Updated on: Feb 08, 2022 | 5:10 PM
ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನದ ಆಹಾರದಲ್ಲಿ ಬೀನ್ಸ್ಗಳನ್ನು ಬಳಸುವುದು ಉತ್ತಮ. ದೇಹಕ್ಕೆ ಬೇಕಾದ ಕಾರ್ಬೋಹೈಡ್ರೆಟ್ಗಳ ಜತೆಗೆ ಪೋಷಕಾಂಶವನ್ನು ನೀಡುತ್ತದೆ. ಅಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಮಧುಮೇಹ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸೇಬು ಸಹಾಯಕವಾಗಿದೆ. ಇದರಲ್ಲಿರುವ ಫೈಬರ್, ವಿಟಮಿನ್ ಸಿ ಅಂಶಗಳು ದೇಹವನ್ನು ಸುಸ್ಥಿತಿಯಲ್ಲಿಡುವಂತೆ ಮಾಡುತ್ತದೆ.
ಯಥೇಚ್ಛವಾದ ಫೈಬರ್,ವಿಟಮಿನ್ ಅಂಶಗಳನ್ನು ಹೊಂದಿರುವ ಬಾದಾಮಿ ದೇಹಕ್ಕೆ ಬೇಕಾದ ಇನ್ಸುಲಿನ್ ಪ್ರಮಾಣವನ್ನು ಒದಗಿಸುತ್ತದೆ. ಹೀಗಾಗಿ ಮಧುಮೇಹ ನಿಯಂತ್ರಣಕ್ಕೆ ಬಾದಾಮಿ ನೆರವಾಗುತ್ತದೆ.
ಸೊಪ್ಪು ದೇಹಕ್ಕೆ ಬೇಕಾದ ಮ್ಯಾಗ್ನಿಶಿಯಂ ಅಂಶಗಳನ್ನು ಪೂರೈಸುತ್ತದೆ. ಇದರ ಜತೆಗೆ ಮಧುಮೇಹವನ್ನು ನಿಯಂತ್ರದಲ್ಲಿಡುವಂತೆ ಮಾಡುತ್ತದೆ.
ಚಿಯಾ ಬೀಜಗಳಲ್ಲಿರುವ ಸಮೃದ್ಧವಾದ ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳು ಮಧುಮೇಹಿಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಟೈಪ್ 2 ಡಯಾಬಿಟೀಸ್ಗೆ ಅರಿಶಿನ ಉತ್ತಮ ಪರಿಹಾರವಾಗಿದೆ. ಅರಿಶಿನ ಬಳಕೆಯಿಂದ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರುತ್ತದೆ.
ಓಟ್ಸ್ ಕೇವಲ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಮಧುಮೇಹಿಗಳಿಗೂ ಉತ್ತಮ ಆಹಾರವಾಗಿದೆ. ಪ್ರತಿದಿನ ಬೆಳಗ್ಗೆ ಓಟ್ಸ್ ಸೇವನೆಯಿಂದ ದೇಹದ ಅತಿಯಾದ ತೂಕವೂ ಇಳಿಕೆಯಾಗುತ್ತದೆ,
ನೇರಳೆ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಸಮಸ್ಥಿತಿಗೆ ತಲುಪಿ ಮಧುಮೇಹಿಗಳನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ. ವಿಟಮಿನ್ ಸಿ, ಫೈಬರ್ ಅಂಶಗಳನ್ನು ಒಳಗೊಂಡ ನೇರಳೆ ಹಣ್ಣುಗಳು ಚಯಾಪಯಕ್ರಿಯೆಗೂ ನೆರವಾಗುತ್ತದೆ