಾಣ ಮಾಡಿತ್ತು. ಈಗ ‘ಭೂಲ್​ ಭುಲಯ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದೆ ಟೀ-ಸೀರಿಸ್. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಬಾಲಿವುಡ್ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ
Image
‘ಗಡಂಗ್​ ರಕ್ಕಮ್ಮ’ ಎಂಟ್ರಿಗೆ ದಿನಾಂಕ ಫಿಕ್ಸ್​; ಹೊಸ ಮಾಹಿತಿ ಹಂಚಿಕೊಂಡ ಸುದೀಪ್
Image
ಬ್ರೇಕಪ್​ ಗಾಸಿಪ್​ಗೆ ಕಿವಿಗೊಡದೇ ‘ಭೂಲ್​ ಭುಲಯ್ಯ 2’ ಪ್ರಮೋಷನ್​ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ
Image
Kiara Advani: ಬೋಲ್ಡ್ ವಿಡಿಯೋ ಹಂಚಿಕೊಂಡ ಕಿಯಾರಾ; ಸಮಂತಾ ರಿಯಾಕ್ಷನ್ ಏನಿತ್ತು?
Image
Kartik Aaryan: ಲ್ಯಾಂಬೋರ್ಗಿನಿಯಲ್ಲಿ ತೆರಳಿ ರಸ್ತೆ ಬದಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

ಇದನ್ನೂ ಓದಿ: ಬ್ರೇಕಪ್​ ಗಾಸಿಪ್​ಗೆ ಕಿವಿಗೊಡದೇ ‘ಭೂಲ್​ ಭುಲಯ್ಯ 2’ ಪ್ರಮೋಷನ್​ನಲ್ಲಿ ಬ್ಯುಸಿ ಆದ ಕಿಯಾರಾ ಅಡ್ವಾಣಿ

ಮೇ 20ರಂದು ಈ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿತು. ಶುಕ್ರವಾರ (ಮೇ 20) 14.11 ಕೋಟಿ ರೂಪಾಯಿ, ಶನಿವಾರ (ಮೇ 21) 18.34 ಕೋಟಿ ರೂಪಾಯಿ ಹಾಗೂ ಭಾನುವಾರ (ಮೇ 22) 23.51 ಕೋಟಿ ರೂಪಾಯಿಯನ್ನು ಸಿನಿಮಾ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 55.96 ಕೋಟಿ ರೂಪಾಯಿ ಆಗಿದೆ.

ಕಾರ್ತಿಕ್ ಆರ್ಯನ್ ಅವರು ಈ ಮೊದಲು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಹಿಟ್ ಸಿಕ್ಕಿರಲಿಲ್ಲ. ಇದು ಅವರ ಕರಿಯರ್​ನಲ್ಲೇ ದೊಡ್ಡ ಓಪನಿಂಗ್ ಎಂದು ಬಾಲಿವುಡ್ ಪಂಡಿತರು ಲೆಕ್ಕಾಚಾರ ನೀಡಿದ್ದಾರೆ. ಈ ಕಾರಣದಿಂದಲೂ ಈ ಸಿನಿಮಾ ಅವರಿಗೆ ತುಂಬಾನೇ ವಿಶೇಷವಾಗಿದೆ.

ಕಾರ್ತಿಕ್ ಆರ್ಯನ್​ಗೆ ನೀಡಿದ್ದ ಆಫರ್​ಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಆರೋಪ ಈ ಮೊದಲು ಕೇಳಿ ಬಂದಿತ್ತು. ಇದರಿಂದ ಅವರ ವೃತ್ತಿ ಜೀವನ ಕೊನೆಯಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಅಂಥವರಿಗೆ ಕಾರ್ತಿಕ್ ಆರ್ಯನ್ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ. ಈ ಚಿತ್ರ 200 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಬಾಲಿವುಡ್ ಪಂಡಿತರು ಊಹಿಸಿದ್ದಾರೆ. ಇನ್ನು, ‘ಶೇರ್ಷಾ’ ಮೂಲಕ ಗೆಲುವಿನ ರುಚಿ ಕಂಡಿದ್ದ ಕಿಯಾರಾ ಅಡ್ವಾಣಿಗೆ ಈ ಸಿನಿಮಾ ಮೂಲಕ ಮತ್ತೊಂದು ಗೆಲುವು ಸಿಕ್ಕಂತೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್