ಮಾಜಿ ಪತ್ನಿಯ ಮದುವೆ ಬಟ್ಟೆಯನ್ನು ಗರ್ಲ್ ಫ್ರೆಂಡ್ ಗೆ ನೀಡಿದ ಪತಿ… ಕೊನೆಗೆ ಮಾಜಿ ಪತ್ನಿ ಮಾಡಿದ್ದೇನು ಗೊತ್ತಾ?

ತನ್ನ ಪತಿ ನನ್ನ ಬಟ್ಟೆ ಕದ್ದು ಆತನ ಗೆಳತಿಗೆ ನೀಡಿದ್ದಾನೆ ಎಂದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆಯೊಂದು ನಡೆದಿದೆ.  ತನ್ನ ಮದುವೆ  ಡ್ರೆಸ್ ನ್ನು ಪತಿ  ಆತನ ಲವರ್ ಗೆ ನೀಡಿರುವ ಕಾರಣ ಪೊಲೀಸರಿಗೆ ದೂರನ್ನು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ .  ತನ್ನ ಡ್ರೆಸ್ ನ್ನು ಕದ್ದು ಪತಿ ತನ್ನ ಗರ್ಲ್ ಫ್ರೆಂಡ್ ಗೆ ನೀಡಿದ್ದಾನೆ ಎಂದು ಆರೋಪಿಸಿದ್ದು, ವಿಚಿತ್ರವಾದರು ಇದು ನಿಜ, ಮಹಿಳೆ ತನ್ನ ಪತಿಯ ವಿರುದ್ದ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿದ್ದಾಳೆ. ಈ ಬಗ್ಗೆ ಫೋಸ್ಟ್  ಕೂಡ ಭಾರಿ ಸುದ್ದಿಯನ್ನು ಮಾಡುತ್ತಿದೆ. 

ಮಾಜಿ ಪತ್ನಿಯ ಮದುವೆ ಬಟ್ಟೆಯನ್ನು ಗರ್ಲ್ ಫ್ರೆಂಡ್ ಗೆ ನೀಡಿದ ಪತಿ... ಕೊನೆಗೆ ಮಾಜಿ ಪತ್ನಿ ಮಾಡಿದ್ದೇನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 08, 2022 | 5:59 PM

ಜಗತ್ತಿನಲ್ಲಿ ವಿಚಿತ್ರವಾದ ಘಟನೆಗಳನ್ನು ನಡೆದಿರುವುದನ್ನು ನಾವು ಕಾಣುತ್ತೀರಬಹುದು. ಜಗತ್ತಿನ ಮುಂದೆ ಎಲ್ಲವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಆದರೆ ಅವುಗಳು ಎಲ್ಲ ನಿಜವಾಗಿರಬೇಕೆಂದಿಲ್ಲ. ದಾಂಪತ್ಯ ಜೀವನದಲ್ಲೂ ಕೆಲವೊಂದು ಇಂತಹ ವಿಚಿತ್ರ ಘಟನೆಗಳು ನಡೆಯುತ್ತದೆ. ಹೌದು ವಿದೇಶಿ ಮಹಿಳೆಯೊಬ್ಬಳು ತನ್ನ ಪತಿ ನನ್ನ ಬಟ್ಟೆ ಕದ್ದು ಆತನ ಗೆಳತಿಗೆ ನೀಡಿದ್ದಾನೆ ಎಂದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆಯೊಂದು ನಡೆದಿದೆ.  ತನ್ನ ಮದುವೆ  ಡ್ರೆಸ್ ನ್ನು ಪತಿ  ಆತನ ಲವರ್ ಗೆ ನೀಡಿರುವ ಕಾರಣ ಪೊಲೀಸರಿಗೆ ದೂರನ್ನು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ .  ತನ್ನ ಡ್ರೆಸ್ ನ್ನು ಕದ್ದು ಪತಿ ತನ್ನ ಗರ್ಲ್ ಫ್ರೆಂಡ್ ಗೆ ನೀಡಿದ್ದಾನೆ ಆತನಿಗೆ ಶಿಕ್ಷೆಯಾಗಬೇಕು ಆತನನ್ನು ತಕ್ಷಣ ಬಂಧಿಸಿ ಎಂದು ಆಗ್ರಹ ಮಾಡಿದ್ದಾಳೆ.  ತನ್ನ ಪತಿಯ ವಿರುದ್ದ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿದ್ದಾಳೆ. ಈ ಬಗ್ಗೆ  ಫೋಸ್ಟ್  ಕೂಡ ಭಾರಿ ಸುದ್ದಿಯನ್ನು ಮಾಡುತ್ತಿದೆ.

