AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiara Advani: ಬೋಲ್ಡ್ ವಿಡಿಯೋ ಹಂಚಿಕೊಂಡ ಕಿಯಾರಾ; ಸಮಂತಾ ರಿಯಾಕ್ಷನ್ ಏನಿತ್ತು?

Samantha: ಬಾಲಿವುಡ್​​ ಬೆಡಗಿ ಕಿಯಾರಾ ಅಡ್ವಾನಿ ಸದ್ಯ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ನಟಿ, ಇತ್ತೀಚೆಗೆ ಬೋಲ್ಡ್ ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ.

Kiara Advani: ಬೋಲ್ಡ್ ವಿಡಿಯೋ ಹಂಚಿಕೊಂಡ ಕಿಯಾರಾ; ಸಮಂತಾ ರಿಯಾಕ್ಷನ್ ಏನಿತ್ತು?
ಸಮಂತಾ, ಕಿಯಾರಾ ಅಡ್ವಾನಿ
TV9 Web
| Edited By: |

Updated on: Feb 08, 2022 | 4:17 PM

Share

ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾನಿ (Kiara Advani) ಪ್ರಸ್ತುತ ಬಹುಬೇಡಿಕೆಯ ನಟಿ. ದೊಡ್ಡ ದೊಡ್ಡ ಪ್ರಾಜೆಕ್ಟ್​​ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಲ್ಲಿಯೂ ಕಿಯಾರಾ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೋಲ್ಡ್ ಡ್ರೆಸ್​ನಲ್ಲಿ ಮಿಂಚುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದೀಗ ಎಲ್ಲೆಡೆ ವೈರಲ್ ಆಗಿದೆ. ಬ್ಯಾಕ್​ಲೆಸ್ ಡ್ರೆಸ್ ಧರಿಸಿದ್ದ ಕಿಯಾರಾ, ಮ್ಯಾಗಜೀನ್ ಕವರ್ ಒಂದಕ್ಕೆ ಫೋಟೋಶೂಟ್ (Photo Shoot) ಮಾಡಿಸಿದ್ದರು. ಫೋಟೋ ಕ್ಲಿಕ್ಕಿಸುವ ವೇಳೆ ವಿಡಿಯೋವನ್ನೂ ಸೆರೆಹಿಡಿಯಲಾಗಿತ್ತು. ಫೋಟೋಗೆ ಪೋಸ್ ನೀಡುತ್ತಿರುವ ಮಾದರಿಯ ಈ ವಿಡಿಯೋವನ್ನು ಇದೀಗ ಸ್ವತಃ ನಟಿಯೇ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅವರ ಬೋಲ್ಡ್ ಲುಕ್​ಗೆ ಅಭಿಮಾನಿಗಳು ಮಾರುಹೋಗಿದ್ದಾರೆ. ವಿಶೇಷವೆಂದರೆ ಈ ವಿಡಿಯೋ ಖ್ಯಾತ ಸೆಲೆಬ್ರಿಟಿಗಳ (Celebrity) ಗಮನವನ್ನೂ ಸೆಳೆದಿದೆ.

