Updated on: Feb 08, 2022 | 5:49 PM
ದೇಹದ ಸರ್ವಾಂಗೀಣ ಬೆಳವಣಿಗೆಗೆ ವಿಟಮಿನ್ ಡಿ ಅಂಶ ಅವಶ್ಯಕವಾಗಿದೆ. ಎಲುಬುಗಳನ್ನು ಬಲಗೊಳಿಸುವುದರಿಂದ ಹಿಡಿದು ಚರ್ಮರೋಗವನ್ನೂ ತಡೆಯುವ ಕ್ಯಾಲ್ಸಿಯಂ ಹಾಗೂ ಇನ್ನಿತರ ಗುಣಗಳನ್ನು ಹೊಂದಿದೆ. ವಿಟಮಿನ್ ಡಿ ಗಳ ಕೊರತೆಯಾದರೆ ನಿಮಗೆ ಈ ಲಕ್ಷಣಗಳು ಕಂಡುಬರುತ್ತದೆ.
ವಿಟಮಿನ್ ಡಿ ಅಂಶ ದೇಹದಲ್ಲಿ ಕೊರತೆಯಾದರೆ ರುಚಿ ಮತ್ತು ವಾಸನೆಯ ನಷ್ಟವಾಗುತ್ತದೆ. ಈ ಬಗ್ಗೆ 2020ರಲ್ಲಿ ನಡೆದ ಅಧ್ಯಯನದಲ್ಲಿ ಸಾಬೀತಾಗಿದೆ.
ದೇಹದಲ್ಲಿ ವಿಟಮಿನ್ ಕೊರತೆಯಾದರೆ ಶೇ.39ರಷ್ಟು ಜನರು ವಯಸ್ಸಾದಂತೆ ರುಚಿ ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಮುಖ್ಯವಾಗಿ ದೇಹಕ್ಕೆ ವಿಟಮಿನ್ ಡಿ ಅಂಶವು ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಅದರ ಜತೆಗೆ ಸೋಯಾಬೀನ್, ಮೀನು, ಸೊಪ್ಪುಗಳಂತಹ ಆಹಾರ ಪದಾರ್ಥಗಳಿಂದಲೂ ಪಡೆಯಬಹುದಾಗಿದೆ.
70 ವರ್ಷದೊಳಗಿನವರಿಗೆ 700 IUಗಳಷ್ಟು ಹಾಗೂ 70 ವರ್ಷ ಮೇಲ್ಪಟ್ಟವರು 800IUಗಳಷ್ಟು ವಿಟಮಿನ್ ಡಿಯನ್ನು ದೇಹಕ್ಕೆ ಪೂರೈಸಬೇಕು. ಆಗ ಮಾತ್ರ ದೇಹ ಆರೋಗ್ಯವಾಗಿರಲು ಸಾಧ್ಯ.