Kajal Aggarwal: ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವ ಕಾಜಲ್; ಈಗೆಲ್ಲಿದ್ದಾರೆ? ಫೋಟೋ ಸಮೇತ ವಿವರಿಸಿದ ನಟಿ
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಸದ್ಯ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ನಟಿ ಈಗ ಎಲ್ಲಿದ್ದಾರೆ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿಗೆ ಕೈತುಂಬಾ ಆಫರ್ಗಳಿತ್ತು. ಇತ್ತೀಚೆಗೆಷ್ಟೇ ಅವರು ತಾಯಿಯಾಗುವುದನ್ನು ಘೋಷಿಸಿದ್ದರು. ಈ ಕಾರಣದಿಂದ ಸದ್ಯ ಚಿತ್ರರಂಗದಿಂದ ಕಾಜಲ್ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ಸಂಪೂರ್ಣವಾಗಿ ಫ್ಯಾಮಿಲಿಯೊಂದಿಗೆ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರಸ್ತುತ ಕಾಜಲ್ ದುಬೈಗೆ ಪ್ರವಾಸ (Dubai Vacation) ಹೋಗಿದ್ದಾರೆ. ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಪತಿಯೊಂದಿಗೆ ಖುಷಿಯಿಂದ ಕಳೆಯುತ್ತಿರುವ ಅವರು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಟಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರೂ ಕೂಡ, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕ ಹೊಂದಿದ್ದಾರೆ. ಸೋಮವಾರ ಕಾಜಲ್ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ತಾವು ತಂಗಿದ್ದ ಹೋಟೆಲ್ನಲ್ಲಿ ಬಿಸಿಲಿಗೆ ಮೈಯೊಡ್ಡಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದರು. ಫೋಟೋದಲ್ಲಿನ ಬೇಬಿ ಬಂಪ್, ಹೋಟೆಲ್ ಎದುರಿರುವ ವಿಶಾಲ ಸಾಗರ ಮೊದಲಾದವುಗಳು ಅಭಿಮಾನಿಗಳ ಮನಸೆಳೆದಿದೆ. ಫೋಟೋವನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದು, ಕಾಜಲ್ಗೆ ಶುಭ ಕೋರಿದ್ದಾರೆ.
ಕಾಜಲ್ ಹಂಚಿಕೊಂಡ ಚಿತ್ರಗಳು ಇಲ್ಲಿವೆ:
View this post on Instagram
ಕಳೆದ ಕೆಲವು ದಿನಗಳ ಹಿಂದೆ ಕಾಜಲ್, ದುಬೈನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸ್ಟೈಲಿಶ್ ಆಗಿ ಪೋಸ್ ನೀಡಿದ್ದರು. ಆ ಚಿತ್ರಗಳು ಕೂಡ ಸಾಕಷ್ಟು ವೈರಲ್ ಆಗಿತ್ತು.
View this post on Instagram
2022ರ ಆರಂಭದಲ್ಲಿ ಕಾಜಲ್ ಅಗರ್ವಾಲ್ ಹಾಗೂ ಅವರ ಪತಿ ಗೌತಮ್ ಕಿಚ್ಲು ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿದ್ದರು. 2022ನ್ನು ವಿಶೇಷ ಉತ್ಸಾಹದೊಂದಿಗೆ ಈರ್ವರೂ ಸ್ವಾಗತಿಸಿದ್ದರು. ಕೆಲ ಕಾಲದಿಂದ ಕಾಜಲ್ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ವಿಚಾರಗಳು ಓಡಾಡುತ್ತಿದ್ದವು. ಒಪ್ಪಿಕೊಂಡಿದ್ದ ಕೆಲವು ಚಿತ್ರಗಳನ್ನು ಅವರು ಕೈಬಿಟ್ಟಿದ್ದರು. ಅಲ್ಲದೇ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ಬೇಗ ಪೂರ್ಣಗೊಳಿಸುವಂತೆ ಅವರು ಕೇಳಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ನಟಿ ಈ ಕುರಿತು ಅಧಿಕೃತವಾಗಿ ತಿಳಿಸಿರಲಿಲ್ಲ. ಅಂತಿಮವಾಗಿ 2022ರ ಆರಂಭದಲ್ಲಿ ತಾಯಿಯಾಗುತ್ತಿರುವ ಕುರಿತು ಕಾಜಲ್ ಅಭಿಮಾನಿಗಳಿಗೆ ತಿಳಿಸಿದ್ದರು.
ಕಾಜಲ್ ಹಾಗೂ ಗೌತಮ್ ಕಿಚ್ಲು 2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದರು. ಪತಿಯೊಂದಿಗೆ ಸಂವಹನ ನಡೆಸಿಯೇ ತಾವು ಚಿತ್ರರಂಗದಲ್ಲಿ ಮುಂದುವರೆಯುತ್ತಿದ್ದೇನೆ ಎಂದು ಕಾಜಲ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಚಿತ್ರಗಳ ವಿಷಯಕ್ಕೆ ಬಂದರೆ ಕಾಜಲ್ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ ನಟಿಸುತ್ತಿರುವ ‘ಆಚಾರ್ಯ’ದಲ್ಲಿ ಕಾಜಲ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಹೇ ಸಿನಾಮಿಕಾ’, ‘ಕರುಂಗಾಪಿಯಮ್’, ‘ಘೋಸ್ಟಿ’, ‘ಉಮಾ’ ಮೊದಲಾದ ಚಿತ್ರಗಳು ಕಾಜಲ್ ಬತ್ತಳಿಕೆಯಲ್ಲಿವೆ.
ಇದನ್ನೂ ಓದಿ:
ರಜನಿಕಾಂತ್ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್; ‘ಬೀಸ್ಟ್’ ಡೈರೆಕ್ಟರ್ ಜತೆ ಕೈ ಜೋಡಿಸಿದ ಸೂಪರ್ ಸ್ಟಾರ್
ಮದುವೆಯ ನಂತರ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿರುವ ಬಿ-ಟೌನ್ನ ಐದು ಜೋಡಿಗಳು; ಇಲ್ಲಿವೆ ಫೋಟೋಗಳು