ಮೇರಿ ಎಂಬ ಮಹಿಳೆ ಆಡನ್ ಎಂಬ ವ್ಯಕ್ತಿಯನ್ನು ಮದುವೆಯಾಗುತ್ತಾರೆ. ಇದರ ಮಧ್ಯೆ ಅವನಿಗೆ ಇನ್ನೊಂದು ಮಹಿಳೆಯ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು. ಈ ಬಗ್ಗೆ  ಆಡನ್ ಪತ್ನಿ ಮೇರಿಗೆ ಕೂಡ ಅಸಮಾಧನವನ್ನು ಹೊಂದಿದ್ದಳು. ಅದಕ್ಕಾಗಿ ಆತನಿಗೆ ವಿಚ್ಛೇದವನ್ನು ನೀಡಿ ಆತನಿಂದ ದೂರವಾಗುತ್ತಾಳೆ. ಆತನ ಮನೆಯಿಂದಲ್ಲೂ ದೂರು ಇರುತ್ತಾಳೆ, ಆದರೆ ಆಕೆಯ ವಸ್ತುಗಳು ಆತನ ಮನೆಯಲ್ಲಿ ಇತ್ತು. ವಿಚ್ಛೇದನೆ ಆಗುವ ಮೊದಲು ಆಕೆಯು ಮದುವೆಗೆ ಹಾಕಿಕೊಂಡ  ಡ್ರೆಸ್ ಕಳ್ಳವು ಆಗಿತ್ತು, ಈ ಬಗ್ಗೆ ಅವಳು ಅಷ್ಟೊಂದು ಯೋಚನೆಯನ್ನು ಮಾಡಿರಲಿಲ್ಲ. ಆದರೆ ಆಡನ್ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಂಡಾಗ ಮೇರಿಯ ಬಟ್ಟೆಯನ್ನು ಆಡನ್ ಪ್ರೀತಿಸಿದ  ಹುಡುಗಿ ಹಾಕಿಕೊಂಡದನ್ನು ಕಂಡು ಕೆಂಡಮಂಡಲವಾಗಿದ್ದಾಳೆ.

ಆಡನ್ ತನ್ನ ಬಟ್ಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ ಎಂದು ಆರೋಪಿಸಿದಳು. ಮೇರಿ ಸ್ನೇಹಿತೆ ಆಡನ್ ಮದುವೆಗೆ ಹೋಗಿದ್ದಾಗ ಈ ಬಗ್ಗೆ ಒಂದು ಫೋಟೋವನ್ನು ತೆಗೆದು ಮೇರಿ ಕಳುಹಿಸಿದ್ದಾಳೆ. ಇದನ್ನು ನೋಡಿದ ಮೇರಿ ಮದುವೆ ಹಾಲ್ ಗೆ ಪೊಲೀಸನ್ನು ಕರೆದುಕೊಂಡು ಹೋಗಿ ಆಡನ್ ಬಂಧಿಸುವಂತೆ ತಿಳಿಸಿದ್ದಾಳೆ. ಇದೀಗ ಈ ಡ್ರೇಸ್ ಪೊಲೀಸ್   ಅಂಗಳದಲ್ಲಿ ನಿಂತಿದೆ.

Published On - 3:50 pm, Tue, 8 February 22