ಕೆ.ಎಲ್.ರಾಹುಲ್ ಅವರ ಸ್ನೇಹಿತೆ ಆಥಿಯಾ ಶೆಟ್ಟಿ, ಜಾಹ್ನವಿ ಕಪೂರ್ ಮೊದಲಾದವರು ಕಾಮೆಂಟ್​ಗಳ ಮೂಲಕ ಕಿಯಾರಾಗೆ ಶಹಬ್ಬಾಸ್ ಎಂದಿದ್ದಾರೆ. ಖ್ಯಾತ ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಕೂಡ ಕಿಯಾರಾ ಸ್ಟೈಲ್​ಗೆ ಫಿದಾ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವೆಂದರೆ ಬಹುಭಾಷಾ ನಟಿ ಸಮಂತಾ ಕೂಡ ಕಿಯಾರಾ ಅಡ್ವಾನಿ ಲುಕ್​ಗೆ ಫಿದಾ ಆಗಿದ್ದಾರೆ. ‘ಫ್ಯೂ.. ನೀವು ಮತ್ತು ಡ್ರೆಸ್’ ಎಂದು ಕಾಮೆಂಟ್ ಮಾಡಿದ್ದಾರೆ. ಫ್ಯೂ ಎನ್ನುವುದು ಹಾಟ್ ಆಗಿ ಕಾಣಿಸುತ್ತಿದ್ದೀರಿ ಎಂದು ತಿಳಿಸಲು ಬಳಸುವ ಪದ. ಹೀಗೆ ಸಮಂತಾ ತಮ್ಮ ಅಭಿಪ್ರಾಯ ಹಂಚಿಕೊಂಡು ಕಿಯಾರಾಗೆ ಶಹಬ್ಬಾಸ್ ಎಂದಿದ್ದಾರೆ. ಹಲವು ಅಭಿಮಾನಿಗಳು ಸಮಂತಾ ಜತೆ ದನಿಗೂಡಿಸಿದ್ದಾರೆ.

ಕಿಯಾರಾ ಹಂಚಿಕೊಂಡ ವಿಡಿಯೋ ಇಲ್ಲಿದೆ:

View this post on Instagram

A post shared by KIARA (@kiaraaliaadvani)

ಕಿಯಾರಾ ಹಂಚಿಕೊಂಡಿರುವ ವಿಡಿಯೋ ‘ಬಜಾರ್​’ಗಾಗಿ ಕಿಯಾರಾ ಫೋಟೋ ಶೂಟ್ ಮಾಡಿಸಿದ ಸಂದರ್ಭದ್ದಾಗಿದೆ. ಈ ಸಂಸ್ಥೆ ಕಿಯಾರಾ ಚಿತ್ರಗಳನ್ನು ಹಂಚಿಕೊಂಡಿದೆ. ಆ ಚಿತ್ರಗಳು ಇಲ್ಲಿವೆ.

ಚಿತ್ರಗಳ ವಿಷಯಕ್ಕೆ ಬಂದರೆ ಕಿಯಾರಾ ಅಡ್ವಾನಿ ನಟಿಸಿದ್ದ ‘ಶೇರ್​ಷಾ’ ಕಳೆದ ವರ್ಷದ ಅತ್ಯಂತ ದೊಡ್ಡ ಬಾಲಿವುಡ್ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಅಮೆಜಾನ್ ಪ್ರೈಮ್​ನಲ್ಲಿ ಈ ಚಿತ್ರ ತೆರೆ ಕಂಡಿತ್ತು. ಪ್ರಸ್ತುತ ಕಿಯಾರಾ ‘ಭೂಲ್ ಭುಲಯ್ಯಾ 2’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜತೆ ಬಣ್ಣ ಹಚ್ಚುತ್ತಿದ್ದಾರೆ. ವರುಣ್ ಧವನ್ ಜತೆ ‘ಜುಗ್ ಜುಗ್ ಜೀಯೊ’ ಚಿತ್ರದಲ್ಲೂ ಕಿಯಾರಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ನೀತು ಕಪೂರ್ ಹಾಗೂ ಅನಿಲ್ ಕಪೂರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಈ ವರ್ಷ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:

ಮಾಜಿ ಪತ್ನಿಯ ಮದುವೆ ಬಟ್ಟೆಯನ್ನು ಗರ್ಲ್ ಫ್ರೆಂಡ್ ಗೆ ನೀಡಿದ ಪತಿ… ಕೊನೆಗೆ ಮಾಜಿ ಪತ್ನಿ ಮಾಡಿದ್ದೇನು ಗೊತ್ತಾ?

Kajal Aggarwal: ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವ ಕಾಜಲ್; ಈಗೆಲ್ಲಿದ್ದಾರೆ? ಫೋಟೋ ಸಮೇತ ವಿವರಿಸಿದ ನಟಿ

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